ಮದರ್ ತೆರೆಸಾಗೆ ಸಂತ ಪದವಿ

ಸೆ.4ರಂದು ಪ್ರದಾನ
ವೆಟಿಕನ್ ಸಿಟಿ, ಹೊಲಿ ಸೀ, ಮಾ.15: ಕೋಲ್ಕತಾದಲ್ಲಿ ಬಡವರ ಸೇವೆಗೆ ಹೆಸರಾಗಿದ್ದ ಕ್ರೈಸ್ತ ಸನ್ಯಾಸಿನಿ ಮದರ್ ತೆರೆಸಾರಿಗೆ ಸಂಬಂಧಿಸಿದ ಎರಡನೆಯ ಪವಾಡವೊಂದನ್ನು ವೆಟಿಕನ್ ಸಮಿತಿಯೊಂದು ಗುರುತಿಸಿದ ಬಳಿಕ, ಅವರಿಗೆ ಸಂತ ಪದವಿ ನೀಡುವ ಹಾದಿ ಸುಗಮವಾಗಿದೆ.
ಸಂತ ಪದವಿಗೇರಿಸಲು ಮಂಜೂರಾತಿ ನೀಡುವ ಹಿರಿಯ ವಿದ್ವಾಂಸರ ಸಮಿತಿಯೊಂದು, ದೀರ್ಘ ಕಾಲದಿಂದ ಎದುರು ನೋಡುತ್ತಿದ್ದ ಹಸಿರು ದೀಪವು ಔಪಚಾರಿಕವಾಗಿ ಕಾಣಿಸಿಕೊಳ್ಳುವುದರೊಂದಿಗೆ, ಗ್ರೀನ್‌ವಿಚ್ ಸಮಯ ಮುಂಜಾನೆ 9 ಗಂಟೆಗೆ (ಭಾರತೀಯ ಕಾಲಮಾನ ಮಧ್ಯಾಹ್ನ 2:30ಕ್ಕೆ) ಸಭೆ ಸೇರಲಿದೆ. ತೆರೆಸಾ ನಿಧನವಾಗಿ 2 ದಶಕಗಳಾಗುತ್ತ ಬಂದಿವೆ. ಪೋಪ್ ಫ್ರಾನ್ಸಿಸ್ ಬಳಿಕ, 1979ರ ನೋಬೆಲ್ ಶಾಂತಿ ಪ್ರಶಸ್ತಿ ಪುರಸ್ಕೃತೆಯನ್ನು ಸಂತ ಪದವಿಗೇರಿಸುವ ಮಂಜೂರಾತಿ ನಿರ್ಣಯಕ್ಕೆ ಸಹಿ ಹಾಕಲಿರುವರು ಹಾಗೂ ಅದು ನಡೆಯುವ ದಿನಾಂಕ ಮತ್ತು ಸ್ಥಳವನ್ನು ಘೋಷಿಸಲಿದ್ದಾರೆ.
ಅಲ್ಬೇನಿಯಾದ ಕ್ರೈಸ್ತ ಸನ್ಯಾಸಿನಿ ಹಾಗೂ ಮಿಶನರಿ ತೆರೆಸಾ, ಸಂತ ಪದವಿಗಾಗಿ ಇಂದು ಪರಿಗಣಿಸಲಾಗುವ ಐವರು ಅಭ್ಯರ್ಥಿಗಳಲ್ಲಿ ಒಬ್ಬರಾಗಿದ್ದು, ಅತ್ಯಂತ ಉನ್ನತ ಅರ್ಹತೆ ಹೊಂದಿದವರಾಗಿದ್ದಾರೆ.
ಮದರ್ ತೆರೆಸಾರ ಪುಣ್ಯ ತಿಥಿಯ ಮುನ್ನಾ ದಿನವಾದ ಸೆ.4ರಂದು ಸಂತ ಪದವಿ ಪ್ರದಾನ ಕಾರ್ಯಕ್ರಮ ನಡೆಯುವುದೆಂದು ವ್ಯಾಪಕವಾಗಿ ನಿರೀಕ್ಷಿಸಲಾಗಿದೆ.
ಸಂತ ಪದವಿ ಪ್ರದಾನಕ್ಕಾಗಿ ಪೋಪ್ ಫ್ರಾನ್ಸಿಸ್ ಭಾರತಕ್ಕೆ ಬರುವರೆಂಬ ಆಶಾಭಾವನೆ ಭಾರತೀಯ ಕೆಥೊಲಿಕರದಾಗಿದೆ. ಆದರೆ, ಅದು ರೋಮ್‌ನಲ್ಲೇ ನಡೆಯುವ ನಿರೀಕ್ಷೆಯಿದ್ದು, ಅದರ ಮುಂದಿನ ತಿಂಗಳು ಕೋಲ್ಕತಾದಲ್ಲಿ ಕೃತಜ್ಞತಾ ಸಮರ್ಪಣೆ ಸಮಾರಂಭ ನಿಗದಿಯಾಗಿದೆ.
ಕೋಲ್ಕತಾದ ಕೊಳೆಗೇರಿಗಳಲ್ಲಿ ಬಡವರು, ರೋಗಿಗಳು, ವೃದ್ಧರು ಹಾಗೂ ಏಕಾಂಗಿಗಳ ಸೇವೆಗಾಗಿ ತೆರೆಸಾರಿಗೆ ನೊಬೆಲ್ ಬಹುಮಾನ ಲಭಿಸಿತ್ತು. ಅವರನ್ನು ಅನೇಕ ಕೆಥೊಲಿಕರು ಗೌರವಿಸುತ್ತಾರಾದರೂ, ಬಡ ಸಮುದಾಯದ ಮೇಲೆ ತನ್ನ ನಂಬಿಕೆಗಳನ್ನು ಹೇರಲು ಪ್ರಯತ್ನಿಸಿದ್ದ ಒಬ್ಬಾಕೆ ‘ಮತೀಯ ಸಾಮ್ರಾಜ್ಯ ಶಾಹಿ’ ಎಂದು ಆಗಾಗ ವಾಗ್ದಾಳಿಗೊಳಗಾಗುತ್ತಿದ್ದರು.
ಭಗಿನಿಯಿಂದ ಸಂತಳವರೆಗೆ: ಮೆಸಿಡೊನಿಯಾದ ಈಗಿನ ಸ್ಕೋಪ್ಜೆಯಲ್ಲಿ 1910ರಲ್ಲಿ ಅಲ್ಬೇನಿಯನ್ ದಂಪತಿಗೆ ಮಗಳಾಗಿ ಜನಿಸಿದ್ದ ತೆರೆಸಾರ ಮೂಲ ಹೆಸರು ಆಗ್ನೆಸ್ ಗೊಂಝಾ ಬೊಜಾಕ್ಸಿ ಎಂದು ಅವರು 1929ರಲ್ಲಿ ಭಾರತಕ್ಕೆ ಬರುವ ಮೊದಲು ಐರ್ಲೆಂಡ್‌ನಲ್ಲಿ ಮಿಶನರಿ ಆದೇಶದಂತೆ ಕೆಲಸ ಮಾಡಿದ್ದರು.
ತೆರೆಸಾ, 1950ರಲ್ಲಿ ಮಿಶನರೀಸ್ ಆಫ್ ಚಾರಿಟಿಗಳನ್ನು ಸ್ಥಾಪಿಸುತ್ತ ಹೋದರು ಹಾಗೂ ಒಂದು ವರ್ಷದ ಬಳಿಕ ಭಾರತದ ಪೌರತ್ವ ಪಡೆದರು.
ಕಳೆದ ವರ್ಷ, ಮೆದುಳಿನಲ್ಲಿ ಹಲವು ಗಡ್ಡೆಗಳಿದ್ದ ಬ್ರೆಝಿಲ್‌ನ ವ್ಯಕ್ತಿಯೊಬ್ಬನನ್ನು 2008ರಲ್ಲಿ ಗುಣಪಡಿಸಿದ್ದ ತೆರೆಸಾರ 2ನೆ ಪವಾಡವನ್ನು ವೆಟಿಕನ್‌ನ ಪರಿಣತರು ಗುರುತಿಸಿದರು.
ಅವರು ಮರಣಾಂನಂತರ 1998ರಲ್ಲಿ ಬಂಗಾಳದ ಬುಡಕಟ್ಟು ಮಹಿಳೆಯೊಬ್ಬಳ ಕಾಯಿಲೆ ವಾಸಿಯಾಗುವುದಕ್ಕೆ ಪ್ರೇರಣೆ ನೀಡಿದ್ದರೆಂಬ ಪ್ರತಿಪಾದನೆಯೊಂದಿಗೆ, 2003ರಲ್ಲಿ ತ್ವರಿತ ಪ್ರಕ್ರಿಯೆಯೊಂದರಲ್ಲಿ ಎರಡನೆ ಪೋಪ್ ಜಾನ್‌ಪಾಲ್, ತೆರೆಸಾರನ್ನು ಪವಿತ್ರೀಕರಿಸಿದ್ದರು.







