ತುರ್ಕಳಿಕೆ ಉರೂಸ್ ಸಮಾರೋಪ

ಉಪ್ಪಿನಂಗಡಿ, ಮಾ.15: ಇಸ್ಲಾಮ್ ಶಾಂತಿಯ ಧರ್ಮ. ಭಯೋತ್ಪಾದನೆ ಉಗ್ರವಾದ ಚಟುವಟಿಕೆಗಳಿಗೆ ಇಸ್ಲಾಮ್ ಧರ್ಮ ಕಾರಣವಲ್ಲ. ಪ್ರವಾದಿ ಮುಹಮ್ಮದ್ (ಸ)ರ ಸಂದೇಶಗಳು ಜಗತ್ತಿಗೆ ಮಾದರಿ ಎಂದು ಎಸ್ಸೆಸ್ಸೆಫ್ ರಾಜ್ಯಾಧ್ಯಕ್ಷ ಶಾಫಿ ಸಅದಿ ನುಡಿದರು.
ತುರ್ಕಳಿಕೆ ಉರೂಸ್ ಸಮಾರೋಪ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ಅಸ್ಸೈಯದ್ ಆಟಕೋಯ ತಂಙಳ್ ನೇತೃತ್ವ ವಹಿಸಿದ್ದರು. ರಫೀಕ್ ಸಅದಿ ದೇಲಂಪಾಡಿ ಮುಖ್ಯ ಪ್ರಭಾಷಣ ಮಾಡಿದರು. ಜಮಾಅತ್ ಅಧ್ಯಕ್ಷ ಅಬ್ಬಾಸ್ ಕೊಲ್ಯ, ಎಸ್‌ವೈಎಸ್ ತುರ್ಕಳಿಕೆ ಘಟಕದ ಅಧ್ಯಕ್ಷ ಆದಂ ಅಹ್ಸನಿ, ಎಸ್ಸೆಸ್ಸೆಫ್ ತುರ್ಕಳಿಕೆ ಘಟಕದ ಅಧ್ಯಕ್ಷ ಜಲೀಲ್, ಎಸ್ಸೆಸ್ಸೆಫ್‌ಉಪ್ಪಿನಂಗಡಿ ಡಿವಿಜನ್ ಕಾರ್ಯದರ್ಶಿ ಮುಹಮ್ಮದ್ ಅಲಿ ಉಪಸ್ಥಿತರಿದ್ದರು. ಪಿ.ಎಸ್. ಇಬ್ರಾಹೀಂ ಮದನಿ ಸ್ವಾಗತಿಸಿದರು. ಮುಹಮ್ಮದ್ ಸಅದಿ ವಂದಿಸಿದರು. ಖತೀಬ್ ಸುಲೈಮಾನ್ ಸಅದಿ ಕಾರ್ಯಕ್ರಮ ನಿರೂಪಿಸಿದರು.
Next Story





