ರಾಜಕೀಯ ಬ್ಯಾನರ್ ತೆಗೆದ ತಪ್ಪಿಗೆ ಅಮೆರಿಕಾದ ವಿದ್ಯಾರ್ಥಿಗೆ 15 ವರ್ಷ ಕಠಿಣ ಜೈಲು ಶಿಕ್ಷೆ ವಿಧಿಸಿದ ಉತ್ತರ ಕೊರಿಯ !

ಪ್ಯೋಂಗ್ಯಾಂಗ್ : ಉತ್ತರ ಕೊರಿಯಾದರಾಜಧಾನಿ ಪ್ಯೋಂಗ್ಯಯೆಂಗ್‌ನಲ್ಲಿ ತಾನು ನೆಲೆಸಿದ ಹೊಟೆಲ್ ಒಂದರ ನಿರ್ಬಂಧಿತ ಪ್ರದೇಶಕ್ಕೆ ಪ್ರವೇಶಿಸಿ ಅಲ್ಲಿದ್ದರಾಜಕೀಯ ಬ್ಯಾನರ್ ಒಂದನ್ನು ಕಳ್ಳತನಗೈಯ್ಯಲು ಯತ್ನಿಸಿದ್ದಆರೋಪದ ಮೇಲೆ ಬಂಧಿತನಾಗಿದ್ದ ವರ್ಜೀನಿಯಾ ವಿಶ್ವವಿದ್ಯಾನಿಲಯದ ಅರ್ಥಶಾಸ್ತ್ರ ವಿದ್ಯಾರ್ಥಿ ಅಮೆರಿಕಾದ ಒಟ್ಟೋ ವಾರ್ಮ್‌ಬಿಯರ್ (21) ಎಂಬಾತನಿಗೆ ಅಲ್ಲಿನ ಅತ್ಯುನ್ನತ ನ್ಯಾಯಾಲಯವು ದೇಶದ ವಿರುದ್ಧ ನಡೆಸಿದ ಅಪರಾಧಕ್ಕಾಗಿ ಬುಧವಾರ 15 ವರ್ಷಗಳ ಕಠಿಣ ಶಿಕ್ಷೆ ವಿಧಿಸಿದೆ. ಇತ್ತೀಚೆಗೆಉತ್ತರ ಕೊರಿಯಾ ನಡೆಸಿದ ಅಣ್ವಸ್ತ್ರ ಪರೀಕ್ಷೆಯ ನಂತರ ವಿಶ್ವಸಂಸ್ಥೆ ಭದ್ರತಾ ಮಂಡಳಿ ಅದರ ವಿರುದ್ಧ ಹೊಸ ನಿರ್ಬಂಧಗಳನ್ನು ಹೇರಲು ಒಪ್ಪಿದ ತರುವಾಯ ಈ ಬೆಳವಣಿಗೆ ನಡೆದಿದ್ದು ಬುಧವಾರ ವೈಟ್ ಹೌಸ್ ಕೂಡ ಉತ್ತರ ಕೊರಿಯ ವಿರುದ್ಧ ಹೊಸ ನಿರ್ಬಂಧಗಳನ್ನು ಹೇರಿತು.
ಇದೀಗ ದೋಷಿಯೆಂದು ಘೋಷಿತನಾಗಿರುವ ವಾರ್ಮ್‌ಬಿಯರ್ ಲಿಖಿತ ಹೇಳಿಕೆಯೊಂದನ್ನು ಓದಿಒಹ್ಯೋದಲ್ಲಿರುವ ಫ್ರೆಂಡ್‌ಶಿಪ್ ಯುನೈಟೆಡ್ ಮೆಥೋಡಿಸ್ಟ್ ಚರ್ಚಿನ ಸದಸ್ಯೆಯಾಗಿರುವ ತನ್ನ ಸ್ನೇಹಿತನೊಬ್ಬನ ತಾಯಿಯೊಬ್ಬರುಈ ಬ್ಯಾನರನ್ನುಉತ್ತರ ಕೊರಿಯಾದ ‘ಟ್ರೋಫಿ’ಯೆಂದು ತಿಳಿದು ಅದರೊಂದಿಗೆ ಹಿಂದಿರುಗಿದರೆ ಹಳೆಯ ಕಾರೊಂದನ್ನು 10,000 ಡಾಲರ್‌ಗೆ ನೀಡುವುದಾಗಿ ಭರವಸೆ ನೀಡಿದ್ದರೆಂದು ಹೇಳಿದ್ದಾನೆ. ಆದರೆ ಆತ ಹೇಳಿದ ಮಹಿಳೆಯ ಬಗ್ಗೆ ತಮಗೆ ಗೊತ್ತಿಲ್ಲವೆಂದು ಚರ್ಚ್ ಅಧಿಕಾರಿಗಳು ಹೇಳಿದ್ದಾರೆ.
ತನ್ನ ಹೇಳಿಕೆ ನೀಡುವಾಗ ವಾರ್ಮ್‌ಬಿಯರ್‌ನ ಕಣ್ಣೀರು ಕೋಡಿಯಾಗಿ ಹರಿದು ತಾನು ತನ್ನ ಜೀವನದ ಅತ್ಯಂತ ದೊಡ್ಡ ತಪ್ಪು ಮಾಡಿದ್ದೇನೆಂದು ಹೇಳಿದ್ದಾನೆ.
ಪ್ಯೋಂಗ್ಯಯೆಂಗ್‌ನಿಂದ ಬೀಜಿಂಗಿಗೆ ತೆರಳಲು ಆತ ವಿಮಾನ ನಿಲ್ದಾಣಕ್ಕೆ ಜನವರಿ ತಿಂಗಳಲ್ಲಿ ಹೋದಾಗ ಅಲ್ಲಿಆತನ ಬಂಧನವಾಗಿತ್ತು. ಬೀಜಿಂಗ್ ಭೇಟಿಯನ್ನು ಯಂಗ್ ಪಯೊನೀರ್ ಟೂರ್ಸ್ ಆಯೋಜಿಸಿತ್ತು.
ವಾರ್ಮ್‌ಬಿಯರ್ ಹೆತ್ತವರು ಉತ್ತರ ಕೊರಿಯಾ ಆಡಳಿತಕ್ಕೆ ಆತನ ಮೇಲೆ ಕರುಣೆ ತೋರಿಸುವಂತೆ ಕೇಳಿಕೊಂಡಿದೆ. ಆತನಿಗೆ ಕ್ಷಮಾದಾನ ನೀಡಿ ಬಿಡುಗಡೆಗೊಳಿಸುವಂತೆ ವೈಟ್‌ಹೌಸ್ ಕೂಡ ಆಗ್ರಹಿಸಿದೆ.
ಕೆನಡಾದ ಕ್ರೈಸ್ತ ಧಾರ್ಮಿಕ ಗುರು ಹೈಯೋನ್ ಸೂ ಲಿಮ್ ಅವರಿಗೆ ಉತ್ತರ ಕೊರಿಯ ಕಳೆದ ವರ್ಷ ದೇಶದ್ರೋಹದ ಆರೋಪದ ಮೇಲೆ ಜೀವಾವಧಿ ಕಠಿಣ ಶಿಕ್ಷೆ ವಿಧಿಸಿತ್ತು.







