ಉಳ್ಳಾಲ: ದೇಶದಾದ್ಯಂತ 16,000 ಕ್ಕೂ ಹೆಚ್ಚು ಅನುಗ್ರಹ ದೃಷ್ಟಿದಾನ್ ಮೂಲಕ ನೇತ್ರ ಚಿಕಿತ್ಸೆ

ಉಳ್ಳಾಲ: ದೇಶದಾದ್ಯಂತ 16,000 ಕ್ಕೂ ಹೆಚ್ಚು ಅನುಗ್ರಹ ದೃಷ್ಟಿದಾನ್ ಮೂಲಕ ನೇತ್ರ ಚಿಕಿತ್ಸೆಯನ್ನು ನಡೆಸಿದ್ದು, ಗ್ರಾಮೀಣ ಭಾಗದ ಕಣ್ಣಿನ ತೊಂದರೆ ಇರುವ ಬಡ ಅರ್ಹ ಫಲಾನುಭವಿಗಳನ್ನು ಗುರುತಿಸಿ ಅವರ ಸಂಪೂರ್ಣ ಚಿಕಿತ್ಸಾ ವೆಚ್ಚವನ್ನು ಸಂಸ್ಥೆಯು ಭರಿಸಲಿದ್ದು, ಇದು ಸಂಸ್ಥೆಯ ಸಾಮಾಜಿಕ ಅಂಗದ ಕಾರ್ಯ ಹಾಗೂ ಜಿಲ್ಲೆಯ ಎರಡನೇ ಶಿಬಿರ ಇದಾಗಿದೆ ಎಂದು ಇಂಜಿನಿಯರ್ಸ್ ಇಂಡಿಯಾ ಲಿಮಿಟೆಡ್‌ನ ಮಹಾಪ್ರಬಂಧಕ ಎ.ಕೆ ಕುಂದು ಅಭಿಪ್ರಾಯಪಟ್ಟರು.
ಇಂಜಿನಿಯರ್ಸ್ ಇಂಡಿಯಾ ಲಿಮಿಟೆಡ್, ಅನುಗ್ರಹ ದೃಷ್ಠೆದಾನ್, ಕಲ್ಲಾಪು ಸೇವಾಸಮಿತಿ, ಕಲ್ಲಾಪು,ಉಡುಪಿ ಮತ್ತು ಮಂಗಳೂರಿನ ಪ್ರಸಾದ್ ನೇತ್ರಾಲಯ ಕಣ್ಣಿನ ಆಸ್ಪತ್ರೆ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ , ಉಡುಪಿ ಮತ್ತು ಮಂಗಳೂರಿನ ಅಂಧತ್ವ ನಿವಾರಣಾ ವಿಭಾಗ ಇವರ ಜಂಟಿ ಆಶ್ರಯದಲ್ಲಿ ಕಲ್ಲಾಪು ಪಟ್ಲ ಶಾಲೆಯಲ್ಲಿ ಗುರುವಾರ ನಡೆದ ಉಚಿತ ನೇತ್ರ ತಪಾಸಣಾ ಮತ್ತು ಚಿಕಿತ್ಸಾ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು. ಉಳ್ಳಾಲ ನಗರಸಭೆ ಅಧ್ಯಕ್ಷ ಕುಂಞಮೋನು ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭ ಪೌರಾಯುಕ್ತೆ ರೂಪಾ.ಡಿ.ಶೆಟ್ಟಿ, ನಗರಸಭೆ ಸದಸ್ಯ ಮಹಮ್ಮದ್ ಮುಕ್ಕಚ್ಚೇರಿ, ಸ್ಥಾಯಿ ಸಮಿತಿ ಅಧ್ಯಕ್ಷ ಅಬ್ದುಲ್ ಫತಾಕ್, ತಾ.ಪಂ ಸದಸ್ಯ ಸಿದ್ದೀಕ್ ತಲಪಾಡಿ, ಅನುಗ್ರಹ ದೃಷ್ಟಿದಾನ್ ಪ್ರಾಜೆಕ್ಟ್ ಮೆನೇಜರ್ ಸಂಜಯ ಓಟ್ಟಾಲ್, ಪ್ರಸಾದ್ ನೇತ್ರಾಲಯದ ಡಾ.ಸಬೀತಾ, ಡಾ.ಶಿಬಿನ್ ಗಿರೀಶ್, ಉಳ್ಳಾಲ ಪುರಸಭೆ ಮಾಜಿ ಸದಸ್ಯೆ ಸುಹಾಸಿನಿ ಬಬ್ಬುಕಟ್ಟೆ, ಕಲ್ಲಾಪು ಸೇವಾ ಸಮಿತಿ ಅಧ್ಯಕ್ಷ ಉಸ್ಮಾನ್ ಕಲ್ಲಾಪು, ಕೆ.ಸಿರೋಡು ವಲಯ ಕಾಂಗ್ರೆಸ್ ಕಾರ್ಯದರ್ಶಿ ಶೆಬೀರ್, ಜಮಾಲುದ್ದೀನ್ ಕೆ.ಸಿ.ನಗರ ಉಪಸ್ಥಿತರಿದ್ದರು.
ಶಾಲಾ ಮುಖ್ಯಶಿಕ್ಷಕಿ ಸೇಸಮ್ಮ ಕಾರ್ಯಕ್ರಮ ನಿರ್ವಹಿಸಿದರು. ಸಹಶಿಕ್ಷಕಿ ಆಸ್ಮಾ ಭಾನು ವಂದಿಸಿದರು.





