ಸೌದಿ: ವೀಸಾ ಅವಧಿ ಮೀರಿ ವಾಸಿಸಿದರೆ ದಂಡ
ರಿಯಾದ್, ಮಾ. 15: ಸೌದಿ ಅರೇಬಿಯಾದಲ್ಲಿ ಇನ್ನು ಮುಂದೆ ವೀಸಾ ಅವಧಿ ಮುಗಿದ ನಂತರವೂ ನೆಲೆಸುವವರಿಗೆ ಹಾಗೂ ಅವರ ಅತಿಥೇಯರಿಗೆ ತಲಾ 15,000 ಸೌದಿ ರಿಯಾಲ್ ದಂಡ ವಿಧಿಸಲಾಗುವುದು.
ನಿಯಮ ಉಲ್ಲಂಘಿಸಿದ ಅತಿಥೇಯರಿಗೆ ವಿದೇಶಗಳಿಗೆ ಪ್ರಯಾಣಿಸಲು ಅನುಮತಿ ನೀಡಲಾಗುವುದಿಲ್ಲ. ಇದರ ಹೊರತಾಗಿ ವೀಸಾ ಅವಧಿ ಮುಗಿದ ನಂತರವೂ ದೇಶದಲ್ಲಿ ನೆಲೆಸುವವರಿಗೆ ಅವರನ್ನು ಅಲ್ಲಿಂದ ಹೊರ ಕಳುಹಿಸಿದ ನಂತರ ಮುಂದಿನ ಮೂರು ವರ್ಷಗಳ ಅವಧಿಗೆ ಮತ್ತೆ ಸೌದಿ ಅರೇಬಿಯಾ ಪ್ರವೇಶಿಸಲು ಅನುಮತಿ ನೀಡಲಾಗುವುದಿಲ್ಲವೆಂದು ರಿಯಾದ್ ಪಾಸ್‌ಪೋರ್ಟ್ ಕಚೇರಿಯ ಪ್ರಾದೇಶಿಕ ರ್ದೇಶಕ ಜನರಲ್. ಸುಲೈಮಾನ್ ಅಲ್-ಸುಹೈಬಾನ್ ಹೇಳಿದರು. ತಮ್ಮಲ್ಲಿಗೆ ಬರುವ ವಿದೇಶೀಯರು ವೀಸಾ ಅವಧಿ ಮುಗಿಯುವ ಮುನ್ನ ದೇಶ ಬಿಟ್ಟು ತೆರಳುವಂತೆ ನೋಡಿಕೊಳ್ಳುವುದು ಅತಿಥೇಯರ ಜವಾಬ್ದಾರಿಯಾಗಿರುತ್ತದೆ ಎಂದು ಸುಲೈಮಾನ್ ತಿಳಿಸಿದರಲ್ಲದೆ ದೇಶಕ್ಕೆ ಭೇಟಿ ನೀಡಿ ನಿಯಮ ಉಲ್ಲಂಘಿಸಿದವರು ಕಾನೂನಿನಂತೆ ಶಿಕ್ಷೆಯನ್ನೂ ಅನುಭವಿಸಬೇಕಾಗುತ್ತದೆ, ಎಂದರು.ಸೌದಿ ಅರೇಬಿಯಾಗೆ ಭೇಟಿ ನೀಡುವವರಿಗೆ ಸಾಧಾರಣವಾಗಿ ಒಂದು ತಿಂಗಳ ವಿಸಿಟಿಂಗ್ ವೀಸಾ ನೀಡಲಾಗುವುದಾದರೆ, ಅದನ್ನು ಅತಿಥೇಯರ ಮನವಿಯ ಮೇರೆಗೆ ಒಂದು ನಿರ್ದಿಷ್ಟ ಶುಲ್ಕಪಾವತಿಸಿದಲ್ಲಿ ವಿಸತಿರಿಸಬಹುದಾಗಿದೆ. ಬಿಸಿನೆಸ್ ವೀಸಾಗಳನ್ನು ವಿದೇಶಿ ಉದಡಗ್ಯಮಿಗಳಿಗೆ ಅವರ ಅಗತ್ಯಗಳಿಗನುಗುಣವಾಗಿ ಹಾಗೂ ಅವರ ಸ್ಥಳೀಯ ಅತಿಥೇಯರ ಶಿಫಾರಸ್ಸಿನಂತೆ ನೀಡಲಾಗುತ್ತದೆ. ವೈದ್ಯಕೀಯ ಕಾರಣಗಳನ್ನು ಹೊರತುಪಡಿಸಿ ಬೇರ್ಯಾವುದೇ ಕಾರಣಗಳಿಗಾಗಿ ಹಜ್ ವೀಸಾಗಳನ್ನು ವಿಸ್ತರಿಸಲಾಗುವುದಿಲ್ಲ.





