ಸೆ.4ರಂದು ಮದರ್ ತೆರೆಸಾಗೆ ಸಂತ ಪದವಿ

ವ್ಯಾಟಿಕನ್ ಸಿಟಿ, ಮಾ.15 : ನೊಬೆಲ್ ಪ್ರಶಸ್ತಿ ಪುರಸ್ಕೃತರಾದ ಮದರ್ ತೆರೆಸಾಗೆ ಸಂತ ಪದವಿ ನೀಡುವ ನಿರ್ಧಾರಕ್ಕೆ ಮಂಗಳವಾರ ಪೋಪ್ ಫ್ರಾನ್ಸಿಸ್ ಔಪಚಾರಿಕವಾಗಿ ಒಪ್ಪಿಗೆ ನೀಡಿದ್ದಾರೆ. ಸೆ.4ರಂದು ಅಧಿಕೃತವಾಗಿ ಸಂತ ಪದವಿಗೇರಿಸಲಾಗುವುದು ಎಂದು ಅಧಿಕೃತ ಮೂಲಗಳು ತಿಳಿಸಿವೆ.
ತೆರೆಸಾ ಅವರು ನಿಧನರಾಗಿ 19 ವರ್ಷಗಳ ಬಳಿಕ ಸಂತ ಪದವಿ ಪಡೆಯುತ್ತಿದ್ದಾರೆ
ಕೋಲ್ಕತಾದಲ್ಲಿ ‘ಮಿಷನರೀಸ್ ಆಫ್ ಚಾರಿಟಿ’ ಸೇವಾ ಸಂಸ್ಥೆ ಸ್ಥಾಪಿಸಿದ್ದ ತೆರೆಸಾ ಸುಮಾರು 45 ವರ್ಷಗಳ ಕಾಲ ದೀನ ದುರ್ಬಲರ ಸೇವೆ ಸಲ್ಲಿಸಿದ್ದರು. 1997ರಲ್ಲಿ ತಮ್ಮ 87ನೇ ವಯಸ್ಸಿನಲ್ಲಿ ಕೋಲ್ಕತಾದಲ್ಲಿ ವಿಧಿವಶರಾಗಿದ್ದರು. 1979ರಲ್ಲಿ ತೆರೆಸಾ ಅವರಿಗೆ ನೊಬೆಲ್ ಶಾಂತಿ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು.
Next Story





