ಎಟಿಎಂಗೆ ಹಾನಿ: ದೂರು
ಉಡುಪಿ, ಮಾ.15: ಅಂಬಲಪಾಡಿ ಶ್ಯಾಮಿಲಿ ಸಭಾಂಗಣದ ಬಳಿ ಇರುವ ಕಾರ್ಪೋರೇಷನ್ ಬ್ಯಾಂಕ್‌ನ ಎಟಿಎಂಗೆ ಮಂಗಳವಾರ ಮಧ್ಯಾಹ್ನ ವೇಳೆ ಅಕ್ರಮ ಪ್ರವೇಶ ಮಾಡಿದ ಗುರುಪ್ರಸಾದ್ ಹಾಗೂ ಪ್ರಶಾಂತ್ ಎಂಬವರು ಮೂಡು ಅಲೆವೂರಿನ ಜಯ ಶೆಟ್ಟಿ ಎಂಬವರನ್ನು ತಡೆದು ನಿಲ್ಲಿಸಿ ಅವಾಚ್ಯ ಶಬ್ದಗಳಿಂದ ಬೈದು ಎಟಿಎಂ ಗ್ಲಾಸಿಗೆ ಕಲ್ಲಿನಿಂದ ಹೊಡೆದು ಸುಮಾರು 12,000 ರೂ. ನಷ್ಟ ಉಂಟುಮಾಡಿರುವುದಾಗಿ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story





