ಇದು ಬೂಟಾಟಿಕೆ ! ರಾಷ್ಟ್ರೀಯತೆ ಕುರಿತ ಅಣಿಮುತ್ತಿಗೆ ಖೇರ್ ಬೆವರಿಳಿಸಿದ ಟ್ವೀಟಿಗರು
" ಭಾರತವಾಸಿಗಳ ಪಾಲಿಗೆ ರಾಷ್ಟ್ರೀಯತೆಯ ಒಂದೇ ವ್ಯಾಖ್ಯೆ ಎಂದರೆ " ಭಾರತ್ ಮಾತಾಕಿ ಜೈ". ಉಳಿದೆಲ್ಲವೂ ಪಲಾಯನ ತಂತ್ರಗಳು " ಅಣಿಮುತ್ತು ಉದುರಿಸಿದ ನಟ ಅನುಪಮ್ ಖೇರ್ ಅವರಿಗೆ ಟ್ವಿಟ್ಟರಿಗರು ಸರಿಯಾಗಿಯೇ ಬೆವರಿಳಿಸಿದ್ದಾರೆ. ಅದರ ಕೆಲವು ಸ್ಯಾಂಪಲ್ ಗಳು ಇಲ್ಲಿವೆ ನೋಡಿ.
ಸರ್ , " ಜೈ ಹಿಂದ್ " ಹಾಗು " ವಂದೇ ಮಾತರಂ "ಗೆ ಅನುಮತಿಯಿದೆಯೇ, ಅಥವಾ ಅವು ಕೂಡ ಪಲಾಯನ ಕೆಟಗರಿಗೆ ಸೇರುತ್ತವೆಯೇ ?
- ಅನಿರುದ್ಧ್ ಚೌಧುರಿ
ಸೋ,ಪ್ರೀತಿಯ ಭಾರತವಾಸಿಗಳೇ, ಹೋಗಿ ಗಲಭೆ ಮಾಡಿ, ಹಗರಣ ಮಾಡಿ, ಕೊಲೆ ಮಾಡಿ , ದ್ವೇಷ ಹರಡಿ. ಎಲ್ಲ ಆದ ಮೇಲೆ " ಭಾರತ್ ಮಾತಾಕಿ ಜೈ " ಎಂದು ಘೋಷಣೆ ಕೂಗಿ. ಆಗ ಎಲ್ಲವೂ ಓಕೆ !
- ಪಂಕಜ್ ಮಿಶ್ರಾ
ಅನುಪಮ್ ಖೇರ್ ಅವರ ವ್ಯಾಖ್ಯೆಯ ಪ್ರಕಾರ ಕನ್ಹಯ್ಯನ ಕೊಲೆ ಮಾಡಲು ಕರೆ ನೀಡಿದ ವ್ಯಕ್ತಿ ರಾಷ್ಟ್ರೀಯವಾದಿ. ಏಕೆಂದರೆ ಆತ ಪೋಸ್ಟರ್ ನಲ್ಲಿ " ಭಾರತ್ ಮಾತಾಕಿ ಜೈ " ಎಂದು ಬರೆದಿದ್ದಾನೆ.
- ಜೋಯ್ ದಾಸ್
ನಾನು ನನ್ನ ರಾಷ್ಟ್ರೀಯವಾದಿ ಪ್ರಮಾಣಪತ್ರವನ್ನು ಎಲ್ಲಿಂದ ಪಡೆಯಬೇಕು ? ನಿಮ್ಮ ಕಚೇರಿ ವಿಳಾಸ ಕೊಡಿ, ಪ್ಲೀಸ್ .
- ಮುಫೀದ್
ಕೇರಳ, ಕರ್ನಾಟಕ, ತಮಿಳು ನಾಡು ಹಾಗು ಈಶಾನ್ಯ ಭಾರತದಲ್ಲಿ ಯಾರೂ " ಭಾರತ್ ಮಾತಾಕಿ ಜೈ " ಎಂದಿದ್ದನ್ನು ನಾನು ಕೇಳಿಯೇ ಇಲ್ಲ. ಅವರೆಲ್ಲ ದೇಶದ್ರೋಹಿಗಳು ಬಿಡಿ.
- ಆರ್ ಕುರಿಯನ್
ಸರ್, ಒಟ್ಟು ಎಷ್ಟು ಬಾರಿ ಈ ಘೋಷಣೆಯನ್ನು ಹೇಳಬೇಕು ಎಂದು ವಿವರ ಇದೆಯೇ ? ಅದು ಗಂಟೆಗಳ ಲೆಕ್ಕದಲ್ಲೇ ಅಥವಾ ವರ್ಷಕ್ಕೊಮ್ಮೆ ಹೇಳಿದರೆ ಸಾಕೆ ?
- ಅಲೋಕ್ ದೇಶಪಾಂಡೆ
ಮಹಾತ್ಮ ಗಾಂಧೀಜಿಯನ್ನು ಕೊಲ್ಲುವ ಮೊದಲು ಗೋಡ್ಸೆ ಹಲವು ಬಾರಿ " ಭಾರತ್ ಮಾತಾಕಿ ಜೈ " ಎಂದು ಹೇಳಿರಬಹುದು. ಹಾಗಾಗಿ ಅದೊಂದೇ ರಾಷ್ಟ್ರೀಯತೆಯ ವ್ಯಾಖ್ಯೆಯಾಗದು.
- ನಿದಾ
ನಾನು ಭಾರತೀಯ ಹಾಗು ನಾಸ್ತಿಕ. ನಾನು ನನ್ನ ತಂದೆ ತಾಯಿಯನ್ನು ಬಿಟ್ಟು ಇತರರ ಮಾತಾ, ಪಿತರನ್ನು ಹೆಸರೆತ್ತಿ ಕರೆಯುವುದಿಲ್ಲ !
- ಅಂಕಿತ
ಇದು ಬೂಟಾಟಿಕೆ ! ಒಬ್ಬ ನಿರಾಶ್ರಿತ ಮೂಲನಿವಾಸಿಯನ್ನು ಅಥವಾ ಸಂಕಷ್ಟದಲ್ಲಿರುವ ರೈತನನ್ನು ಕೇಳಿ ನೋಡಿ, ಆತ ಮನಪೂರ್ವಕವಾಗಿ " ಭಾರತ್ ಮಾತಾಕಿ ಜೈ " ಎಂದು ಹೇಳುತ್ತಾನೆಯೇ ?
- ಸಂಜೀವ್ ಮಾಥುರ್
ಆಯ್ತು. " ಭಾರತ್ ಮಾತಾಕಿ ಜೈ " . ಈಗ ವಿಷಯಕ್ಕೆ ಬನ್ನಿ. ನಿಮ್ಮ ಪಕ್ಷ ವಿಜಯ್ ಮಲ್ಯ ಹಾಗು ಆತನ ಬಳಿ ಇರುವ ತೆರಿಗೆ ಪಾವತಿಸುವವರ ೯ ಕೋಟಿ ರೂಪಾಯಿ ಯಾವಾಗ ತರುತ್ತೆ ?
- ಇಂತಿಖಾಬ್ ಆಲಂ
courtesy : Indian Express