ಮುಂಡಗೋಡ :ಬಯಲು ಮುಕ್ತ ಶೌಚ ದಿಂದ ಮುಕ್ತಗೊಳಿಸಲು ಟೊಂಕ ಕಟ್ಟಿ ನಿಂತಿರುವ ಪ.ಪಂ ಮುಖ್ಯಾಧಿಕಾರಿ ಸಂಗನಬಸಯ್ಯ

ಮುಂಡಗೋಡ : ಪಟ್ಟಣ ಪಂಚಾಯತ ಮುಂಡಗೋಡ ಪಟ್ಟಣದಲ್ಲಿ ಬಯಲು ಮುಕ್ತ ಶೌಚಾಲಯಕ್ಕೆ ಟೊಂಕು ಕಟ್ಟಿ ನಿಂತಿದೆ ಪಟ್ಟಣ ನೈರ್ಮಲಿಕರಣಕ್ಕೆ ಮೊದಲ ಆದ್ಯತೆ ನೀಡಲಾಗಿದೆ.
ಪ್ರಸ್ತುತ ವರ್ಷ 104 ಶೌಚಾಲಯಗಳ ಟಾರ್ಗೇಟ್ ಇದೆ. ಮುಂದಿನ ಆರ್ಥಿಕ ವರ್ಷದಲ್ಲಿ ಹೆಚ್ಚಿನ ಶೌಚಾಲಯಗಳ ಟಾರ್ಗೇಟ್ ನೀಡಬಹುದು. ಮುಂದಿನ ದಿನಗಳಲ್ಲಿ ಮುಂಡಗೋಡ ನೈರ್ಮಲಿಕರಣಕ್ಕೆ ಹೆಸರುಮಾಡಲಿದೆ ಈ ಕುರಿತು ಅತಿ ಹೆಚ್ಚಿನ ಮುತುವರ್ಜಿ ವಹಿಸಿಲಾಗುವುದು ಎಂದು ಪಟ್ಟಣಪಂಚಾಯತ ಮುಖ್ಯಾಧಿಕಾರಿ ತಿಳಿಸಿದ್ದಾರೆ
ಬಯಲು ಶೌಚ ಪಟ್ಟಣದಲ್ಲಿ ಇನ್ನೂ ಜೀವಂತವಾಗಿದೆ ಎಂದು ಅರಿತ ಪಟ್ಟಣ ಪಂಚಾಯತ ಮುಖ್ಯಾಧಿಕಾರಿ ಸಂಗನಬಸಯ್ಯ, ಹಿಂದಿನ ಅಧ್ಯಕ್ಷ ಫಣಿರಾಜ ಹದಳಗಿ ಜತೆ ಕೈ ಜೋಡಿಸಿದ ಸದಸ್ಯರು ಹಾಗು ಸಿಬ್ಬಂದಿ ಸ್ವಚ್ಚ ಭಾರತ ಅಭಿಯಾನದ ಸಂದೇಶ ಸೆಪ್ಟಂಬರನಲ್ಲಿ ಬರುತ್ತಿದ್ದಂತೆ ಅಕ್ಟೋಬರ 2 ರಂದು ಕಾರ್ಯ ಪ್ರರ್ವತರಾದ ಪಟ್ಟಣ ಪಂಚಾಯತ ಸದಸ್ಯರು ಪಟ್ಟಣಕ್ಕೆ ಎಷ್ಟು ಶೌಚಾಲಯ ಬೇಕು ಎಂಬುದನ್ನು ಪಟ್ಟಣದ ತುಂಬಾ ಸುತ್ತಾಡಿ ಮನೆಮನೆಗಳಿಗೆ ಹೋಗಿ ಮಾಹಿತಿ ಪಡೆದು ಸುಮಾರು 900ಕ್ಕಿಂತ ಹೆಚ್ಚು ಶೌಚಾಲಯ ಪಟ್ಟಣಕ್ಕೆ ಬೇಕಾಗಿದೆ ಎಂದ ಅರಿತ ಇವರು ಶೌಚಾಲಯದ ಕುರಿತು ಕರಪತ್ರಗಳನ್ನು ಹಂಚಿ ಜನರಲ್ಲಿ ಶೌಚಾಲಯದ ಕುರಿತು ಜಾಗ್ರತೆ ಮೂಡಿಸಿದರು. ಶೌಚಾಲಯಕ್ಕೆ ಸರಕಾರದಿಂದ ಬಂದಂತಹ ಅನುದಾನ ಸದುಪಯೋಗ ಪಡಿಸಿಕೊಳ್ಳಲು ವಿನಂತಿಸಿದ ಫಲವಾಗಿ ಜನರು ಶೌಚಾಲಯ ನಿರ್ಮಾಣಗೊಳಿಸಿಕೊಳ್ಳಲು ಅರ್ಜಿ ಸಲ್ಲಿಸಲು ಪ್ರಾರಂಭಿಸಿದರು ಇಲ್ಲಿಯ ವರೆಗೆ 425 ಮನೆಗಳಿಗೆ ಶೌಚಾಲಯ ಬೇಕೆಂದು ಅರ್ಜಿ ಸಲ್ಲಿಸಿದರು ಈ ಅರ್ಜಿಗಳಲ್ಲಿ 360 ವೈರಿಫೈಯಿಡಾಗಿ ಅಪ್ರೂ ಆಗಿವೆ.
ಶೌಚಾಲಯ ಫಲಾನುಭವಿ ಪ್ರತಿಯೊಬ್ಬರಿಗೆ ಸರಕಾರದ ಗೈಡ್ ಲೈನ್ ಪ್ರಕಾರ ಪ್ರತಿಯೊಬ್ಬ ಫಲಾನುಭವಿಗೆ 15000=00 ಕೊಡಲಾಗುವುದು. ಈ ಹದಿನೈದು ಸಾವಿರ ರೂ ದಲ್ಲಿ ಕೇಂದ್ರ ಸರಕಾರ 4000=00 ರೂ, ರಾಜ್ಯ ಸರಕಾರ 1333=00 ನೀಡುತ್ತದೆ ಕೇಂದ್ರ ಹಾಗು ರಾಜ್ಯ ಸರಕಾರದ 5333=00 ಅನುದಾನದಲ್ಲಿ ಮೊದಲನೇ ಕಂತು 2000=00 ರೂ ಎರಡನೇ ಕಂತಾಗಿ 3333=00 ಒಟ್ಟು 53333=00 ಇದರಲ್ಲಿ ಉಳಿದ ಹಣವನ್ನು ಅರ್ಜಿಯ ಜೇಷ್ಠತಾ ಪ್ರಕಾರ ಪಟ್ಟಣ ಪಂಚಾಯತ ನಿಧಿಯಿಂದ 9667=00 ನೀಡುತ್ತದೆ
110 ಫಲಾನುಭವಿಗಳಿಗೆ ಮೊದಲನೇ ಕಂತಿನ ಚೆಕ್ ನೀಡಲಾಗಿದೆ. 40 ಫಲಾನುಭವಿಗಳು ಈಗಾಗಲೇ ಶೌಚಾಲಯ ನಿರ್ಮಸಿಕೊಂಡಿದ್ದಾರೆ ಒಂದನೇ ಕಂತಿನ ಹಣ ಎರಡು ಲಕ್ಷ ಐವತ್ತು ಸಾವಿರ ಹಾಗು ಎರಡನೇ ಕಂತಿನ ಹಣ 615000=00ರೂ ಬಂದಿದೆ.
ಪಟ್ಟಣ ಪಂಚಾಯತ 24.10% ಎಸ್.ಎಫ್.ಸಿ ನಿಧಿಯಿಂದ ಎಸ್.ಸಿ & ಎಸ್.ಟಿ ಕುಟುಂಬಕ್ಕೆ 385000=00 ರೂ ದಲ್ಲಿ 38 ಶೌಚಾಲಯಗಳು ಜನರಲ್ 7.25% ನಿಧಿಯಿಂದ 162442=00 16 ಶೌಚಾಲಯಗಳು ಅಂಗವಿಕಲ 3% ನಿಧಿಯಿಂದ 111628=00 11 ಶೌಚಾಲಯಗಳನ್ನು ನಿರ್ಮಿಸಲು ಪ.ಪಂ ತೆಗೆದಿರಿಸಿದೆ. ಪ್ರಸ್ತುತ ವರ್ಷ 104 ಶೌಚಾಲಯಗಳನ್ನು ನಿರ್ಮಿಸಲು ಪ.ಪಂ ಪಣತೊಟ್ಟಿದೆ.
ಮುಂದಿನ ದಿನಗಳಲ್ಲಿ ಶೌಚಾಲಯ ಜಾಗ್ರತೆ ಕುರಿತು ವಿವಿಧ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು. ಗೋಡೆ ಬರಹ ಮೂಲಕ ಸ್ವಚ್ಚ ಅಭಿಯಾನಕ್ಕೆ ಒತ್ತು ನೀಡಲಾಗಿದೆ.ಪಟ್ಟಣದ ಧ್ವನಿವರ್ಧಕದ ಮೂಲಕ ಪ್ರತಿದಿನ ಸ್ವಚ್ಚತೆ ಕುರಿತು ಮಾಹಿತಿ ನೀಡುತ್ತಿದ್ದೇವೆ. ಮನೆ ಮನೆ ಗಳಿಗೆ ಭೇಟಿ ನೀಡಿ ಶೌಚಾಲಯ ಯಾರಿಗೆ ಇಲ್ಲವೊ ಅವರಿಗೆ ಶೌಚಾಲಯ ನಿರ್ಮಿಸಿಕೊಳ್ಳಲು ಅನುಕೂಲ ಮಾಡಿಕೊಳ್ಳಲಾಗುವುದು. ಯಾರಿಗೆ ಶೌಚಾಲಯವಿಲ್ಲವೋ ಅಂಥವರು ತಕ್ಷಣ ಅರ್ಜಿ ಸಲ್ಲಿಸಿ ಸರಕಾರದ ಕಾರ್ಯಕ್ರಮವನ್ನು ಸದುಪಯೋಗ ಪಡಿಸಿಕೊಳ್ಳಲು ವಿನಂತಿಸಲಾಗುವುದು ಎಂದು ಹೇಳಿದರು
ಶೌಚಾಲಯ ವಿಷೇಶ ಜಾಗ್ರತೆ ಮೂಡಿಸಲು ವಿಕಾಸ ಸೇವಾ ಸಂಸ್ಥೆ ಮಂಚಿಕೇರಿ ಪಟ್ಟಣದ ಪ್ರತಿಯೊಂದು ವಾರ್ಡಿಗೆ ಪ.ಪಂ ಸದಸ್ಯರ ಜತೆ ತೆರಳಿ ದಿ.21-3-2016 ದಿಂದ 23-3-2016 ದವರೆಗೆ ನೈರ್ಮಲ್ಯದ ಅರಿವು ಮೂಡಿಸಲಿದೆ ಎಂದು ಬಯಲು ಮುಕ್ತ ಶೌಚ ಪಟ್ಟಣದಿಂದ ಮುಕ್ತಿಗೊಳಿಸಲು ಟೊಂಕ ಕಟ್ಟಿ ನಿಂತಿರುವ ಪ.ಪಂ ಮುಖ್ಯಾಧಿಕಾರಿ ಸಂಗನಬಸಯ್ಯ ಹೇಳಿದರು.







