ಎಟಿಎಂ ಕಾರ್ಡ್ ನಂಬರ್ ಕೇಳಿ ಮಹಿಳೆಗೆ ವಂಚನೆ!
ಕಿನ್ನಿಗೋಳಿ, ಮಾ.15: ಎಟಿಎಂ ಕಾರ್ಡ್‌ನ ನಂಬರ್ ಕೇಳಿ ಮಹಿಳೆಯೊಬ್ಬರಿಗೆ 17 ಸಾವಿರ ರೂ. ವಂಚಿಸಿದ ಘಟನೆ ಕಿನ್ನಿಗೋಳಿಯ ಬಳ್ಕುಂಜೆಯಲ್ಲಿ ಮಂಗಳವಾರ ನಡೆದಿದೆ.
ಬ್ಯಾಂಕ್ ಅಧಿಕಾರಿ ಎಂದು ಪರಿಚಯಿಸಿ ಕೊಂಡು ಫೋನ್ ಮಾಡಿ ಹಿಂದಿಯಲ್ಲಿ ಮಾತನಾಡಿದ ವ್ಯಕ್ತಿ ತಮ್ಮ ಎಟಿಎಂ ಕಾರ್ಡ್‌ನ ನಂಬರ್ ತಿಳಿಸಿದಲ್ಲಿ ಪರಿಶೀಲಿಸುವುದಾಗಿ ತಿಳಿಸಿದ್ದು, ತಕ್ಷಣ ಮಹಿಳೆ ತನ್ನ ಎಟಿಎಂ ಕಾರ್ಡ್ ನಂಬರ್ ನೀಡಿದ್ದಾರೆ.
ಕೆಲ ಸಮಯದ ಬಳಿಕ ಸಂಶಯಗೊಂಡ ಮಹಿಳೆ ಮನೆಯ ಪಕ್ಕದವರಲ್ಲಿ ಈ ಬಗ್ಗೆ ತಿಳಿಸಿದ್ದಾರೆ. ತಕ್ಷಣ ಎಚ್ಚೆತ್ತುಕೊಂಡ ಸ್ಥಳೀಯರೊಬ್ಬರು ಬ್ಯಾಂಕ್‌ಗೆ ಫೋನಾಯಿಸಿ ಮಹಿಳೆಯ ಬ್ಯಾಂಕ್ ಖಾತೆ ಸ್ಥಗಿತಗೊಳಿಸುವಂತೆ ಸೂಚಿಸಿ ಬ್ಯಾಂಕ್‌ಗೆ ಬಂದು ನೋಡಿದಾಗ ಕೇವಲ 20 ನಿಮಿಷಗಳ ಅಂತರದಲ್ಲಿ ಮೂರರಿಂದ ನಾಲ್ಕು ಬಾರಿ ಆನ್‌ಲೈನ್ ಮೂಲಕ ವಸ್ತುಗಳನ್ನು ಖರೀದಿರಿಸಿ ಬರೋಬ್ಬರಿ 17 ಸಾವಿರ ರೂ. ವಂಚಿಸಿರುವುದು ಬೆಳಕಿಗೆ ಬಂದಿದೆ.
ಇಂತಹಾ ಪ್ರಕರಣ ಮೊದಲೇನಲ್ಲ!
ಹೆಚ್ಚಾಗಿ ಕಿನ್ನಿಗೋಳಿಯ ರಾಷ್ಟ್ರೀಕೃತ ಬ್ಯಾಂಕ್‌ಗಳನ್ನೇ ಆಯ್ದುಕೊಳ್ಳುತ್ತಿರುವ ವಂಚಕರು ಕಳೆದೆರಡು ತಿಂಗಳ ಮೊದಲು ವ್ಯಕ್ತಿಯೊಬ್ಬರಿಂದ ಬರೋಬ್ಬರಿ 1.50 ಲಕ್ಷ ರೂ.ವರೆಗೆ ದೋಚಿದ್ದರು.





