ಚರ್ಚೆಯೊಂದರಲ್ಲಿ ಪರ್ವರ್ಟ್ ಎಂದ ಅರ್ನಬ್ ಗೋಸ್ವಾಮಿಗೆ 50,000 ರೂ. ದಂಡ!

ಹೊಸದಿಲ್ಲಿ, ಮಾರ್ಚ್.16: ಸುದ್ದಿ ಹಾಗು ಚರ್ಚೆಯಲ್ಲಿ ನಿಷ್ಪಕ್ಷತೆ ಪಾಲಿಸುವುದಿಲ್ಲ ಎಂಬ ಆರೋಪ ಎದುರಿಸುತ್ತಿರುವ ಅರ್ನಬ್ ಗೋಸ್ವಾಮಿಯವರಿಗೆ ಐವತ್ತು ಸಾವಿರ ರೂ. ದಂಡ ವಿಧಿಸಲಾಗಿದೆ. ಟೈಮ್ಸ್ ನೌ ವಾಹಿನಿಯ ಸಂಪಾದಕರಾದ ಅರ್ನಬ್ ರಿಗೆ ಇದರಿಂದ ತೀವ್ರ ಮುಖಭಂಗವಾಗಿದೆ. ಗೋಸ್ವಾಮಿ ಸುದ್ದಿ ಮಂಡಿಸುವಾಗ ನಿಷ್ಪಕ್ಷತೆ ಪಾಲಿಸಿಲ್ಲ ಎಂದು ನ್ಯಾಶನಲ್ ಬ್ರಾಡ್‌ಕಾಸ್ಟಿಂಗ್ ಸ್ಟಾಂಡರ್ಡ್ ಅಥಾರಿಟಿ ಅವರಿಗೆ ಐವತ್ತು ಸಾವಿರ ರೂಪಾಯಿಯ ದಂಡ ವಿಧಿಸಿದೆ.
ವಿವಾದಾಸ್ಪದವಾದ ಜಸ್ಟಿನ್ ಕೌರ್ ಪ್ರಕರಣದಲ್ಲಿ ಅರ್ನಬ್ ನಡೆಸಿಕೊಟ್ಟ ಚರ್ಚೆಯಲ್ಲಿ ನಿಷ್ಪಕ್ಷತೆಯನ್ನು ಪಾಲಿಸಿಲ್ಲ ಎಂದು ದೂರು ನೀಡಲಾಗಿತ್ತು. ಆಮ್ ಆದ್ಮಿ ಪಾರ್ಟಿ ಕಾರ್ಯಕರ್ತೆ ಜಸ್ಟಿನ್ ಕೌರ್‌ನೊಡನೆ ಸರ್ಜಿತ್ ಎಂ ಯುವಕ ಕೆಟ್ಟದಾಗಿ ವರ್ತಿಸಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ನಡೆಸಿದ ಚರ್ಚೆಯಲ್ಲಿ ಪರ್ವರ್ಟ್ ಎಂದು (ಲೈಂಗಿಕ ವಿಕೃತಿ ತೋರಿಸುವವ) ಎಂದು ಕರೆದು ಅರ್ನಬ್ ಅವಹೇಳನಮಾಡಿದ್ದಾರೆ ಎಂದು ದೂರು ನೀಡಲಾಗಿತ್ತು.
ವಿಷಯದ ಅಧ್ಯಯನ ಮಾಡದೆ ಸರ್ಜಿತ್‌ರನ್ನು ಏಕಪಕ್ಷೀಯವಾಗಿ ಅಪರಾಧಿ ಎಂಬಂತೆ ಚಿತ್ರಿಸುವ ನಿಲುವು ವ್ಯಕ್ತಪಡಿಸಿದ್ದು ಇದನ್ನು ಎತ್ತಿ ಹಿಡಿದು ಅಥಾರಿಟಿ ಅರ್ನಬ್ರಿಗೆ ಜುಲ್ಮಾನೆ ವಿಧಿಸಿತು. ಜೆಎನ್‌ಯು ವಿದ್ಯಾರ್ಥಿಗಳ ಕುರಿತು ಚ್ಯಾನೆಲ್ ಚರ್ಚೆಯಲ್ಲಿ ಅರ್ನಬ್ ಗೋಸ್ವಾಮಿ ಏಕಪಕ್ಷೀಯವಾಗಿ ನಡೆದುಕೊಂಡಿದ್ದರು ಎಂದು ಅವರ ಮೇಲೆ ಬಲವಾದ ಆರೋಪ ವ್ಯಕ್ತವಾಗಿತ್ತು.
ಈ ತಿಂಗಳು 22ನೆ ತಾರೀಕಿಗೆ ಸ್ಪಷ್ಟವಾದ ಧ್ವನಿ ಮತ್ತು ಅಕ್ಷರಗಳಲ್ಲಿ ಕ್ಷಮಾಪಣೆ ಪ್ರಸಾರ ಮಾಡಬೇಕೆಂದು ಅಥಾರಿಟಿ ಸೂಚಿಸಿದೆ. ಜೆಎನ್‌ಯು ವಿದ್ಯಾರ್ಥಿಗಳ ವಿರುದ್ಧ ಅವರು ನಡೆಸಿದ ಆಕ್ಷೇಪಗಳಿಗೆ ಪ್ರತಿಯಾಗಿ ತನ್ನೊಂದಿಗೆ ಚರ್ಚೆ ಬನ್ನಿ ಎಂದು ಸಾಮಾಜಿಕ ಕಾರ್ಯಕರ್ತೆ ಕವಿತಾ ಕೃಷ್ಣ ಸವಾಲೊಡ್ಡಿದ್ದರು.







