ಸಮಾನ ವೇತನಕ್ಕಾಗಿ ಧರಣಿ
ಬೆಂಗಳೂರು, ಮಾ.14: ಕೇಂದ್ರ ಸರಕಾರದ ಸಚಿವಾಲಯ ನೌಕರರ ಮಾದರಿಯಲ್ಲಿ ರಾಜ್ಯ ಸಚಿವಾಲಯದ ನೌಕರರಿಗೂ ಸಮಾನ ವೇತನ ನೀಡುವಂತೆ ಒತ್ತಾಯಿಸಿ ಸಚಿವಾಲಯದ ನೌಕರರು ಸರಕಾರದ ಮುಖ್ಯಕಾರ್ಯದರ್ಶಿ ಕಚೇರಿ ಎದುರು ಧರಣಿ ನಡೆಸಿದರು.
ಶುಕ್ರವಾರ ವಿಧಾನಸೌಧದಲ್ಲಿರುವ ಸರಕಾರದ ಮುಖ್ಯಕಾರ್ಯದರ್ಶಿ ಅರವಿಂದಜಾಧವ್ ಕಚೇರಿ ಎದುರು ಧರಣಿ ನಡೆಸಿದ ರಾಜ್ಯ ಸರಕಾರಿ ಸಚಿವಾಲಯ ನೌಕರರು, ಅಧಿವೇಶನದ ಸಂದರ್ಭದಲ್ಲಿ ಸಚಿವಾಲಯ ನೌಕರರಿಗೆ ವಿಶೇಷ ಭತ್ತೆ ಮತ್ತು ಸಾರಿಗೆ ವ್ಯವಸ್ಥೆಯನ್ನು ಒದಗಿಸಬೇಕು, ಶಾಖಾಧಿಕಾರಿಗಳ ನೇರ ನೇಮಕಾತಿ ರದ್ದುಪಡಿಸಿ ಭಡ್ತಿ ಮೂಲಕ ಹುದ್ದೆಗಳನ್ನು ತುಂಬಿಸಿಕೊಳ್ಳಬೇಕು ಎಂದು ಆಗ್ರಹಿಸಿದರು.
ಇದಲ್ಲದೆ, ಸಚಿವಾಲಯದಲ್ಲಿ ಖಾಲಿಯಿರುವ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಬೇಕು. ಸಚಿವಾಲಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಬೇರೆ ಇಲಾಖೆಯ ನೌಕರರನ್ನು ಮಾತೃ ಇಲಾಖೆಗೆ ವಾಪಸ್ ಕಳುಹಿಸಬೇಕು. ರಾಷ್ಟ್ರೀಯ ಪಿಂಚಣಿ ಯೋಜನೆ ರದ್ದುಪಡಿಸಿ ನಿಶ್ಚಿತ ಪಿಂಚಣಿ ಯೋಜನೆಯನ್ನು ಜಾರಿಗೊಳಿಸಬೇಕು ಎಂದು ಧರಣಿ ನಿರತರು ಒತ್ತಾಯಿಸಿದರು.
Next Story





