ಕೆಎಸ್ಸಾರ್ಟಿಸಿ ನೌಕರರಿಂದ ಧರಣಿ ಸತ್ಯಾಗ್ರಹ

ಮಂಗಳೂರು, ಮಾ.15: ವೇತನ ಪರಿಷ್ಕರಣೆಯಲ್ಲಿ ವಿಳಂಬ, ಅಂತರ್ ನಿಗಮ ವರ್ಗಾವಣೆ ನೀತಿ ಜಾರಿಗೊಳಿ ಸದಿರುವುದು, ಕಿರುಕುಳದ ವರ್ಗಾವಣೆ ಮೊದಲಾದ ಸಮಸ್ಯೆಗಳನ್ನು ಬಗೆಹರಿಸಬೇಕು ಎಂದು ಒತ್ತಾಯಿಸಿ ಕೆಎಸ್ಸಾರ್ಟಿಸಿ ಸಿಬ್ಬಂದಿ ಮತ್ತು ನೌಕರರ ಒಕ್ಕೂಟದ ವತಿ ಯಿಂದ ಇಂದು ನಗರದ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣದ ಎದುರು ಧರಣಿ ಸತ್ಯಾಗ್ರಹ ನಡೆಯಿತು. ಒಕ್ಕೂಟದ ನೇತೃತ್ವದಲ್ಲಿ ರಾಜ್ಯದ ಎಲ್ಲ ಕೇಂದ್ರ ಹಾಗೂ ವಿಭಾಗೀಯ ಕಚೇರಿಗಳ ಎದುರು ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ನಡೆಯುತ್ತಿರುವ ಸಾಂಕೇತಿಕ ಪ್ರತಿಭಟನೆಯ ಹಿನ್ನೆಲೆಯಲ್ಲಿ ಮಂಗಳೂರಿನಲ್ಲಿ ಎಐಟಿ ಯುಸಿ ಸಹಭಾಗಿತ್ವದಲ್ಲಿ ನಡೆದ ಪ್ರತಿಭ ಟನೆಯಲ್ಲಿ 200ಕ್ಕೂ ಅಧಿಕ ಕೆಎಸ್ಸಾ ರ್ಟಿಸಿ ಚಾಲಕರು, ನಿರ್ವಾಹಕರು ಹಾಗೂ ತಾಂತ್ರಿಕ ಕಚೇರಿ ಸಿಬ್ಬಂದಿ ಭಾಗ ವಹಿಸಿದ್ದರು. ಉದ್ಘಾಟನೆ ನೆರವೇರಿಸಿ ಮಾತನಾ ಡಿದ ಒಕ್ಕೂಟದ ಮಂಗಳೂರು ವಿಭಾಗ ಅಧ್ಯಕ್ಷ ಬಿ.ಕೆ.ಕೃಷ್ಣಪ್ಪ, ಜನವರಿ 1ರಂದು ಆಗಬೇಕಾಗಿದ್ದ ವೇತನ ಪರಿಷ್ಕರಣೆ ಇನ್ನೂ ಮಾಡಲಾಗಿಲ್ಲ. ಮಾತ್ರವಲ್ಲದೆ ಕಿರುಕುಳದ ವರ್ಗಾವಣೆ ಮೂಲಕ ನೌಕರರನ್ನು ಸತಾಯಿಸಲಾಗುತ್ತಿದೆ ಎಂದು ದೂರಿದರು. ಧರಣಿಯ ನೇತೃತ್ವವನ್ನು ಎಐಟಿಯುಸಿ ಜಿಲ್ಲಾ ಕಾರ್ಯದರ್ಶಿ ಎಚ್.ವಿ.ರಾವ್, ಮಂಗಳೂರು ವಿಭಾಗದ ಪ್ರಧಾನ ಕಾರ್ಯದರ್ಶಿ ಪ್ರವೀಣ್‌ಕುಮಾರ್, ಸಂಘಟನಾ ಕಾರ್ಯದರ್ಶಿ ವಿಜಯಕುಮಾರ್ ವಹಿಸಿದ್ದರು.





