ಮಂಜೇಶ್ವರ: ಬಾಲಕಿಯನ್ನು ಕೈಕಾಲುಕಟ್ಟಿ ರಸ್ತೆ ಬದಿ ಎಸೆತ-ನಿಗೂಢತೆ ಸೃಸ್ಟಿ
ಮಂಜೇಶ್ವರ : ಎಂಟರ ಹರೆಯದ ಬಾಲಕಿಚಿು ಕೈಕಾಲುಗಳನ್ನು ಕಟ್ಟಿ ರಸ್ತೆ ಬದಿ ಉಪೇಕ್ಷಿಸಿದ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ಕುಂಟಾರು ಬಳಿ ನಡೆದಿದ್ದು,ಹಲವು ಅನುಮಾನಗಳಿಗೆ ಕಾರಣವಾಗಿದೆ.
ಕುಂಟಾರು ಅಂಗನವಾಡಿ ಬಳಿಯ ರಿಸ್ವಾನ್ ಎಂಬವರ ಪುತ್ರಿ ನೈಲ(8)ಎಂಬಾಕೆ ಮಂಗಳವಾರ ಬೆಳಿಗ್ಗೆ ಅಂಗನವಾಡಿ ಬಳಿ ಮರಬಳ್ಳಿಗಳಿಂದ ಕೈಕಾಲುಗಳನ್ನು ಕಟ್ಟಿಹಾಕಿದ ಸ್ಥಿತಿಯಲ್ಲಿ ಕಂಡುಬಂದಳು.ಇದನ್ನು ಗಮನಿಸಿದ ನಾಗರಿಕರು ತಕ್ಷಣ ಮನೆಯವರಿಗೆ ಹಾಗೂ ಪೋಲೀಸರಿಗೆ ಮಾಹಿತಿ ನೀಡಿದರು.ಪೋಲೀಸರು ಆಗಮಿಸಿ ಬಾಲಕಿಯಿಂದ ಮಾಹಿತಿ ಸಂಗ್ರಹಿಸಿದರು.ಕಪ್ಪು ಬಣ್ಣದ ಕಾರಿನಲ್ಲಿ ತಲಪಿದ ನಾಲ್ವರ ತಂಡ ತನ್ನನ್ನು ಅಪಹರಿಸಲೆತ್ನಿಸಿತೆಂದೂ ಅದಕ್ಕೆ ವಿರೋಧ ವ್ಯಕ್ತಪಡಿಸಿದಾಗ ಕೈಕಾಲುಗಳನ್ನು ಕಟ್ಟಿ ಕುಂಟಾರು ಅಂಗನವಾಡಿ ಬಳಿ ಉಪೇಕ್ಷಿಸಿ ಪರಾರಿಯಾಗಿದೆಯೆಂದು ಬಾಲಕಿ ಪೋಲೀಸರಿಗೆ ನೀಡಿದ ಹೇಳಿಕೆಯಲ್ಲಿ ತಿಳಿಸಿದ್ದಾಳೆ.ಬಾಲಕಿಚಿು ಹೇಳಿಕೆಯ ಬಗ್ಗೆ ಪೋಲೀಸರು ಸಂಶಚಿು ವ್ಯಕ್ತಪಡಿಸಿದ್ದು,ಆದರೆ ಆಕೆಯ ಹೇಳಿಕೆಯನನು ದಾಖಲಿಸಿ ಆದೂರು ಪೋಲೀಸರು ಪ್ರಕರಣ ದಾಖಲಿಸಿದ್ದಾರೆ.ಬಾಲಿಕಿಯನ್ನು ಅಪಹರಿಸುವುದಿದ್ದರೆ ಕಾಡುಬಳ್ಳಿಗಳಿಂದ ಕಟ್ಟುವ ಅಗತ್ಯವಿತ್ತೇ ಎಂದು ಪೋಲೀಸರು ಸಂಶಯ ವ್ಯಕ್ತಪಡಿಸುತ್ತಾರೆ.





