ಪುತ್ತೂರು ದೇವಸ್ಥಾನ ಜಾತ್ರೋತ್ಸವ : ಸಂಘಪರಿವಾರದಿಂದ ಅನಗತ್ಯ ಗೊಂದಲ - ಸಚಿವ ರೈ

ಮಂಗಳೂರು, ಮಾ. 16: ಮುಂದಿನ ಎಪ್ರಿಲ್ 10ರಿಂದ 19ರವರೆಗೆ ನಡೆಯಲಿರುವ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಜಾತ್ರೋತ್ಸವ ಕಾರ್ಯಕ್ರಮದ ಆಹ್ವಾನ ಪತ್ರಿಕೆಯಲ್ಲಿ ಜಿಲ್ಲಾಧಿಕಾರಿ ಎ.ಬಿ.ಇಬ್ರಾಹೀಂ ಅವರ ಹೆಸರು ಮುದ್ರಿಸಿರುವ ಬಗ್ಗೆ ಅನಗತ್ಯ ಸಂಘಪರಿವಾರದವರು ಅನಗತ್ಯ ಗೊಂದಲ ಸೃಷ್ಟಿ ಮಾಡುತ್ತಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಪ್ರತಿಕ್ರಿಯಿಸಿದ್ದಾರೆ.
ಪತ್ರಿಕೆಯೊಂದಿಗೆ ಮಾತನಾಡಿದ ಅವರು, ಧಾರ್ಮಿಕ ದತ್ತಿ ಕಾಯ್ದೆ ಸೆಕ್ಷನ್ 7ರ ಪ್ರಕಾರ ದೇವಸ್ಥಾನದ ಪೂಜೆ ವಿಧಿ ವಿಧಾನಕ್ಕೆ ಮಾತ್ರ ಹಿಂದೂ ಅಧಿಕಾರಿಗಳು ಇರಬೇಕು. ಆದರೆ ಕಾರ್ಯಕ್ರಮಕ್ಕೆ ಅನ್ಯ ಧರ್ಮೀಯರೊಬ್ಬರನ್ನು ಆಹ್ವಾನಿಸುವುದು ಹೆಮ್ಮೆಯ ವಿಚಾರ. ದೇವಸ್ಥಾನದ ಜಾತ್ರಾ ಮಹೋತ್ಸವದ ಆಹ್ವಾನ ಪತ್ರಿಕೆಯಲ್ಲಿ ಜಿಲ್ಲಾಧಿಕಾರಿಯವರ ಹೆಸರು ಮುದ್ರಿಸಿರುವುದು ಸರಿಯಾಗಿದೆ ಎಂದರು.
ಈ ಬಗ್ಗೆ ಸಂಘಪರಿವಾರದವರು ಅನಗತ್ಯ ಗೊಂದಲವನ್ನು ಸೃಷ್ಟಿ ಮಾಡಿದ್ದಾರೆ. ಈ ಮೂಲಕ ಸಂಘಪರಿವಾರ ಧಾರ್ಮಿಕ ಅಸಹಿಷ್ಣುತೆಯ ವಾತಾವರಣ ಸೃಷ್ಟಿ ಮಾಡಲು ಯತ್ನಿಸುತ್ತಿದೆ ಎಂದರು.
Next Story





