ಪುತ್ತೂರು: ನಗರಸಭೆ ಮತದಾನ ಹಕ್ಕು ಅರ್ಜಿ ತೀರ್ಪು ಮಾ. 21ಕ್ಕೆ ಮುಂದೂಡಿಕೆ
ಪುತ್ತೂರು: ಪುತ್ತೂರು ನಗರಸಭೆಯ ಅಧ್ಯಕ್ಷ, ಉಪಾಧ್ಯಕ್ಷ ಆಯ್ಕೆಯಲ್ಲಿ ಮತದಾನದ ಹಕ್ಕು ನೀಡುವಂತೆ ಆಗ್ರಹಿಸಿ ನಗರ ಸಭೆಯ ಮಾಜಿ ಅಧ್ಯಕ್ಷ ನೆಲ್ಲಿಕಟ್ಟೆ ಜಗದೀಶ್ ಶೆಟ್ಟಿ ಸಹಿತ 7 ಮಂದಿ ಸದಸ್ಯರು ಹೈಕೋರ್ಟ್‌ನಲ್ಲಿ ನೀಡಿರುವ ದಾವೆಯ ತೀರ್ಪನ್ನು ಮಾ.21ಕ್ಕೆ ಮುಂದೂಡಿ ರಾಜ್ಯ ಉಚ್ಚ ನ್ಯಾಯಾಲಯ ಮಾ.17ರಂದು ಪ್ರಕಟಿಸಿದೆ. ಮಾ. 16 ರಂದು ತೀರ್ಪು ಪ್ರಕಟಗೊಳಿಸುವುದಾಗಿ ನ್ಯಾಯಾಲಯ ತಿಳಿಸಿತ್ತು. ಮಾ. 17 ರಂದು ಈ ಕುರಿತು ಆದೇಶ ನೀಡಿ ಮಾ. 21 ಕ್ಕೆ ತೀರ್ಪು ಪ್ರಕಟಿಸುವುದಾಗಿ ತಿಳಿಸಿದೆ ಎಂದು ಮಾಜಿ ನಗರಸಭಾ ಸದಸ್ಯ ನೆಲ್ಲಿಕಟ್ಟೆ ಜಗದೀಶ್ ಶೆಟ್ಟಿ ಪತ್ರಿಕೆಗೆ ತಿಳಿಸಿದ್ದಾರೆ.
Next Story





