ಜೀವ ಉಳಿಸಿದ ವೀರ ಶಿಕ್ಷಕನಿಗೆ 10ಲಕ್ಷ ರಿಯಾಲ್ ಬಹುಮಾನ

ರಿಯಾದ್, ಮಾ 16: ಬೆಂಕಿ ಬಿದ್ದ ಕಾರೊಂದರಲ್ಲಿ ಸಿಲುಕಿದ್ದ ಶಿಕ್ಷಕರನ್ನು ರಕ್ಷಿಸಿದ ಶಾಲಾ ಶಿಕ್ಷಕನಿಗೆ ಕಿಂಗ್ ಅಬ್ದುಲ್ ಅಝೀಝ್ ಮೆಡಲ್ ಹಾಗೂ 10ಲಕ್ಷ ಸೌದಿ ರಿಯಾಲ್ ಗಳ ನಗದು ಬಹುಮಾನವನ್ನು ಘೋಷಿಷಲಾಗಿದೆ.
ಸೌದಿಯ ದೊರೆ ಸಲ್ಮಾನ್ ಈ ಸನ್ಮಾನಕ್ಕೆ ಅನುಮೋದನೆ ನೀಡಿದ್ದಾರೆ. ನಾಲ್ಕು ತಿಂಗಳ ಹಿಂದೆ ಬುರೈದಾದ ಬಳಿ ಶಿಕ್ಷಕರು ಹೋಗುತ್ತಿದ್ದ ವಾಹನವೊಂದು ಇನ್ನೊಂದು ವಾಹನಕ್ಕೆ ಡಿಕ್ಕಿ ಹೊಡೆದು ತಕ್ಷಣ ಬೆಂಕಿ ಹೋತ್ತಿ ಕೊಂಡಿತ್ತು. ಆಗ ದಾರಿಯಲ್ಲಿ ಬರುತ್ತಿದ್ದ ಇನ್ನೋರ್ವ ಶಿಕ್ಷಕ ಅಬ್ದುಲ್ ಅಝೀಝ್ ಸಾಲಿಂ ಸಾಯೆಝ್ ಅಲ್ ಹರ್ಬಿ ಇದನ್ನು ನೋಡಿ ತಕ್ಷಣ ಕಾರ್ಯ ಪ್ರವೃತ್ತರಾಗಿ ವಾಹನದಲ್ಲಿದ್ದ ಶಿಕ್ಷಕರನ್ನು ರಕ್ಷಿಸುವಲ್ಲಿ ಯಶಶ್ವಿಯಾದರು. ಆದರೆ ಎರಡೂ ವಾಹನಗಳ ಚಾಲಕರನ್ನು ರಕ್ಷಿಸಲು ಸಾಧ್ಯವಾಗಲಿಲ್ಲ ಎಂದು ತಿಳಿದುಬಂದಿದೆ.
Next Story





