ಹದಿಹರೆಯದ ಯುವತಿಯ ನಿಗೂಢ ಸಾವು!
ತಾಯಿ ಎಷ್ಟು ಕರೆದರೂ ಮಗಳು ಮಲಗಿದ್ದಲ್ಲಿಂದ ಏಳಲೇ ಇಲ್ಲ
.jpg)
ಮೊರಿಂಡಾ, ಮಾರ್ಚ್,16: ಗ್ರಾಮದ ಚತ್‌ಮಾಲಾದಲ್ಲಿ ಹದಿಹರೆಯದ ಮಗಳು ನಿಗೂಢ ಸಾವನ್ನಪ್ಪಿದ ಪ್ರಕರಣ ಬೆಳಕಿಗೆಬಂದಿದೆ. ಮನೆಯಿಂದ ಕೆಲಸದೆಡೆಗೆ ಹೋಗಿದ್ದ ತಾಯಿ ಮನೆಗೆ ಮರಳಿದಾಗ ಮಗಳು ಬೆಡ್‌ನಲ್ಲಿ ಮಲಗಿರುವುದು ಕಂಡು ಬಂದಿತ್ತು. ಎಷ್ಟೇ ಎಬ್ಬಿಸಿದರೂ, ಕರೆದರೂ ಮಗಳು ಏಳಲೇ ಇಲ್ಲ. ಅಷ್ಟರಲ್ಲಿ ತಾಯಿಗೆ ಮಗಳು ಮೃತರಾಗಿರುವುದು ಗೊತ್ತಾಯಿತು. ಮೊರಿಂಡಾ ಠಾಣೆಯ ಪ್ರಮುಖ ರವೀಂದ್ರಪಾಲ್ ಸಿಂಗ್ ಹೇಳುವ ಪ್ರಕಾರ ಬಾಲಕಿಯ ತಾಯಿ ಕಮಲ್‌ಜಿತ್ ಕೌರ್ ಮೊರಿಂಡಾದ ಕುರಾಲಿ ರಸ್ತೆಯಲ್ಲಿರುವ ಗಾರ್ಡನ್ ಶಾಲೆಯಲ್ಲಿ ಕೆಲಸ ಮಾಡುತ್ತಾರೆ. ಅವರು ಬುಧವಾರ ಬೆಳಗ್ಗೆ ಏಳುಗಂಟೆಗೆ ಮನೆಯಿಂದ ಶಾಲೆಗೆ ಹೋಗಿದ್ದರು.
ಅವರ ಪತಿಯೂ ಎಂಟು ಗಂಟೆವೇಳೆಗೆ ತಾನು ಕೆಲಸಮಾಡುವ ಪ್ಯಾಕ್ಟರಿಗೆ ಹೊರಟು ಹೋಗಿದ್ದರು. ಆ ನಂತರ ಮನೆಯಲ್ಲಿ ಅವರ ಮಗಳು ಒಬ್ಬಳೇ ಇದ್ದಳು. ಸುಮಾರು ಮೂರುಗಂಟೆಗೆ ಕಮಲ್‌ಜಿತ್ ಕೌರ್ ಮನೆಗೆ ಮರಳಿ ಬಂದಾಗ ಮಗಳು ಬೆಡ್‌ನಲ್ಲಿ ಮಲಗಿರುವುದು ಕಾಣಿಸಿತ್ತು. ಹತ್ತಿರ ಬಂದು ನೋಡುವಾಗ ಯುವತಿಯ ಮೃತಳಾಗಿದ್ದಳು. ಕೊರಳಲ್ಲಿ ಗಾಯದ ಗುರುತು ಕಾಣಿಸುತ್ತಿತ್ತು. ಪೊಲೀಸರು ಸ್ಥಳಕ್ಕೆ ಬಂದು ತನಿಖೆ ಮುಂದುವರಿಸಿದ್ದಾರೆ.





