ಕಕ್ಕಸು ಗುಂಡಿ ಶುಚಿಗೊಳಿಸುತ್ತಿದ್ದ ನಾಲ್ವರು ಕಾರ್ಮಿಕರ ದಾರುಣ ಸಾವು

ನಾಗಪುರ,ಮಾ.16: ಇಲ್ಲಿ ಕಕ್ಕಸಿನ ಗುಂಡಿಯನ್ನು ಸ್ವಚ್ಛಗೊಳಿಸುತ್ತಿದ್ದ ಒಂದೇ ಕುಟುಂಬಕ್ಕೆ ಸೇರಿದ ನಾಲ್ವರು ಸ್ವಚ್ಛತಾ ಕಾರ್ಮಿಕರು ವಿಷ ಅನಿಲ ಸೇವನೆಯಿಂದ ಸಾವನ್ನಪ್ಪಿದ್ದಾರೆ. ವಿಷಾನಿಲ ಸೇವನೆಯಿಂದ ತೀವ್ರ ಅಸ್ವಸ್ಥಗೊಂಡಿರುವ ಇನ್ನೋರ್ವ ಕಾರ್ಮಿಕನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಇಸ್ಸಾನಿ ಪ್ರದೇಶದ ಖಾಸಗಿ ಹೌಸಿಂಗ್ ಸೊಸೈಟಿಯಲ್ಲಿ ಮಂಗಳವಾರ ಈ ದುರಂತ ಸಂಭವಿಸಿದ್ದು, ಸೊಸೈಟಿಯ ಅಧ್ಯಕ್ಷರ ವಿರುದ್ಧ ಪೊಲೀಸ್ ಪ್ರಕರಣ ದಾಖಲಾಗಿದೆ.
ಮಲದ ಗುಂಡಿಗೆ ಇಳಿದ ನಾಲ್ವರು ಅಲ್ಲೇ ಉಸಿರುಗಟ್ಟಿ ಮೃತಪಟ್ಟಿದ್ದಾರೆ. ಅವರನ್ನು ರಕ್ಷಿಸುವ ಕಾರ್ಯವೂ ವಿಫಲವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೃತರನ್ನು ಸುನೀಲ್ ನೆಕ್ರಮ್ ವಾಲ್ಮೀಕಿ, ಆತನ ಪುತ್ರ ರಿಂಕಿ, ಸುಮಿತ್ ದಿನೇಶ್ ವಾಲ್ಮೀಕಿ ಮತ್ತು ಬಾಲು ನಾಮ್‌ದೇವ್ ಮಸಾತೆ ಎಂದು ಗುರುತಿಸಲಾಗಿದೆ. ಇನ್ನೋರ್ವ ಕಾರ್ಮಿಕ ಪ್ರಮೋದ್ ಚವಾಣ್ ಸ್ಥಿತಿ ಗಂಭೀರವಾಗಿದೆ.
Next Story





