ಪುತ್ತೂರಿನಲ್ಲಿ ಸ್ತ್ರೀ ಶಕ್ತಿ ಮಹಿಳಾ ಗುಂಪು ತಯಾರಿಸಿದ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟ ಮೇಳ
ಮಹಿಳಾ ಉತ್ಪನ್ನಗಳ ಮಾರಾಟಕ್ಕಾಗಿ ಮಹಿಳಾ ಸಂಚಾರಿ ಮಾರುಕಟ್ಟೆ ವ್ಯವಸ್ಥೆಗೆ ಪ್ರಯತ್ನ- ಶಾಸಕಿ ಶಕುಂತಳಾ ಶೆಟ್ಟಿ

ಪುತ್ತೂರು : ಸ್ತ್ರೀಶಕ್ತಿ ಗುಂಪಿನ ಸದಸ್ಯರು ತಯಾರಿಸಿದ ಉತ್ಸನ್ನಗಳನ್ನು ಪ್ರದರ್ಶನಗಳಲ್ಲಿ, ಮಾರಾಟ ಮೇಳದಲ್ಲಿ ಇಟ್ಟು ಮಾರಾಟ ಮಾಡಿದಾಗ ಬಹಳಷ್ಟು ಬೇಡಿಕೆಗಳು ಬರಬಹುದು, ಅದಕ್ಕಾಗಿ ನೀವು ತಯಾರಿಸಿದ ಉತ್ಪನ್ನಗಳಿಗೆ ಮಾರುಕಟ್ಟೆ ಒದಗಿಸುವ ನಿಟ್ಟಿನಲ್ಲಿ ಮಹಿಳಾ ಅಭಿವೃದ್ದಿ ನಿಗಮದಿಂದ ಸಂಚಾರಿ ಮಾರುಕಟ್ಟೆಯನ್ನು ಆರಂಭಿಸುವ ಪ್ರಯತ್ನವನ್ನು ಮಾಡುತ್ತಿದ್ದೇವೆ, ಇದರ ಬಗ್ಗೆ ಸರಕಾರಕ್ಕೆ ಒತ್ತಡ ತಂದಾಗ ಆಗಬಹುದು ಎಂಬ ನಿರೀಕ್ಷೆ ನನ್ನಲ್ಲಿದೆ ಎಂದು ಶಾಸಕಿ ಶಕುಂತಳಾ ಶೆಟ್ಟಿ ಹೇಳಿದರು.
ಅವರು ಸೋಮವಾರ s ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಮುಂಬಾಗದಲ್ಲಿ ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮ ಬೆಂಗಳೂರು, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಮಂಗಳೂರು, ಶಿಶು ಅಭಿವೃದ್ಧಿ ಯೋಜನೆ, ಪುತ್ತೂರು ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ಸ್ತ್ರೀಶಕ್ತಿ ಗುಂಪಿನ ಸದಸ್ಯರು ತಯಾರಿಸಿದ ಉತ್ಪನ್ನಗಳ ಪ್ರದರ್ಶನ ಹಾಗೂ ಮಾರಾಟ ಮೇಳವನ್ನು ಉದ್ಘಾಟಿಸಿ ಮಾತನಾಡಿದರು.
ಸ್ತ್ರೀಶಕ್ತಿ ಸಂಘದವರು ತಯಾರಿಸಿರುವ ಉತ್ಪನ್ನಗಳು ಸಮಾಜಕ್ಕೆ ಪೂರಕವಾಗಿರಲಿ, ಸ್ತ್ರೀಶಕ್ತಿ ಸಂಘಗಳಿಗೆ ಸರಕಾರದಿಂದ ರೂ.೨ಲಕ್ಷದವರೆಗೆ ಸಾಲ ಸೌಲಭ್ಯವಿದೆ ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಶಾಸಕಿಯವರು ಹೇಳಿದರು.
ಮೊಬೈಲ್ ಕ್ಯಾಂಟೀನ್ ಉದ್ಘಾಟನೆ :
ಈ ಸಂದರ್ಭದಲ್ಲಿ ಸ್ತ್ರೀ ಸಂಘದವರು ಆರಂಭಿಸಿರುವ ಮೊಬೈಲ್ ಕ್ಯಾಂಟೀನ್‌ನ್ನು ಶಾಸಕಿಯವರು ಉದ್ಘಾಟಿಸಿ ಸಂಚಾರಿ ಕ್ಯಾಂಟೀನ್‌ನಲ್ಲಿ ಗ್ರಾಹಕರಿಗೆ ಶುದ್ಧವಾದ, ಸ್ವಚ್ಚವಾದ ಆರೋಗ್ಯಕರ ಆಹಾರ ಸಿಗಲಿ ಎಂದು ಶಾಸಕಿಯವರು ಹೇಳಿದರು.
ತಾಲೂಕು ಪಂಚಾಯತ್‌ನ ಮಾಜಿ ಅಧ್ಯಕ್ಷೆ ಪುಲಸ್ತ್ಯಾgÉÊ ಮಾತನಾಡಿ ಪರಿಶ್ರಮ, ಬದ್ಧತೆ, ಒಗ್ಗಟ್ಟಿನಿಂದ ಮಹಿಳೆಯು ತನ್ನನ್ನು ತಾನು ದುಡಿಮೆಯಲ್ಲಿ ತೊಡಗಿಸಿಕೊಂಡಾಗ ಪ್ರತಿ ಮನೆ ಮನೆಯಲ್ಲೂ ಆರ್ಥಿಕ ಸದೃಢತೆಯನ್ನು ಹೊಂದಲು ಸಾಧ್ಯವಾಗುತ್ತದೆ. ಸಮಾಜದಲ್ಲಿ ಸ್ತ್ರೀ ಶಕ್ತಿ ಇದ್ದ ಕಾರಣ ಪುರುಷ ಶಕ್ತಿ ಇದೆ, ಎಲ್ಲ ವಿಷಯದಲ್ಲೂ ಸ್ತ್ರೀಯು ಪ್ರೇರಣ ಶಕ್ತಿಯಾಗಿರುತ್ತಾಳೆ, ಮಹಿಳೆ ಮನಸ್ಸು ಮಾಡಿದರೆ ಎನನ್ನೂ ಸಾಧಿಸಬಹುದು ಎಂದು ಹೇಳಿದರು.
ಉಪತಹಶೀಲ್ದಾರ್ ಶ್ರೀಧರ್, ಸ್ತ್ರೀ ಶಕ್ತಿ ಬ್ಲಾಕ್ ಸೊಸೈಟಿ ಅಧ್ಯಕ್ಷೆ ಜಯಂತಿ ಆರ್ ಶುಭ ಹಾರೈಸಿದರು.
ಮಂಗಳೂರು ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ನಿರೀಕ್ಷಕಿ ಚಂದ್ರಿಕಾ ಪ್ರಸ್ತಾವನೆಗೈದರು. ತಾಲೂಕು ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶಾಂತಿ ಟಿ ಹೆಗಡೆ ಸ್ವಾಗತಿಸಿ, ಸ್ತ್ರೀಶಕ್ತಿ ಬ್ಲಾಕ್ ಸೊಸೈಟಿಯ ಮಾಜಿ ಅಧ್ಯಕ್ಷೆ ಸ್ವರ್ಣಲತಾ ಹೆಗ್ಡೆ ವಂದಿಸಿದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಮೇಲ್ವಿಚಾರಕಿ ಜಲಜಾಕ್ಷಿ ಕಾರ್ಯಕ್ರಮ ನಿರೂಪಿಸಿದರು.
ಮಾ14ರಿಂದ ಮಾ16.ರವರೇಗೆ ದೇವಸ್ಥಾನದ ಗದ್ದೆಯಲ್ಲಿ ಪ್ರದರ್ಶನ ಮಾರಾಟ ಮೇಳ ನಡೆಯಲಿದೆ.







