ರಿಯಾದ್:ಕಾರ್ಮಿಕ ಹಾಗೂ ನಿವಾಸಿ ಕಾನೂನು ಉಲ್ಲಂಘನೆ
ಕಳೆದ ವರ್ಷ 33,511 ವಲಸಿಗ ಉದ್ಯೋಗಿಗಳ ಗಡಿಪಾರು

ರಿಯಾದ್ :ರಿಯಾದ್ ಪಾಸ್‌ಪೋರ್ಟ್ ಇಲಾಖೆಯ ಇತ್ತೀಚೆಗಿನ ವರದಿಯ ಪ್ರಕಾರ ಕಳೆದ ವರ್ಷ 35,661 ಹರೂಬ್ ಅಥವಾ ಗಡೀಪಾರು ಪ್ರಕರಣಗಳು ದಾಖಲಾಗಿವೆ. ಹರೂಬ್ ಎಂದರೆ ಕಾರ್ಮಿಕರು ರಜಾ ಹೋದ ಬಳಿಕ ವಾಪಾಸು ಕೆಲಸಕ್ಕೆ ಬಾರದೆ ಇರುವುದು. ಇಲಾಖೆಯ ವರದಿ ಹೇಳುವಂತೆ 33,511 ವಿದೇಶಿ ಕಾರ್ಮಿಕರು ಕಾರ್ಮಿಕ ಮತ್ತು ವಸತಿ ನಿಯಮಗಳನ್ನು ಉಲ್ಲಂಘಿಸಿದ್ದಾರೆ. ಅಲ್ಲದೆ ಕಾನೂನು ಉಲ್ಲಂಘಿಸಿದವರಿಗೆ ಶಿಕ್ಷೆ ನೀಡಿರುವ 2952 ಆಡಳಿತದ ನಿರ್ಧಾರಗಳು ದಾಖಲಾಗಿವೆ. ದೇಶದ ಫೋರ್ಜರಿ ವಿರೋಧಿ ಇಲಾಖೆಯು 3,466 ಫೋರ್ಜರಿ ಪ್ರಕರಣಗಳನ್ನು ಪತ್ತೆ ಹಚ್ಚಿದೆ. ಕಳೆದ ವರ್ಷದ ಇಲಾಖೆಯ ಅತೀ ದೊಡ್ಡ ಸಾಧನೆಗಳು ಇವಾಗಿವೆ.
ರಿಯಾದ್ ಪಾಸ್‌ಪೋರ್ಟ್ ಇಲಾಖೆಯ ಈ ವಾರ್ಷಿಕ ವರದಿಯ ವಿವರಗಳನ್ನು ಸ್ಥಳೀಯ ಸುದ್ದಿಪತ್ರಿಕೆಯಲ್ಲಿ ಪ್ರಕಟಿಸಲಾಗಿದೆ. ಇಲಾಖೆಯು ವಿಭಿನ್ನ ಪ್ರಕರಣಗಳಲ್ಲಿ ತನಿಖೆ ನಡೆಸಿ ಅರ್ಧದಿಂದ ಕೆಲಸ ಬಿಟ್ಟು ವಾಪಾಸಾಗದ ಪ್ರಕರಣಗಳಲ್ಲಿ 5,115 ಮಂದಿಯನ್ನು ಇಲಾಖೆ ಬಿಡುಗಡೆ ಮಾಡಿದೆ. ಕಿಂಗ್ ಖಾಲಿದ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳ ಮೂಲಕ ಗಡೀಪಾರು ಆದವರು 3.6 ದಶಲಕ್ಷ ಮಂದಿ. ಇವರಲ್ಲಿ 2,584 ಮಂದಿಯನ್ನು ಅಪರಾಧ ಪ್ರಕರಣಗಳಲ್ಲಿ ಒಳಗೊಂಡಿರುವ ಕಾರಣ ವಿಮಾನ ನಿಲ್ದಾಣದಿಂದ ವಾಪಾಸು ಕಳುಹಿಸಲಾಗಿದೆ. ಇದೇ ವಿಮಾನನಿಲ್ದಾಣದಿಂದ ಬಂದಿರುವ ವಿದೇಶಿಗರ ಸಂಖ್ಯೆ 3.9 ದಶಲಕ್ಷವಾಗಿದೆ ಎಂದೂ ಹೇಳಲಾಗಿದೆ. ಒಟ್ಟು 1 ಲಕ್ಷ ಪ್ರಜೆಗಳಿಗೆ ಪಾಸ್‌ಪೋರ್ಟ್ ಕೊಡಲಾಗಿದೆ ಮತ್ತು ಅವರಲ್ಲಿ 51,000 ಮಹಿಳೆಯರೇ ಇದ್ದರು ಎಂದು ವರದಿ ಹೇಳಿದೆ.







