ಎಸ್.ಸಿ.ಎಸ್. ನರ್ಸಿಂಗ್ ಕಾಲೇಜಿನ ಪದವಿ ಪ್ರದಾನ ಸಮಾರಂಭ

ಎಸ್. ಸಿ. ಎಸ್. ಕಾಲೇಜ್ ಆ್ ನರ್ಸಿಂಗ್ ಸೈನ್ಸಸ್, ಅಶೋಕನಗರ, ಮಂಗಳೂರು ಇದರ18ನೇ ಪದವಿ ಪ್ರದಾನ ಸಮಾರಂಭ ಇತ್ತೀಚೆಗೆ ನಗರದ ಸೈಂಟ್ ಸೆಬಾಸ್ಟಿಯನ್ ಹಾಲ್ ನಲ್ಲಿ ಜರಗಿತು.
ಸಮಾರಂಭದ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಾದರ್ ಮುಲ್ಲರ್ಸ್ ಮೆಡಿಕಲ್ ಕಾಲೇಜ್ ಆಸ್ಪತ್ರೆಯ ಮುಖ್ಯ ನರ್ಸಿಂಗ್ ಅಧಿಕಾರಿ ಸಿಸ್ಟರ್ ಐಲೀನ್ ಮಥಾಯಸ್ ಅವರು ಪದವಿ ಪಡೆಯುವುದು ವಿದ್ಯೆಯ ಮುಕ್ತಾಯವಲ್ಲ, ಜೀವನದ ಹೊಸ ಆರಂಭ. ಕಲಿಕೆ ನಿರಂತರವಾಗಿರಬೇಕು. ಸಮಾಜದ ಒಳಿತಿಗಾಗಿ ಪಡೆದ ವಿದ್ಯೆಯನ್ನು ವಿನಿಯೋಗಿಸಬೇಕು. ನಿಮ್ಮ ಜೀವನವನ್ನು ರೂಪಿಸುವಲ್ಲಿ ಹೆತ್ತವರ ಹಾಗೂ ಶಿಕ್ಷಕರ ತ್ಯಾಗವನ್ನು ಜೀವನದ ಯಾವ ಹಂತದಲ್ಲೂ ಮರೆಯಬಾರದು. ಅವರು ತೋರಿದ ದಾರಿಯಲ್ಲಿ ಮುನ್ನಡೆದು ಕಲಿತ ವಿದ್ಯಾಸಂಸ್ಥೆಗೆ ಹಾಗೂ ಹೆತ್ತವರಿಗೆ ಚಿರಋಣಿಯಾಗಿರಬೇಕು ಎಂದು ಉಪದೇಶಿಸಿದರು.
ಕರ್ನಾಟಕ ಎಜುಕೇಶನಲ್ ಮತ್ತು ಚಾರಿಟೇಬಲ್ ಟ್ರಸ್ಟ್ ಇದರ ಟ್ರಸ್ಟಿ ಡಾ. ರಜನೀಶ್ ಸೊರಕೆ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದರು. ಕಾಲೇಜಿನ ಪ್ರಾಂಶುಪಾಲರಾದ ಲೋಲಿಟಾ ಎಸ್. ಎಂ. ಡಿಸೋಝ ಅವರು ವಾರ್ಷಿಕ ವರದಿ ಮಂಡಿಸಿದರು. ಆಡಳಿತಾಧಿಕಾರಿ ಯು.ಕೆ. ಖಾಲಿದ್ ಸ್ವಾಗತಿಸಿದರು.
ಈ ಸಂದರ್ಭದಲ್ಲಿ ಬಿ.ಎಸ್ಸಿ. ಮತ್ತು ಪಿ.ಬಿ.ಬಿ.ಎಸ್ಸಿ. ನರ್ಸಿಂಗ್ ನ ಒಟ್ಟು60ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು. ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳನ್ನೂ ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಉಪ ಪ್ರಾಂಶುಪಾಲರಾದ ಗ್ರೀಶಾ ಜೋಸ್ ವಂದನಾರ್ಪಣೆಗೈದರು.
ಬಳಿಕ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರಗಿತು.
ವಿವಿಧ ವಿಭಾಗಗಳ ಮುಖ್ಯಸ್ಥರು, ಬೋಧಕ ಮತ್ತು ಬೋಧಕೇತರ ಸಿಬ್ಬಂದಿ, ಪೋಷಕರು, ವಿದ್ಯಾರ್ಥಿಗಳು, ಆಮಂತ್ರಿತರು ಸೇರಿದಂತೆ ಹಲವಾರು ಗಣ್ಯರು ಈ ಸಮಾರಂಭದಲ್ಲಿ ಉಪಸ್ಥಿತರಿದ್ದರು.







