ರೌಡಿ ಶೀಟರ್ ಅಲ್ಲ
ಮಾನ್ಯರೇ, ವಾರ್ತಾಭಾರತಿ ದೈನಿಕದ ದಿನಾಂಕ 16.3.16ರ ಸಂಚಿಕೆಯಲ್ಲಿ ಪ್ರಕಟವಾದ ‘ಕ್ರಿಮಿನಲ್ ಆರೋಪಿಗಳಿಗೆ ಪರಿಹಾರ ಎಷ್ಟು ಸರಿ?’ ಎಂಬ ಸಂಪಾದಕೀಯದಲ್ಲ್ಲಿ ದಿವಂಗತ ಮಾಡೂರು ಯೂಸ್ಫ್ ಎಂಬುವವರ ಬಗ್ಗೆ ಮಾನಹಾನಿಕರವಾದ 1. ನಾಮಧಾರಿ ಮುಸ್ಲಿಮ್ 2. ರೌಡಿಶೀಟರ್ ಎಂಬ ಪದ ಬಳಸಲಾಗಿದೆ. ನಾನು ಅವರ ಸೋದರನನಾಗಿದ್ದು, ಈ ಪದ ಬಳಸಿರುವುದು ನಮಗೆ ತುಂಬಾ ಬೇಸರವನ್ನು ತಂದಿದೆ. ಅದಲ್ಲದೆ, ಆತನಿಗೆ ಸಂಬಂಸಿದ ಬಹುತೇಕ ಪ್ರಕರಣಗಳು ನ್ಯಾಯಾಲಯ ಖುಲಾಸೆಗೊಂಡಿದ್ದು, ಕೆಲವೊಂದು ಪ್ರಕರಣ ವಿಚಾರಣೆಗೆ ಬಾಕಿಯಿತ್ತು. ನ್ಯಾಯಾಲಯವು ಆತನನ್ನು ರೌಡಿಯೆಂದು ಘೋಷಿಸಿರಲಿಲ್ಲ. ಅದಲ್ಲದೆ ನ್ಯಾಯಾಂಗ ಬಂಧನದಲ್ಲಿರುವಾಗ ಹತ್ಯೆಯಾದುದರಿಂದ ನಾವು ಪರಿಹಾರ ಮತ್ತು ನ್ಯಾಯ ಕೋರಿ ಹೈಕೋರ್ಟ್ ಮೆಟ್ಟಲೇರಲಿದ್ದೇವೆ. ಮೇಲಿನ ಪದ ಬಳಕೆ ತಪ್ಪು ಮಾಹಿತಿಯಾಗಿದೆ ಎಂದು ನಾನು ಹೇಳಲು ಇಚ್ಚಿಸುತ್ತೇನೆ.
-ಮೊಹಿದ್ದೀನ್
(ಮಾಡೂರು ಯೂಸ್ಫ್ ಸೋದರ)
Next Story





