ಕನ್ನಂಗಾರ್ ಬೈಪಾಸ್‌ನಲ್ಲಿ ವಾರ್ಷಿಕ ಸ್ವಲಾತ್

ಪಡುಬಿದ್ರೆ, ಮಾ.15: ಹೆಜಮಾಡಿಯ ಬೈಪಾಸ್‌ನ ಜಮಾಲಿಯ್ಯ ಮಸ್ಜಿದ್‌ನ ವಾರ್ಷಿಕ ಸ್ವಲಾತ್ ಮಜ್ಲಿಸ್ ಕಾರ್ಯಕ್ರಮ ಮಸ್ಜಿದ್ ಮುಂಭಾಗದಲ್ಲಿ ನಡೆಯಿತು. ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ವಿನಯಕುಮಾರ್ ಸೊರಕೆ ಮಾತನಾಡಿ, ಶಾಸಕರ ಪ್ರದೇಶಾಭಿವೃದ್ಧಿ ನಿಧಿಯನ್ನು ಧಾರ್ಮಿಕ ಕೇಂದ್ರಕ್ಕೆ ಬಳಸಲು ಕಾಯ್ದೆಯಲ್ಲಿ ತಿದ್ದುಪಡಿ ಮಾಡಲಾಗಿದೆ. ಅದರಂತೆ ಇಲ್ಲಿ ಪುನರ್‌ನಿರ್ಮಾಣ ಗೊಳ್ಳಲಿರುವ ಬೈಪಾಸ್ ಮಸೀದಿಗೆ ತನ್ನ ಶಾಸಕರ ನಿಧಿಯಿಂದ 10 ಲಕ್ಷ ರೂ. ನೀಡುವುದಾಗಿ ಘೋಷಿಸಿದರು.
ಅಸ್ಸೈಯದ್ ಕೆ.ಎಸ್.ಆಟಕೋಯ ತಂಙಳ್ ಕುಂಬೋಳ್ ಸ್ವಲಾತ್‌ನ ನೇತೃತ್ವವಹಿಸಿ ದುಆ ಆಶೀರ್ವಚನ ನೀಡಿದರು. ಕಾಸರಗೋಡು ಜಾಮಿಯಾ ಸಅದಿಯಾ ಅರಬಿಯಾ ಪೊ.ಕೆ.ಪಿ.ಹುಸೈನ್ ಸಅದಿ ಮತಪ್ರಭಾಷಣ ಮಾಡಿದರು. ಜಮಾಲಿಯ್ಯ ಮಸ್ಜಿದ್ ಕಣ್ಣಂಗಾರ್ ಅಧ್ಯಕ್ಷ ಯು.ಕೆ. ಅಬ್ದುಲ್ ಹಮೀದ್ ಅಧ್ಯಕ್ಷತೆ ವಹಿಸಿದ್ದರು. ಕನ್ನಂಗಾರ್ ಕೇಂದ್ರ ಮಸೀದಿ ಮುದ ರ್ರಿಸ್ ಅಶ್ರಫ್ ಸಖಾಫಿ ಕಿನ್ಯಾ, ಕಣ್ಣಂ ಗಾರ್ ಕೇಂದ್ರ ಜಮಾಅತ್ ಅಧ್ಯಕ್ಷ ಎಚ್.ಬಿ.ಮುಹಮ್ಮದ್, ಎಂ.ಎಸ್. ರಝಾಕ್ ಹಾಜಿ, ಶೇಖ್ ಅಹ್ಮದ್ ಹಾಜಿ ನ್ಯಾಷನಲ್ ಗೋಲ್ಡ್, ಇಬ್ರಾಹೀಂ ಶರೀಫ್, ಅಬೂಸಾಲಿ ಹಾಜಿ, ಬೈಪಾಸ್ ಮಸೀದಿಯ ಹನೀಫ್ ಅಹ್ಸನಿ, ಯೂಸುಫ್ ಮುಸ್ಲಿಯಾರ್, ಲಚ್ಚಿಲ್ ಶೇಖ್ ಅಬ್ದುಲ್ಲ ಹಾಜಿ, ಕೆ.ಜಿ.ಮುಹಮ್ಮದ್ ಹಾಜಿ ಉಪಸ್ಥಿತ ರಿದ್ದರು. ಹನೀಫ್ ಹೆಜಮಾಡಿ ಕಾರ್ಯ ಕ್ರಮ ನಿರೂಪಿಸಿದರು.
ಹೆದ್ದಾರಿಗೆ ತೆರವಾಗಲಿರುವ ಮಸೀದಿ: ರಾಷ್ಟ್ರೀಯ ಹೆದ್ದಾರಿ ಚತುಷ್ಪಥ ಕಾಮಗಾರಿಯ ವೇಳೆ ಕಣ್ಣಂಗಾರ್ ಬೈಪಾಸ್‌ನಲ್ಲಿದ್ದ ಜಮಾಲಿಯ್ಯಾ ಮಸೀದಿ ತೆರವಾಗಲಿದೆ. ಪಕ್ಕದಲ್ಲೇ ನೂತನ ಮಸೀದಿ ನಿರ್ಮಾಣವಾಗಲಿದೆ. ಇದಕ್ಕಾಗಿ ಸುಮಾರು 42ಲಕ್ಷ ರೂ. ವೆಚ್ಚದ ನೀಲ ನಕಾಶೆಯನ್ನು ಸಿದ್ಧಪಡಿಸಲಾಗಿದೆ. ಹೆದ್ದಾರಿ ಪ್ರಾಧಿಕಾರದಿಂದ 10ಲಕ್ಷ ರೂ. ಪರಿಹಾರದ ದೊರೆತಿದೆ ಎಂದು ಮಸೀದಿ ಅಧ್ಯಕ್ಷ ಯು.ಕೆ.ಅಬ್ದುಲ್ ಹಮೀದ್ ತಿಳಿಸಿದ್ದಾರೆ.





