ಪ್ರಜಾಪ್ರಭುತ್ವದಲ್ಲಿ ಯಾವ ಅಸಮ್ಮತಿ ನಿಷಿದ್ಧವಾಗಿದೆ?

ಕನ್ಹಯ್ಯ ಕುಮಾರ್‌ನ ಸ್ವಾತಂತ್ರ್ಯ, ಕೋಮುವಾದಿ ರಾಜ ಕಾರಣಕ್ಕೆ ಆತನ ದಿಟ್ಟ ಸವಾಲು ಮತ್ತು ನಮ್ಮ ಸಂವಿಧಾನ ದಲ್ಲಿ ಅತೀಮುಖ್ಯವಾಗಿರುವ ನ್ಯಾಯ, ಸ್ವಾತಂತ್ರ್ಯ, ಸಮಾನತೆ ಮತ್ತು ಸೋದರತೆಯನ್ನು ಆತ ಭಾವೋದ್ರಿಕ್ತವಾಗಿ ಸ್ವೀಕಾರ ಮಾಡಿರುವುದನ್ನು ನಾನು ಮೆಚ್ಚುತ್ತೇನೆ. ಆದರೆ ಆತನ ಇಬ್ಬರುಗೆಳೆಯರು ಉಮರ್ ಖಾಲಿದ್ ಮತ್ತು ಅನಿರ್ಬನ್ ಭಟ್ಟಾಚಾರ್ಯ ದೇಶದ್ರೋಹ ಅಥವಾ ದೇಶದ ವಿರುದ್ಧ ನಡೆಸಿದ ಅಪರಾಧ ಪ್ರಕರಣದಡಿ ಈಗಲೂ ಜೈಲಿನಲ್ಲಿದ್ದಾರೆ.
ದೇಶದ ಉದಾರವಾದಿ ಸಾರ್ವಜನಿಕರ ಒಂದು ವಿಭಾಗದ ಅಭಿಪ್ರಾಯದಲ್ಲೂ ಕೂಡಾ ಕುಮಾರ್, ಅಫ್ಝಲ್ ಗುರುವನ್ನು ಗಲ್ಲಿ ಗೇರಿಸಿದ ವರ್ಷಾಚರಣೆಯಂದು ಜವಾಹರ್ ಲಾಲ್ ನೆಹರೂ ವಿಶ್ವವಿದ್ಯಾನಿಲಯದಲ್ಲಿ ವಿವಾದಿತ ಕಾರ್ಯಕ್ರಮವನ್ನು ಆಯೋಜಿಸಿರಲಿಲ್ಲ ಮತ್ತು ಕಾಶ್ಮೀರದ ಸ್ವಾತಂತ್ರ್ಯದ ಪರ ಘೋಣೆಗಳನ್ನು ಕೂಗಿರಲಿಲ್ಲ ಎಂಬ ವಾದವನ್ನು ಒಪ್ಪಿಕೊಂಡಿರುವುದು ನನ್ನನ್ನು ಚಿಂತೆಗೀಡು ಮಾಡಿದೆ. ಹಾಗಾದರೆ ಅದರರ್ಥ ವೆಂದರೆ ಅನಿರ್ಬನ್ ಭಟ್ಟಾಚಾರ್ಯ ಮತ್ತು ಉಮರ್ ಖಾಲಿದ್ ಈ ಕಾರ್ಯಕ್ರಮವನ್ನು ಆಯೋಜಿಸಿದ್ದು ಇಂತಹ ಘೋಷಣೆಗಳನ್ನು ಕೂಗಿದ್ದಾರೆ ಎಂದಾದರೆ ಅವರು ಕಾನೂನಿನಲ್ಲಿ ಅನುಮತಿ ನೀಡಿರುವ ಗೆರೆಯನ್ನು ದಾಟಿದ್ದಾರೆ ಮತ್ತು ಅವರ ವಿರುದ್ಧ ತೆಗೆದುಕೊಳ್ಳಲಾಗಿರುವ ಕಾನೂನು ಕ್ರಮವನ್ನು ಸಮರ್ಥನೀಯವಾಗಿಸಿದೆ. ಈ ವಿದ್ಯಾರ್ಥಿಗಳು ನಿಜವಾಗಿಯೂ ಇಂತಹದ್ದೊಂದು ಕಾರ್ಯಕ್ರಮವನ್ನು ಆಯೋಜಿಸಿದ್ದರೇ ಅಥವಾ ಘೋಷಣೆಗ ಳನ್ನು ಕೂಗಿದ್ದರೆ ಎಂಬ ಬಗ್ಗೆ ನಾನು ಅಭಿಪ್ರಾಯ ವ್ಯಕ್ತಪಡಿಸಲು ಬಯಸುವುದಿಲ್ಲ. ಅವರ ‘ದೇಶವಿರೋ’ ಘೋಷಣೆಗಳನ್ನು ತೋರಿಸುವ ವೀಡಿಯೊಗಳು ನಕಲಿ ಎಂಬುದಕ್ಕೆ ಸಾಕಷ್ಟು ದೃಢ ಪುರಾವೆಗಳಿವೆ (ದಿಲ್ಲಿ ಸರಕಾರದ ವರದಿಯನ್ನೂ ಸೇರಿಸಿ).
ದೇಶಾದ್ಯಂತ ಅಲೆಯನ್ನು ಎಬ್ಬಿಸಿದ, ಸಂಸತ್ ನಲ್ಲಿ ಪ್ರತಿಧ್ವನಿಸಿದ, ಇತರ ವಿಶ್ವವಿದ್ಯಾನಿಲಯಗಳಲ್ಲಿ ಮತ್ತು ಪ್ರತಿಭಟ ನೆಗಳಲ್ಲಿ ಪರ ಮತ್ತು ವಿರುದ್ಧ ಪ್ರತಿಲನವನ್ನು ಕಂಡ ಈ ವಿದ್ಯಾರ್ಥಿ ಸಭೆಯನ್ನು ನಡೆಸುವಲ್ಲಿ ಇಂತಹದ್ದೇ ನಿರ್ದಿಷ್ಟ ವಿದ್ಯಾರ್ಥಿ ಗಳ ಪಾತ್ರವಿದೆ ಎಂದು ದೃಢವಾಗಿ ಹೇಳಲು ನನ್ನಲ್ಲಿ ಯಾವುದೇ ಆಧಾರವಿಲ್ಲ. ಆದರೆ ನಾನು ಹೇಳಲು ಹೊರಟಿರುವುದೇನೆಂದರೆ ಈ ಪ್ರಶ್ನೆಯು ಮುಖ್ಯವಾಗಲೇಬಾರದು.
ಅಭಿಪ್ರಾಯ: ನಾನು ಎತ್ತಲು ಹೊರಟಿರುವ ಪ್ರಶ್ನೆಗಳು ಭಿನ್ನವಾಗಿವೆ. ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳು ಮತ್ತು ಸಾಮಾನ್ಯ ನಾಗರಿಕರಿಗೆ ಅಸಮಾನತೆ ಮತ್ತು ಅನ್ಯಾಯದ ವಿರುದ್ಧ ಅಸಮ್ಮತಿ ಪ್ರದರ್ಶಿಸುವ ಹಕ್ಕಿದೆ ಎಂದು ಉದಾರವಾದಿಗಳ ಮಧ್ಯೆಯೂ ಸಾಮಾನ್ಯವಾದ ಒಂದು ಅಭಿಪ್ರಾಯವಿದೆ. ಆದರೆ ಈ ಹಕ್ಕಿಗೆ ಒಂದಷ್ಟು ಮಿತಿಗಳಿವೆ. ಈ ಮಿತಿಗಳನ್ನು ದೇಶದ ಹಿತಾಸಕ್ತಿಯ ದೃಷ್ಟಿ ಯಿಂದ ರೂಪಿಸಲಾಗಿದೆ. ದೇಶದ ಹಿತಾಸಕ್ತಿಯ ವಿರುದ್ಧವಾದ ದೃಷ್ಟಿಕೋನಗಳು ಮತ್ತು ಘೋಷಣೆಗಳು ನಿಷಿದ್ಧವಾಗಿವೆ.
ಈ ವಾದವನ್ನೇ ಮುಂದೆ ಕೊಂಡೊಯ್ದಿಗ, ಈ ನಿಷೇಧವ ನ್ನು ಪ್ರಯೋಗಿಕವಾಗಿ, ರಾಜಕೀಯ, ಸೈದ್ಧಾಂತಿಕ ಮತ್ತು ನ್ಯಾಯಿಕ ನೆಲೆಯಲ್ಲಿ ಅಳೆಯಲಾಗುತ್ತದೆಯೇ ಎಂಬುದನ್ನು ಕೇಳುವುದೂ ಮುಖ್ಯವಾಗುತ್ತದೆ. ಬೇರೆ ಶಬ್ದಗಳಲ್ಲಿ ಹೇಳುವುದಾದರೆ, ಒಂದು ದೊಡ್ಡ ಪ್ರಮಾಣದಲ್ಲಿ ಸಾರ್ವಜನಿಕ ಅಭಿಪ್ರಾಯದ ವಿರುದ್ಧ ವಾಗಿರುವುದರಿಂದ ರಾಜಕೀಯವಾಗಿ ಅಪಾಯಕಾರಿಯಾದ ಕಾರಣ ಇಂತಹ ಘೋಷಣೆಗಳು ಅವಿವೇಕತನದಿಂದ ಕೂಡಿದೆ ಯೇ ಅಥವಾ ದೇಶದ ಒಗ್ಗಟ್ಟನ್ನು ಕಾಯುತ್ತಿರುವ ಭಾರತೀಯ ಸಶಸಪಡೆಯ ಕಾಣಿಕೆಯನ್ನು ಅಪಮೌಲ್ಯ ಮಾಡುತ್ತದೆ ಎಂಬ ಕಾರಣದಿಂದ ಇಂತಹ ಚರ್ಚೆಗಳು ಸೈದ್ಧಾಂತಿಕವಾಗಿ ಸರಿಯಲ್ಲವೇ ಎಂಬುದನ್ನು ತಿಳಿಯುವುದು ಮುಖ್ಯ. ನನ್ನ ಪ್ರಕಾರ ಪ್ರಜಾಪ್ರಭುತ್ವದಲ್ಲಿ ಇಂತಹ ಪ್ರಶ್ನೆಗಳನ್ನು ಕೇಳುವುದು ಮತ್ತು ಅದಕ್ಕೆ ಭಿನ್ನ ಉತ್ತರಗಳನ್ನು ಹೊಂದಿರುವುದು ನ್ಯಾಯಬದ್ಧವಾಗಿದೆ.
ಈ ಪ್ರಶ್ನೆಗಳ ಬಗ್ಗೆ ನನಗೆ ಪ್ರಬಲವಾದ ಅಭಿಪ್ರಾಯಗಳಿವೆ. ಉದಾಹರಣೆಗೆ, ಭಾರತದ ವಾಯವ್ಯ ಮತ್ತು ಈಶಾನ್ಯ ಗಡಿಪ್ರದೇಶಗಳಲ್ಲಿ ಭದ್ರತಾ ಪಡೆಗಳು ನಡೆಸು ತ್ತಿರುವ ಮಾನವ ಹಕ್ಕು ಉಲ್ಲಂಘನೆಯ ಬಗ್ಗೆ ನನಗೆ ದುಃಖವಿದೆ ಮತ್ತು ಅಸಮಾಧಾನವಿದೆ. ನಾನು ಇರೋಮ್ ಶರ್ಮಿಳಾ ಸಶಸಪಡೆಗಳ ವಿಶೇಷ ಅಕಾರ ಕಾಯ್ದೆಯ ವಿರುದ್ಧ ನಡೆಸುತ್ತಿ ರುವ ಉಪವಾಸ ಸತ್ಯಾಗ್ರಹವನ್ನು ಬೆಂಬಲಿಸುತ್ತೇನೆ. ಈ ಅಕಾರವು ಸಮವಸದಲ್ಲಿರುವ ವ್ಯಕ್ತಿಗಳಿಗೆ ಅತ್ಯಾಚಾರ ಸೇರಿದಂತೆ ಹಲವು ಅಪರಾಧ ಮತ್ತು ಉಲ್ಲಂಘನೆಗಳನ್ನು ನಡೆಸಲುಸ್ವೀಕಾರವಲ್ಲದ ನಿರ್ಭಯತೆಯನ್ನು ನೀಡಿದೆ ಎಂದು ನಾನು ಭಾವಿಸುತ್ತೇನೆ. ಉಗ್ರವಾದದ ಅಪರಾಗಳಿಗೆ ಮರಣದಂಡನೆ ವಿಸುವುದು ಕೂಡಾ ಮೂಲ ಮಾನವೀಯ ತತ್ವಗಳ ವಿರುದ್ಧ ವಾಗಿದೆ ಎಂದು ನಾನು ನಂಬುತ್ತೇನೆ. ನಾನು ಭಯೋತ್ಪಾದಕ ಕಾನೂನನ್ನು ವಿರೋಸುತ್ತೇನೆ ಯಾಕೆಂದರೆ ಅವು ಆರೋಪಿ ಯು ತನ್ನ ಮುಗ್ಧತೆಯನ್ನು ಸಾಬೀತುಪಡಿಸಲು ಇರುವ ಹಕ್ಕಿನ ಜೊತೆ ರಾಜಿ ಮಾಡಿಕೊಳ್ಳುತ್ತದೆ. ದೇಶದ ವಿರುದ್ಧವಿರುವ ಜನರು ಕೂಡಾ ಯಾವುದೇ ದ್ವೇಷ ಅಥವಾ ಹಿಂಸೆಯಿಲ್ಲದೆ ತಮ್ಮ ಅಭಿಪ್ರಾಯವನ್ನು ಮುಂದಿಡುವ ಹಕ್ಕನ್ನು ಹೊಂದಿದ್ದಾರೆ ಎಂದು ನಾನು ನಂಬುತ್ತೇನೆ, ಇತ್ಯಾದಿ. ಆದರೆ ಇದೇ ವೇಳೆ ನನ್ನ ಅಭಿಪ್ರಾಯಕ್ಕೆ ವಿರುದ್ಧವಾದ ದೃಷ್ಟಿಕೋನವನ್ನು ಹೊಂದಿರುವ ವ್ಯಕ್ತಿಗಳೂ ಇದ್ದಾರೆ ಅದು ಸಹಜ ಎಂಬುದನ್ನೂ ನಾನು ಒಪ್ಪುತ್ತೇನೆ. ಇಂತಹ ಚರ್ಚೆಗಳನ್ನು ಸಮಾನಾರ್ಥ ಮತ್ತು ಕಾರಣಗಳ ಆಧಾರದಲ್ಲಿ ಅಳೆಯಬೇಕು ಎಂಬುದು ನನ್ನ ಅನಿಸಿಕೆ, ಆದರೆ ಚರ್ಚೆಯು ತೀವ್ರವಾಗಿರು ವುದು, ಕೋಪದಿಂದ ಕೂಡಿರುವುದು ಮತ್ತು ಆರೋಪ ಮಾಡುವುದನ್ನು ಪ್ರಜಾಪ್ರಭುತ್ವದಲ್ಲಿ ಒಪ್ಪಲಾಗಿದೆ. ನನ್ನಂಥ ಬಹಳಷ್ಟು ಜನರು ದೇಶಭಕ್ತರಲ್ಲ, ದೇಶವಿರೋಗಳು ಎಂಬ ಹಣೆಪಟ್ಟಿಗೆ ಒಗ್ಗಿ ಹೋಗಿದ್ದೇವೆ, ಅದು ಆರ್ಥಿಕ ಬೆಳವಣಿಗೆಯ ಹಾದಿ ಮತ್ತು ಬಹುಜನರ ನಂಬಿಕೆ. ಕೆಲವೊಂದು ಚರ್ಚೆಗಳನ್ನು, ಅದರ ವಿಷಯಗಳ ಬಗ್ಗೆ ನನಗೆ ಅಸಮಾಧಾನವಿರಬಹುದು. ಆದರೆ ಆಗಲೂ ಕೂಡಾ ಈ ಚರ್ಚೆಗಳು ಪ್ರಜಾಪ್ರಭುತ್ವದಲ್ಲಿ ನ್ಯಾಯಸಮ್ಮತವಾಗಿವೆ. ನನ್ನ ಅಭಿಪ್ರಾಯಕ್ಕೆ ತದ್ವಿರುದ್ಧವಾದ ಅಭಿಪ್ರಾಯವನ್ನು ಹೊಂದಿರುವ ಜನರ ಹಕ್ಕನ್ನು ನಾನು ರಕ್ಷಿಸಬೇಕು ಮತ್ತು ಎತ್ತಿಹಿಡಿಯಬೇಕು (ಅದು ದ್ವೇಷ ಅಥವಾ ಹಿಂಸೆಯನ್ನು ಪ್ರಚೋದಿಸದಿದ್ದರೆ).
ವಿಷಯದ ಮೂಲ: ಈ ಬಗ್ಗೆ ಉಳಿಯುವ ಗಂಭೀರವಾದ ಪ್ರಶ್ನೆಯೆಂದರೆ, ಭದ್ರತಾಪ ಡೆಗಳ ಬಗ್ಗೆ, ಮಾನವ ಹಕ್ಕು ಮತ್ತು ದೇಶದ ಬಗ್ಗೆ ಹಿತಕರವಲ್ಲದ ಪ್ರಶ್ನೆಗಳನ್ನು ಎತ್ತುವುದು ತಾಂತ್ರಿಕವಾಗಿ, ರಾಜಕೀಯವಾಗಿ ಮತ್ತು ಸೈದ್ಧಾಂತಿಕವಾಗಿ ಸ್ವೀಕಾರಾರ್ಹವಲ್ಲ ಎಂದು ಜನರು ಭಾವಿಸಿದ್ದರೂ ಇಂತಹ ದೃಷ್ಟಿಕೋನಗಳನ್ನು ಪ್ರತಿಪಾದಿಸುವುದು, ಎತ್ತಿಹಿಡಿಯುವುದು ಅಪರಾಧವೇ? ಮತ್ತು ಸಾಬೀತಾದರೆ ವ್ಯಕ್ತಿಯೊಬ್ಬ ಜೀವನವನ್ನು ಜೈಲಿನಲ್ಲಿ ಕಳೆಯಬೇಕಾಗಬಹುದಾದ, ದೇಶದ್ರೋಹದಷ್ಟು ಗಂಭೀರವಾದ ಅಪರಾಧವೇ?
ದೇಶದ ರಾಜತಾಂತ್ರಿಕ ಮತ್ತು ರಾಜಕೀಯ ಆಸಕ್ತಿಗಳ ವಿರುದ್ಧ ಎತ್ತುವ ಪ್ರಶ್ನೆಗಳು ಮತ್ತು ಘೋಷಣೆಗಳು ಹಿಂಸೆಗೆ ಪ್ರಚೋದನೆ ನೀಡದಿದ್ದರೆ ಅಂಥಾ ಪ್ರಕರಣಗಳು ದೇಶದ್ರೋಹವಾಗುವುದಿಲ್ಲ ಎಂದು ಕಾನೂನು ತಜ್ಞರು ಅಭಿಪ್ರಾಯಪಡುತ್ತಾರೆ. ಆದರೂ ಕೂಡಾ ಸ್ವಯಂಘೋಷಿತ ರಾಷ್ಟ್ರವಾದದ ಪ್ರತಿಪಾದಕರು ವಿದ್ಯಾ ರ್ಥಿಗಳು ಭಾರತದಿಂದ ಕಾಶ್ಮೀರದ ಸ್ವಾತಂತ್ರ್ಯದ ಪರವಾದ ಘೋಷಣೆಯನ್ನು ದೇಶದ್ರೋಹದ ಅಪರಾಧ ಎಂದು ವಿವರಿಸು ತ್ತಾರೆ. ಇದು ನಿರೀಕ್ಷಿತ. ಆದರೆ ಈ ಅಭಿಪ್ರಾಯವು ರಾಜಕೀಯ ರಂಗದ ತೀರ ಬಲಭಾಗಕ್ಕೆ ನಿರ್ಬಂಸಲ್ಪಟ್ಟಿಲ್ಲ. ಜೆಎನ್ ಯುನಲ್ಲಿ ಫೆಬ್ರವರಿ 9ರಂದು ಕೂಗಿದ ಘೋಷಣೆಗಳ ವೀಡಿಯೊಗಳಿಗೆ ಕತ್ತರಿ ಪ್ರಯೋಗ ಮಾಡಲಾಗಿದೆ ಎಂಬ ದಿಲ್ಲಿ ಸರಕಾರದ ವರದಿಯುಕನ್ಹಯ್ಯಿ ಕುಮಾರ್ ಮುಗ್ಧನಾಗಿದ್ದು ಆತ ಈ ಕಾರ್ಯಕ್ರಮವನ್ನು ಆಯೋಜಿಸಿರಲಿಲ್ಲ ಮತ್ತು ಘೋಷಣೆಗಳನ್ನು ಕೂಗಿರಲಿಲ್ಲ ಎಂಬುದು ಸ್ಪಷ್ಟವಾಗುತ್ತದೆ. ಇದರರ್ಥ ಈ ಕಾರ್ಯಕ್ರಮವನ್ನು ನಿಜವಾಗಿ ಆಯೋಜಿಸಿದ ಮತ್ತು ದೇಶವಿರೋ ಘೋಷಣೆ ಗಳನ್ನು ಕೂಗಿದವರು ನಿಜವಾದ ಅಪರಾಗಳಾಗಿದ್ದು ಅವರ ತನಿಖೆ ನಡೆಯಬೇಕು ಮತ್ತು ಶಿಕ್ಷೆಯಾಗಬೇಕು. ಬಹಳಷ್ಟು ಉದಾರವಾದಿಗಳು ಈ ವಾದವನ್ನು ಒಪ್ಪುತ್ತಾರೆ.
ಆದರೆ, ಕಾಲೇಜು ಆವರಣದ ಒಳಗೆ ಮತ್ತು ಹೊರಗಿನ ಇಂತಹ ಕಾನೂನಾತ್ಮಕವಾಗಿ ಸ್ವೀಕಾರಾರ್ಹ ಮತ್ತು ಸ್ವೀಕಾರಾರ್ಹವಲ್ಲದ ಅಸಮ್ಮತಿಯ ಮಧ್ಯೆ ಇರುವ ವ್ಯತ್ಯಾಸವು, ಇವುಗಳು ದ್ವೇಷ, ಶತ್ರುತ್ವ ಮತ್ತು ಹಿಂಸೆಯನ್ನು ಪ್ರಚೋದಿಸದ ಹೊರತಾಗಿ, ಬಹಳ ಚಿಂತೆಗೀಡುಮಾಡುವಂಥದ್ದು ಎಂದು ನನಗನ್ನಿಸುತ್ತದೆ. ಸಂಸತ್ ಭವನದ ಮೇಲೆ ದಾಳಿ ನಡೆಸಿದ ಕಾರಣಕ್ಕಾಗಿ ಅಫ್ಝಲ್ ಗುರುವಿಗೆ ಮರಣ ದಂಡನೆ ವಿಸಿದ ನ್ಯಾಯಾಂಗದ ತೀರ್ಮಾನವು ನ್ಯಾಯ ಯುತ ಮತ್ತು ಸರಿಯಾಗಿದೆಯೇ ಎಂಬ ಬಗ್ಗೆ ನಾನೂ ಸೇರಿದಂತೆಹಲವರು ಪ್ರಶ್ನೆಗಳನ್ನು ಎತ್ತಿದ್ದಾರೆ. ಅದೇ ಕಾರಣಕ್ಕೆ ನಾನು ಗೃಹ ಸಚಿವರಿಗೆ ಪತ್ರ ಬರೆದು ವಿದ್ಯಾರ್ಥಿಗಳು ದೇಶದ್ರೋಹದ ಅಪರಾಗಳು ಎಂದಾದರೆ ಅದೇ ಅಪರಾಧ ವನ್ನು ಮಾಡಿರುವು ದಕ್ಕಾಗಿ ನನ್ನನ್ನು ಕೂಡಾ ಜೈಲಿಗೆ ಹಾಕಬೇಕು ಎಂದು ತಿಳಿಸಿದ್ದೆ.
ಸಂವೇದನಾಶೀಲ ದೃಷ್ಟಿಕೋನ: ಪ್ರತಿದಿನ ಮಾಧ್ಯಮಗಳು ಇದೇ ಮಾದರಿಯಲ್ಲಿ ದೇಶದ ಪ್ರತಿಭಾನ್ವಿತ ವ್ಯಕ್ತಿಗಳನ್ನು ದೇಶದ್ರೋಹದ ಅಪರಾಗಳೆಂದು ವಿಚಾರಣೆಗೆ ನಿಲ್ಲಿಸುತ್ತವೆ. ಈ ಪೈಕಿ ಇತ್ತೀಚಿನ ಗುರಿಯೆಂದರೆ ಜೆಎನ್‌ಯುನ ಉಪನ್ಯಾಸಕಿ ನಿವೇದಿತಾ ಮೆನನ್. ಈಕೆ ಮಣಿಪುರ ಮತ್ತು ಕಾಶ್ಮೀರವನ್ನು ಸೇನಾಬಲದಿಂದ ವಶದಲ್ಲಿಟ್ಟು ಕೊಳ್ಳಲಾಗಿದೆ ಮತ್ತು ಛತ್ತೀಸ್ ಗಡದಂಥಾ ಭಾಗಗಳ ಜನರನ್ನು ಸೇನಾಬಲ ಬಳಸಿ ಹತ್ತಿಕ್ಕಲಾಗಿದೆ ಎಂದು ಹೇಳಿದ್ದರು. ನೀವು ನಿಮ್ಮ ದೇಶವನ್ನು ಪ್ರೀತಿಸುತ್ತೀರಿ ಎಂದ ಮಾತ್ರಕ್ಕೆ ಅದು ಎಲ್ಲಾ ರೀತಿ ಯಲ್ಲೂ ಸರಿಯಾಗಿದೆ ಎಂದರ್ಥವಲ್ಲ ಎಂದಾಕೆ ಹೇಳಿದ್ದರು.
ಈ ಎಲ್ಲಾ ವಿಷಯಗಳ ಮಧ್ಯೆ, ಇಬ್ಬರು ಯುವಕರು ಈಗಲೂ ಜೈಲಿನೊಳಗಿದ್ದಾರೆ ಮತ್ತು ಜಾಮೀನಿನ ಮೂಲಕ ಅವರು ಬೇಗದಲ್ಲಿ ಹೊರಗೆ ಬರುವ ಲಕ್ಷಣಗಳು ಕಾಣುತ್ತಿಲ್ಲ. ಇನ್ನೊಂದು ಕಡೆಯಲ್ಲಿ ಈ ಕಾರ್ಯಕ್ರಮದ ವೀಡಿಯೊಗಳ ಮೇಲೆ ಕತ್ತರಿ ಪ್ರಯೋಗಿಸಿ ಅವುಗಳನ್ನು ರಾಷ್ಟ್ರೀಯ ಚಾನೆಲ್ ಗಳಲ್ಲಿ ಪ್ರಸಾರ ಮಾಡಿದ ವ್ಯಕ್ತಿಗಳು ಪ್ರಯತ್ನಪೂರ್ವಕವಾಗಿ ದ್ವೇಷ ಮತ್ತು ಹಿಂಸೆಯನ್ನು ಪ್ರಚೋದಿಸಲು ಬಯಸಿದವರು, ದೇಶದ್ರೋಹ ದೂರದ ಮಾತು, ಯಾವುದೇ ಅಪರಾಧಕ್ಕೆ ಶಿಕ್ಷೆಗೊಳಗಾಗದೆ ಸುತ್ತಾಡುತ್ತಿದ್ದಾರೆ. ಆರೋಪಿ ವಿದ್ಯಾರ್ಥಿಯನ್ನು ಜೈಲು ಆವರಣದಲ್ಲಿ ಥಳಿಸಿದ ವಕೀಲರ ಜೊತೆ ಪೊಲೀಸರು ಮೃದುವಾಗಿ ವರ್ತಿಸಿ, ವಿಶ್ವವಿದ್ಯಾನಿಲಯದ ವಿದ್ಯಾರ್ಥಿ ಗಳನ್ನು ದೇಶದ್ರೋಹದ ಆರೋಪದಡಿ ಜೈಲಿಗಟ್ಟುವ ಮತ್ತು ಅವರಿಗೆ ಜಾಮೀನು ನೀಡುವುದನ್ನು ವಿರೋಸುವಲ್ಲಿ ತೋರಿದ ಆ ಸಕ್ರಿಯತೆ ಮತ್ತು ಉಮೇದು ಪ್ರದರ್ಶಿಸಲಿಲ್ಲ.
ದಶಕಗಳಿಂದ ವಿಪರೀತವಾಗಿ ಸೇನೆ ಕಾರ್ಯಾಚರಿಸುತ್ತಿರುವ ರಾಜ್ಯಗಳಾದ ಮಣಿಪುರ ಮತ್ತು ಕಾಶ್ಮೀರ ಮುಂತಾದ ಕಡೆಗಳ ಇಡೀ ಯುವಜನರ ತಲೆಮಾರಿನ ಜನಮಾನಸದಲ್ಲಿ ಬಹಳ ಆಳವಾದ ನೋವು ಮತ್ತು ಗಾಯವಿದೆ ಎಂಬುದರಲ್ಲಿ ಸಂಶಯ ವಿಲ್ಲ. ಅವರಲ್ಲಿ ಬಹಳಷ್ಟು ಮಂದಿ ಇನ್ನು ಮುಂದೆ ಭಾರತದಲ್ಲಿ ಇರುವುದಿಲ್ಲ ಎಂಬ ಭಾವನೆಯನ್ನು ಹೊಂದಿದ್ದಾರೆ. ಈ ಎಲ್ಲಾ ಭಾವನೆಗಳನ್ನು ಮತ್ತು ಗಾಯಗಳನ್ನು ಅಪರಾಗಳಾಗಿ ಮಾಡಿ ಈ ಯುವ ಪೀಳಿಗೆಯನ್ನು ಭಾರತದ ಜೈಲುಗಳಲ್ಲಿ ನಾವು ತುಂಬಲಿದ್ದೇವೆಯೇ? ಈ ಯುವಕರು ವಿಶ್ವ ವಿದ್ಯಾನಿಲಯ ಗಳಲ್ಲಿ ತಮ್ಮ ಕೋಪ ಮತ್ತು ನೋವನ್ನು ಇತರ ವಿದ್ಯಾರ್ಥಿಗಳ ಜೊತೆ ಹಂಚುತ್ತಾರೆ, ಚರ್ಚೆ ನಡೆಸುತ್ತಾರೆ, ಘೋಷಣೆಗಳನ್ನು ಕೂಗುತ್ತಾರೆ ಮತ್ತು ಇತರ ವಿದ್ಯಾರ್ಥಿಗಳ ಮತ್ತು ಅಧ್ಯಾಪಕ ರನ್ನು ಆಲಿಸುತ್ತಾರೆ. ಕೆಲವರು ಅವರನ್ನು ಒಪ್ಪುತ್ತಾರೆ, ಕೆಲವರು ಗೊಂದಲಕ್ಕೊಳಗಾಗುತ್ತಾರೆ, ಕೆಲವರು ಈ ಬಗ್ಗೆ ತಲೆಕೆ ಡಿಸಿಕೊಳ್ಳುವುದಿಲ್ಲ ಮತ್ತು ಇನ್ನೂ ಕೆಲವರು ಇವರನ್ನು ತೀವ್ರವಾಗಿ ವಿರೋಸುತ್ತಾರೆ. ಅವರ ನೋವು ಮತ್ತು ಕೋಪವನ್ನು ನಿಭಾಯಿಸಲು ಇದಕ್ಕಿಂತ ನಾಗರಿಕ ಮತ್ತು ಪ್ರಜಾಪ್ರಭುತ್ವವಾದ ಹಾದಿಯು ಬೇರೆಯಿದೆಯೇ?
ಕೃಪೆ: scroll.in







