ಸಂದರ್ಶನ
ಬೆಂಗಳೂರು,ಮಾ. 15: ಕರ್ನಾಟಕ ಲೋಕಸೇವಾ ಆಯೋಗವು ರಾಜ್ಯ ಸರಕಾರದ ತೋಟಗಾರಿಕೆ ಇಲಾಖೆಯಲ್ಲಿನ 7 ಸಹಾಯಕ ತೋಟಗಾರಿಕಾ ನಿರ್ದೇಶಕರ ಹುದ್ದೆಗೆ ಮಾರ್ಚ್ 16ರಂದು ಸಂದರ್ಶನ ನಡೆಸಲಿದೆ.
ಮಾರ್ಚ್ 16ರಿಂದ ಮೂರು ದಿನಗಳ ಕಾಲ ತೋಟಗಾರಿಕೆ ಇಲಾಖೆಯಲ್ಲಿನ 263 ತೋಟಗಾರಿಕಾ ಸಹಾಯಕ ಹುದ್ದೆಗಳಿಗೆ 21 ರಿಂದ ನಾಲ್ಕು ದಿನಗಳ ಕಾಲ ಹಾಗೂ 28ರಿಂದ ಮೂರು ದಿನಗಳ ಕಾಲ ಅರ್ಹ ಅಭ್ಯರ್ಥಿಗಳಿಗೆ ಆಯೋಗದ ಬೆಂಗಳೂರಿನ ಕೇಂದ್ರ ಕಚೇರಿಯಲ್ಲಿ ಸಂದರ್ಶನ ನಡೆಸಲಿದೆ.
ಸಂದರ್ಶನಕ್ಕೆ ಅರ್ಹರಾದ ಅಭ್ಯರ್ಥಿಗಳ ಪಟ್ಟಿಗಳನ್ನು ಮಾಹಿತಿಗಾಗಿ ಆಯೋಗದ ವೆಬ್‌ಸೈಟ್: kpsc.kar.nic.inEligibilityList ಸಂಪರ್ಕಿಸಲು ಪ್ರಕಟನೆ ಕೋರಿದೆ.
Next Story





