ವಿಮಾನಗಳಲ್ಲಿ ಭಾರತೀಯರು ನಂ.1 ಸಹಿಷ್ಣುಗಳು
ಮುಂಬೈ,ಮಾ.16: ಭಾರತೀಯರು ವಿಮಾನಗಳಲ್ಲಿ ಪ್ರಯಾಣಿಸುವಾಗ ತಮ್ಮ ಮಕ್ಕಳ ಅಳು,ಕಿರುಚಾಟ ಅಥವಾ ದುರ್ನಡತೆಗಳ ಬಗ್ಗೆ ಅಸಡ್ಡೆ ಪ್ರದರ್ಶಿಸುವ ಹೆತ್ತವರತ್ತ ಅತ್ಯಂತ ಹೆಚ್ಚಿನ ಸಹಿಷ್ಣುತೆಯನ್ನು ಹೊಂದಿರುತ್ತಾರೆ ಎಂದು ವಿಮಾನಯಾನಗಳಲ್ಲಿ ಪ್ರಯಾಣಿಕರ ವರ್ತನೆಗಳು ಮತ್ತು ಆದ್ಯತೆಗಳ ಕುರಿತು ಇತ್ತೀಚೆಗೆ ನಡೆಸಿದ ಸಮೀಕ್ಷೆಯೊಂದು ಹೇಳಿದೆ. ಭಾರತದೊಡನೆ ಚೀನಾ ಮತ್ತು ಹಾಂಗ್‌ಕಾಂಗ್‌ನ ಪ್ರವಾಸಿಗಳೂ ತಮ್ಮ ಮಕ್ಕಳ ವರ್ತನೆಯ ಬಗ್ಗೆ ಅಸಡ್ಡೆ ತೋರುವ ಹೆತ್ತವರ ಬಗ್ಗೆ ಸಹಿಷ್ಣುತೆಯನ್ನು ಹೊಂದಿದ್ದಾರೆ ಎಂದು ಎಕ್ಸ್‌ಪೀಡಿಯಾ ಪ್ಯಾಸೆಂಜರ್ ಪ್ರಿರನ್ಸ್ ಇಂಡೆಕ್ಸ್ 2016 ಹೇಳಿದೆ.
ಮೆಕ್ಸಿಕೋ,ನಾರ್ವೆ,ನ್ಯೂಝಿಲೆಂಡ್‌ನ ಜನರು ಮಾತ್ರ ಹೆತ್ತವರ ಇಂತಹ ವರ್ತನೆಯನ್ನು ಎಳ್ಳಷ್ಟೂ ಸಹಿಸುವುದಿಲ್ಲ ಎಂದು ಸಮೀಕ್ಷೆಯು ಹೇಳಿದೆ.
Next Story





