ರೋಹ್ತಕ್ ನಲ್ಲಿ ಕಬಡ್ಡಿ ಆಟಗಾರನ ಗುಂಡುಕ್ಕಿ ಕೊಲೆ
ಅಪರಿಚಿತರಿಬ್ಬರು ಸ್ಕೂಟರ್‌ನಲ್ಲಿ ಬಂದು ಗುಂಡಿನ ಮಳೆಗೆರೆದ ದೃಶ್ಯ ಸಿಸಿಟಿವಿಯಲ್ಲಿ ಸೆರೆ

ರೋಹ್ತಕ್, ಮಾ.16: ರಾಷ್ಟ್ರೀಯ ಮಟ್ಟದ ಕಬಡ್ಡಿ ಆಟಗಾರನೊಬ್ಬನನ್ನು ಸ್ಕೂಟರ್‌ನಲ್ಲಿ ಬಂದ ದುಷ್ಕರ್ಮಿಗಳಿಬ್ಬರು ರಸ್ತೆ ಬದಿಯಲ್ಲಿ ಗುಂಡಿನ ಮಳೆಗೆರೆದು ಕೊಂದು ಹಾಕಿರುವ ಘಟನೆ ರೋಹ್ಟಕ್‌ನಲ್ಲಿ ಮಂಗಳವಾರ ನಡೆದಿದೆ.
ಕಬಡ್ಡಿ ಆಟಗಾರ ಸುಖ್ವಿಂದರ್ ನರ‍್ವಾಲಾ ಅಪರಿಚಿತರ ಗುಂಡಿನ ದಾಳಿಯಿಂದ ಗಂಭೀರ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟರು.
ಸುಖ್ವಿಂದರ್ ಅಭ್ಯಾಸ ಮುಗಿಸಿ ಮನೆಯ ಕಡೆಗೆ ಮೊಬೈಲ್‌ನಲ್ಲಿ ಮಾತನಾಡುತ್ತಾ ವಾಪಸಾಗುತ್ತಿದ್ದಾಗ ಅವರ ಮೇಲೆ ಸ್ಕೂಟರ್‌ನಲ್ಲಿ ಅಲ್ಲಿಗೆ ಇಬ್ಬರು ಯುವಕರು ಗುಂಡಿನ ಮಳೆಗೆರೆದು ಪರಾರಿಯಾದರು ಎನ್ನಲಾಗಿದೆ.. ಅಪರಿಚಿತರಿಬ್ಬರು ಸ್ಕೂಟರ್‌ನಲ್ಲಿ ಬಂದು ಗುಂಡಿನ ಮಳೆಗೆರೆದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಕೊಲೆ ಪ್ರಕರಣದ ಆರೋಪಿಗಳಿಗಾಗಿ ಪೊಲೀಸರು ಶೋಧ ಮುಂದುವರಿಸಿದ್ದಾರೆ.
ಮೂರು ತಿಂಗಳ ಹಿಂದೆ ಇದೇ ರೀತಿ ಕಬಡ್ಡಿ ಆಟಗಾರ ದೀಪಕ್ ಕುಮಾರ್ ಕೊಲೆಯಾಗಿತ್ತು. ಅವರನ್ನು ಮಾರ್ಗದ ಬದಿಯಲ್ಲಿ ಅಪರಿಚಿತರು ಕೊಲೆಗೈದು ಪರಾರಿಯಾಗಿದ್ದರು.
Next Story





