ಕಲ್ಲಡ್ಕ: ಅಧ್ಯಾಪಕ ಆತ್ಮಹತ್ಯೆ

ಬಂಟ್ವಾಳ, ಮಾ.14: ಕಾಲೇಜು ಅಧ್ಯಾಪಕನೋರ್ವ ತನ್ನ ಮನೆಯಲ್ಲೇ ನೇಣು ಬಿಗಿದು ಆತ್ಮಹತ್ಯೆ ಶರಣಾದ ಘಟನೆ ತಾಲೂಕಿನ ಕಲ್ಲಡ್ಕ ಸಮೀಪದ ಕುಂಟಿಪಾಪು ಎಂಬಲ್ಲಿ ಸೋಮವಾರ ರಾತ್ರಿ ನಡೆದಿದೆ.
ಹರೀಶ್ ಆಚಾರ್ಯ (40)ಆತ್ಮಹತ್ಯೆಗೈದ ಅಧ್ಯಾಪಕ.
ಇವರು ಅವಿವಾಹಿತರಾಗಿದ್ದು, ಈ ಹಿಂದೆ ಇವರ ವಿರುದ್ಧ ಕಾಲೇಜ್‌ನ ವಿದ್ಯಾರ್ಥಿನಿಯೋರ್ವಳು ಲೈಂಗಿಕ ದೌರ್ಜನ್ಯದ ದೂರು ನೀಡಿದ್ದರು. ವಿದ್ಯಾರ್ಥಿನಿಯ ದೂರಿನ ಮೇರೆಗೆ ಪೊಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದ ಬಂಟ್ವಾಳ ಗ್ರಾಮಾಂತರ ಪೊಲೀಸರು ಅವರನ್ನು ಬಂಧಿಸಿದ್ದು, ನಂತರ ಜಾಮೀನಿನ ಮೂಲಕ ಬಿಡುಗಡೆಯಾಗಿದ್ದರು.
ಈ ಪ್ರಕರಣದ ಬಳಿಕ ಮಾನಸಿಕವಾಗಿ ನೊಂದಿದ್ದ ಅವರಿಗೆ ಚಿಕಿತ್ಸೆಯೂ ನೀಡಲಾಗಿತ್ತು. ಇವರು ಸಹೋದರನೊಂದಿಗೆ ಮನೆಯಲ್ಲಿ ಇಬ್ಬರೇ ವಾಸವಾಗಿದ್ದು, ಸೋಮವಾರ ರಾತ್ರಿ ಸಹೋದರ ಮನೆಗೆ ಮರಳಿದಾಗ ನೇಣು ಬಿಗಿದ ಸ್ಥಿತಿಯಲ್ಲಿ ಅವರ ಮೃತದೇಹ ಪತ್ತೆಯಗಿತ್ತು.
ಲೈಂಗಿಕ ದೌರ್ಜನ್ಯ ಆರೋಪದ ಪ್ರಕರಣದಿಂದಲೇ ಮಾನಸಿಕವಾಗಿ ನೊಂದು ಆತ್ಮಹತ್ಯೆಗೈದಿರಬಹುದೆಂದು ಶಂಕಿಸಲಾಗಿದೆ. ಈ ಬಗ್ಗೆ ಬಂಟ್ವಾಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೃತದೇಹವನ್ನು ಮಂಗಳೂರು ಶವಾಗಾರಕ್ಕೆ ಸಾಗಿಸಲಾಗಿದೆ ಎಂದು ತಿಳಿದು ಬಂದಿದೆ.





