ಬಿಜೆಪಿ ಬಹುದೊಡ್ಡ ರಾಷ್ಟ್ರ ವಿರೋಧಿ ಪಕ್ಷ: ಅರವಿಂದ್ ಕೇಜ್ರಿವಾಲ್

ಹೊಸದಿಲ್ಲಿ, ಮಾಚ್.16: ಜವಾಹರಲಾಲ್ ನೆಹರೂ ವಿಶ್ವವಿದ್ಯಾನಿಲಯದ ಘಟನಾವಳಿಗಳನ್ನು ಮುಂದಿಟ್ಟು ದಿಲ್ಲಿಯ ಮುಖ್ಯಮಂತ್ರಿ ಕೇಜ್ರಿವಾಲ್ ಭಾರತೀಯ ಜನತಾ ಪಕ್ಷದ ಮೇಲೆ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಬಿಜೆಪಿ ಬಹುದೊಡ್ಡ ರಾಷ್ಟ್ರ ವಿರೋಧಿ ಪಕ್ಷವಾಗಿದೆ . ಅದು ಜೆಎನ್ ಯು ನಲ್ಲಿ ರಾಷ್ಟ್ರ ವಿರೋಧಿ ಘೋಷಣೆ ಕೂಗಿದವರನ್ನು ಯಾಕೆ ರಕ್ಷಿಸುತ್ತಿದೆ ಎಂದು ಅರವಿಂದ್ ಕೇಜ್ರಿವಾಲ್ ಟ್ವೀಟ್ ಮಾಡಿದ್ದಾರೆ.
ಫೆಬ್ರವರಿಯಲ್ಲಿ ಜೆಎನ್‌ಯು ಪರಿಸರದಲ್ಲಿ ರಾಷ್ಟ್ರ ವಿರೋಧಿ ಘೋಷಣೆ ಕೂಗಿದ ನೈಜ ಆರೋಪಿಗಳನ್ನು ಬಿಜೆಪಿ ಸರಕಾರ ಬಂಧಿಸಿಲ್ಲ ಎಂದು ಕೇಜ್ರಿವಾಲ್ ಬೆಟ್ಟು ಮಾಡಿದ್ದಾರೆ. ಈ ಆರೋಪದಲ್ಲಿ ಜೆಎನ್‌ಯು ವಿದ್ಯಾರ್ಥಿ ಸಂಘದ ಅಧ್ಯಕ್ಷ ಕನ್ಹಯ್ಯಾ ಕುಮಾರ್ ಸಹಿತ ಇತರರ ಮೇಲೆ ದೇಶದ್ರೋಹ ಆರೋಪ ಹೊರಿಸಲಾಗಿದೆ. ಕಳೆದ ಫೆಬ್ರವರಿ ಇಪ್ಪತ್ತೊಂತ್ತರಂದು ಕೇಜ್ರಿವಾಲ್‌ರ ವಿರುದ್ಧವೂ ಹೈದರಾಬಾದ್‌ನಲ್ಲಿ ದೇಶದ್ರೂಹದ ಮೊಕದ್ದಮೆ ದಾಖಲುಗೊಂಡಿದೆ. ಈ ಮೊದಲು ಕೇಜ್ರಿವಾಲ್ ತನ್ನನ್ನು ಪ್ರಧಾನಿ ನರೇಂದ್ರ ಮೋದಿಗೆ ಹೋಲಿಸಿದರೇ ತಾನೇ ದೊಡ್ಡ ದೇಶಭಕ್ತ ಎಂದು ಹೇಳಿಕೊಂಡಿದ್ದರು. ದಿಲ್ಲಿ ಮುಖ್ಯಮಂತ್ರಿ ಕೇಜ್ರಿವಾಲ್ ಬಿಜೆಪಿಯ ವಿರುದ್ಧ ಕಿಡಿಕಾರಿದ್ದು ಜೆಎನ್‌ಯು ಪ್ರಕರಣದಲ್ಲಿ ನೈಜ ಆರೋಪಿಗಳನ್ನು ಬಂಧಿಸಲಾಗಿಲ್ಲ. ಪಿಡಿಪಿ ಮುಖ್ಯಸ್ಥೆ ಮೆಹಬೂಬ ಮುಫ್ತಿ ಕೋಪಕ್ಕೀಡಾಗಬಹುದೆಂಬುದು ಅದಕ್ಕೆ ಕಾರಣವಾಗಿದೆ ಎಂದು ಹೇಳಿದ್ದಾರೆ.
ಜಮ್ಮು ಕಾಶ್ಮೀರದಲ್ಲಿ ಸರಕಾರ ರಚನೆಯಾಗುವುದು ದೇಶದ್ರೋಹಕ್ಕಿಂತಲೂ ಮಹತ್ವಪೂರ್ಣವೇ ಎಂದು ಕೇಜ್ರಿವಾಲ್ ಪ್ರಶ್ನಿಸಿದ್ದಾರೆ. ಮುಫ್ತಿಮುಹಮ್ಮದ್ ಸಈದ್ ನಿಧನಾನಂತರ ಅಲ್ಲಿ ಬಿಜೆಪಿ ಮತ್ತು ಪಿಡಿಪಿ ಸರಕಾರ ರಚಿಸುವ ವಿಷಯ ಅತಂತ್ರ ಸ್ಥಿತಿಯಲ್ಲಿದೆ. ಮೆಹಬೂಬ ಮುಫ್ತಿ ಈವರೆಗೂ ತನ್ನ ಪಟ್ಟನ್ನು ಸ್ಪಷ್ಟಪಡಿಸಿಲ್ಲ.





