ಕುದುರೆ ಕಾಲು ಮುರಿದ ಬಿಜೆಪಿ ಶಾಸಕನಿಗೆ 50 ರೂ. ದಂಡ !!
ಗಾಯದ ಮೇಲೆ ಬರೆ

ಡೆಹ್ರಾಡೂನ್ , ಮಾ. 17 : ಪೊಲೀಸ್ ಕುದುರೆ ಶಕ್ತಿಮಾನ್ ಮೇಲೆ ಹಲ್ಲೆ ಮಾಡಿ ಕಾಲು ಮುರಿದ ಆರೋಪ ಎದುರಿಸುತ್ತಿರುವ ಬಿಜೆಪಿ ಶಾಸಕ ಗಣೇಶ್ ಜೋಷಿಗೆ 50 ರೂ. ದಂಡ ವಿಧಿಸಲಾಗಿದೆ. ಪ್ರಾಣಿ ಹಿಂಸೆ ಕಾಯ್ದೆಯ ಪ್ರಕಾರವೇ ಜೋಷಿ ಅವರಿಗೆ ಈ ದಂಡ ವಿಧಿಸಲಾಗಿದೆ ಎಂದು ತಿಳಿದು ಬಂದಿದೆ. ಒಬ್ಬ ಇದೇ ಅಪರಾಧವನ್ನು 3 ವರ್ಷದೊಳಗೆ ಮತ್ತೆ ಪುನರಾವರ್ತಿಸಿದರೆ ಆತನಿಗೆ ಗರಿಷ್ಟ ದಂಡ 100 ರೂ. ಆಗುತ್ತದೆ.
ಕೇಂದ್ರ ಸಚಿವೆ ಮೇನಕಾ ಗಾಂಧೀ ಈ ಕೃತ್ಯವನ್ನು ಖಂಡಿಸಿ ಬಿಜೆಪಿ ಶಾಸಕನ ವಿರುದ್ಧ ಕಟಿಣ ಕ್ರಮ ಕೈಗೊಳ್ಳಬೇಕೆಂದು ಉತ್ತರಾಖಂಡ ರಾಜ್ಯದ ಡಿಜಿಪಿಗೆ ಪತ್ರ ಬರೆದಿದ್ದರು. ಪ್ರಾಣಿ ಹಕ್ಕು ಸಂಘದ ಕಾರ್ಯಕರ್ತರು ಜೋಷಿಯನ್ನು ಬಂಧಿಸಬೇಕೆಂದು ಆಗ್ರಹಿಸಿದ್ದರು.
ನಾನು ಹಾಗೆ ಮಾಡಲೇ ಇಲ್ಲ ಎಂದ ಜೋಷಿ ನಾನು ಆ ಜಾಗದಲ್ಲೇ ಇರಲಿಲ್ಲ ಎಂದೂ ವಾದಿಸಿದ್ದರು. ಆದರೆ ಮತ್ತೆ ಚಿತ್ರಗಳು, ವೀಡಿಯೋಗಳು ಅವರ ಕೃತ್ಯವನ್ನು ಸ್ಪಷ್ಟವಾಗಿ ತೋರಿಸಿದ್ದವು.
Next Story





