ಪೆಟ್ರೋಲ್ ಲೀ.ಗೆ 3.07 ರೂ. , ಡೀಸೆಲ್ ಲೀ.ಗೆ 1.90 ರೂ. ಏರಿಕೆ

ಹೊಸದಿಲ್ಲಿ, ಮಾ.16: ಪೆಟ್ರೋಲ್‌ನ ಬೆಲೆ ಬುಧವಾರ ಲೀಟರ್‌ಗೆ ರೂ. 3.07ರಷ್ಟು ಏರಿದ್ದರೆ, ಡೀಸೆಲ್‌ನ ಬೆಲೆ ರೂ. 1.90ರಷ್ಟು ಹೆಚ್ಚಾಗಿದೆ. ಪರಿಷ್ಕೃತ ದರಗಳು ಇಂದು ಮಧ್ಯರಾತ್ರಿಯಿಂದ ಜಾರಿಯಾಗಲಿವೆ.
ಇಂದಿನ ಪರಿಷ್ಕರಣೆಯ ಬಳಿಕ ದಿಲ್ಲಿಯಲ್ಲಿ ಪೆಟ್ರೋಲ್‌ನ ಬೆಲೆ ಲೀ.ಗೆ ರೂ. 59.68. ಆದರೆ, ಡೀಸೆಲ್‌ನ ಬೆಲೆ ರೂ. 48.33 ಆಗಲಿದೆಯೆಂದು ಭಾರತೀಯ ತೈಲ ನಿಗಮ ತಿಳಿಸಿದೆ.
ಫೆ.29ರಂದು ಪೆಟ್ರೋಲ್ ಬೆಲೆಯನ್ನು ಕಡಿತಗೊಳಿಸಿ ಡೀಸೆಲ್ ಬೆಲೆಯನ್ನು ಹೆಚ್ಚಿಸಲಾಗಿತ್ತು.
Next Story





