ಆರ್‌ಸಿಬಿಗೆ ಮಲ್ಯ ಬೈ; ರಸ್ಸೆಲ್ ನೂತನ ಬಾಸ್

ಹೊಸದಿಲ್ಲಿ, ಮಾ.17: ಐಪಿಎಲ್‌ನ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡದ ನಿರ್ದೇಶಕ ಹುದ್ದೆಗೆ ಮದ್ಯದ ದೊರೆ ವಿಜಯ್ ಮಲ್ಯ ರಾಜೀನಾಮೆ ನೀಡಿದ್ದಾರೆ. ರಸ್ಸೆಲ್ ಆ್ಯಡಮ್ ಆರ್‌ಸಿಬಿಯ ಮುಖ್ಯಸ್ಥರಾಗಿ ನೇಮಕಗೊಂಡಿದ್ದಾರೆ.
ಲಭ್ಯ ಮಾಹಿತಿ ಪ್ರಕಾರ ವಿಜಯ್ ಮಲ್ಯ ದೇಶ ತೊರೆದ ಐದು ದಿನಗಳ ಬಳಿಕ ಅಂದರೆ ಮಾ.7ರಂದು ಐಪಿಎಲ್‌ನ ಆಡಳಿತ ಮಂಡಳಿಗೆ ಮಲ್ಯ ಆರ್‌ಸಿಬಿಯ ನಿರ್ದೇಶಕ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಬಗ್ಗೆ ಮಾಹಿತಿ ರವಾನೆಯಾಗಿದೆ. ಪತ್ರದಲ್ಲಿ ರಸ್ಸೆಲ್ ಆ್ಯಡಮ್ ರನ್ನು ತಂಡದ ಆಡಳಿತ ಸಮಿತಿಯ ಮುಖ್ಯಸ್ಥರನ್ನಾಗಿ ನೇಮಕ ಮಾಡಿರುವುದು ಮತ್ತು ಆರ್‌ಸಿಬಿಯ ಸ್ಥಿತಿಗತಿಯ ಬಗ್ಗೆ ವಿವರಿಸಲಾಗಿದೆ.
ವಿಜಯ್ ಮಲ್ಯ ಪುತ್ರ ಸಿದ್ದಾರ್ಥ ಮಲ್ಯ ಅವರು ತೆರವಾಗಿರುವ ಸ್ಥಾನಕ್ಕೆ ನಿರ್ದೇಶಕರಾಗಿ ನೇಮಕಗೊಂಡಿದ್ದರೂ, ಅವರಿಗೆ ವಿಶೇಷ ಅಧಿಕಾರ ಇಲ್ಲ. ಸಂಸ್ಥೆಯಲ್ಲಿ ಉಪಾಧ್ಯಕ್ಷರಾಗಿದ್ದ ರಸ್ಸೆಲ್ ಆರ್‌ಸಿಬಿಯ ಅಧ್ಯಕ್ಷ ಸ್ಥಾನಕ್ಕೆ ನೇಮಕಗೊಂಡಿದ್ಧಾರೆ.
Next Story





