ಹಾರ್ದಿಕ್ ಪಟೇಲ್‌ರ ಜಾಮೀನು ಮನವಿ ತಿರಸ್ಕೃತ
ಅಹ್ಮದಾಬಾದ್, ಮಾ.15: ಪಟೇಲ್ ಮೀಸಲಾತಿ ಚಳವಳಿಯ ವೇಳೆ ದೇಶದ್ರೋಹದ ಆರೋಪದಲ್ಲಿ ಬಂಧಿಸಲಾಗಿರುವ ಹಾರ್ದಿಕ್ ಪಟೇಲರ ಜಾಮೀನು ಮನವಿಯನ್ನು ಸೂರತ್‌ನ ನ್ಯಾಯಾಲಯವೊಂದು ಇಂದು ತಿರಸ್ಕರಿಸಿದೆ. ಹಾರ್ದಿಕ್ ಬಂಧನದಲ್ಲಿರುವ ಸಂದರ್ಭದಲ್ಲಿ ಪೊಲೀಸರು ಅವರ ವಿರುದ್ಧ ಎರಡು ಎಫ್‌ಐಆರ್‌ಗಳನ್ನು ದಾಖಲಿಸಿದ್ದಾರೆ ಹಾಗೂ ಬಸ್ಸೊಂದನ್ನು ಸುಟ್ಟುದಕ್ಕೆ ಸಂಬಂಧಿಸಿ ಪೂರಕ ಅಫಿದಾವಿತ್ ಸಲ್ಲಿಸಿದ್ದಾರೆಂಬ ನೆಲೆಯಲ್ಲಿ ನ್ಯಾಯಾಲಯ ಜಾಮೀನು ಮನವಿ ತಳ್ಳಿ ಹಾಕಿದೆ.
ಪೊಲೀಸರು ಸಲ್ಲಿಸಿರುವ ಸಾಕ್ಷಗಳು ಬಲವಾಗಿವೆ. ಹಾರ್ದಿಕ್ ವಿರುದ್ಧ ದೇಶದ್ರೋಹದ ಆರೋಪದಲ್ಲಿ ಸಲ್ಲಿಸಿರುವ ಆರೋಪ ಪಟ್ಟಿಯಲ್ಲೂ ಅವರ ವಿರುದ್ಧ ಬಲವಾದ ಪುರಾವೆಗಳಿವೆಯೆಂದು ಪ್ರಧಾನ ಸತ್ರ ನ್ಯಾಯಾಧೀಶೆ ಗೀತಾ ಗೋಪಿ ಅಭಿಪ್ರಾಯಿಸಿದ್ದಾರೆ.
ಪಟೇಲ್ ಸದ್ಯ, ಸೂರತ್‌ನ ಲಾಜಪುರ ಕಾರಾಗೃಹದಲ್ಲಿದ್ದಾರೆ.
Next Story





