ಭಟ್ಕಳ: ಮಾವಿನಕುರ್ವೆ ನಾಗಬನ ದೇವಸ್ಥಾನದಲ್ಲಿ ವರ್ಧಂತಿ ಬ್ರಹ್ಮಕಲಶೋತ್ಸವ

ಭಟ್ಕಳ:ಪ್ರಾಚೀನ ಕಾಲದಿಂದಲೂ ನಾಗಾರಾಧನೆ ಮಹತ್ವ ಪಡೆದುಕೊಂಡಿದ್ದು,ನಾಗಾರಾಧನೆಯಿಂದ ಇಷ್ಠಾರ್ಥ ಸಿದ್ದಿಯಾಗಲಿದೆ ಎಂದು ಗೇರುಸೊಪ್ಪ ವೀರಾಂಜನೇಯ ದೇವಸ್ಥಾನದ ಮಾರುತಿ ಗುರೂಜಿ ನುಡಿದರು.
ಅವರು ಮಾವಿನಕುರ್ವೆ ಬಂದರ್‌ನ ನಾಗಬನ ದೇವಸ್ಥಾನದಲ್ಲಿ ಗುರುವಾರ ನಡೆದ 5ನೇ ಪ್ರತಿಷ್ಠಾ ವರ್ಧಂತಿ,ಬ್ರಹ್ಮಕಲಶೋತ್ಸವ ಹಾಗೂ ಬೆಳ್ಳಿ ಪ್ರಭಾವಳಿ ಸಮರ್ಪಣೆ ಕಾರ್ಯಕ್ರಮ
ಲ್ಲಿ ಅವರು ಆಶೀರ್ವಚನ ನೀಡಿ ಮಾತನಾಡುತ್ತಿದ್ದರು. ದಕ್ಷಿಣಕನ್ನಡ ಜಿಲ್ಲೆಯಲ್ಲಿ ನಾಗಾರಾಧನೆಗೆ ವಿಶೇಷ ಮಹತ್ವವಿದೆ.ಇಂದು ಉತ್ತರಕನ್ನಡ ಜಿಲ್ಲೆಯಲ್ಲೂ ನಾಗಾರಾಧನೆಗೆ ಮಹತ್ವ ನೀಡಲಾಗುತ್ತಿದೆ.ಇದರಿಂದ ಸರ್ವಸಿದ್ದಿಯಾಗಲಿದೆ.ಭಕ್ತಿ,ಶ್ರದ್ದೆಯಿಂದ ದೇವರ ಅನುಗ್ರಹಕ್ಕೆ ಪಾತ್ರರಾಗುವ ಮೂಲಕ ಜೀವನದಲ್ಲಿ ಸಂತುಷ್ಟಿಯನ್ನು ಕಾಣಬಹುದು ಎಂದರು.ವೇದಮೂರ್ತಿ ರಮಾನಂದ ಅವಭೃತ ಮತ್ತು ವೈದಿಕ ವೃಂದದವರು ವರ್ಧಂತಿ ಉತ್ಸವದ ಧಾರ್ಮಿಕ ವಿಧಿವಿಧಾನ ನೆರವೇರಿಸಿದರು.
ಪ್ರಮುಖರಾದ ಕುಪ್ಪ ಮೊಗೇರ್,ರಮೇಶ ನಾಗಪ್ಪ ಖಾರ್ವಿ,ತಿಮ್ಮಪ್ಪ ಮಂಜುನಾಥ ಖಾರ್ವಿ,ಮಾದೇವ ಕುಪ್ಪಯ್ಯ ನಾಯ್ಕ,ಸುಭ್ರಮಣ್ಯ ಶೆಟ್ಟಿ,ಗೋಪಾಲ ಶನಿಯಾರ ಮೊಗೇರ್ ಮುಂತಾದವರು ಉಪಸ್ಥಿತರಿದ್ದರು.ವಿನಯಾ ಪ್ರಾರ್ಥಿಸಿದರು.
ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ನಾಗೇಶ ನಾಯ್ಕ ಸ್ವಾಗತಿಸಿ,ಪ್ರಾಸ್ತಾವಿಕ ಮಾತನಾಡಿದರು.ಸುಧೀರ ನಾಯ್ಕ,ರಾಧಿಕಾ ನಿರೂಪಿಸಿದರು.ರಾಮ ಖಾರ್ವಿ ವಂದಿಸಿದರು. ಭಟ್ಕಳದ ಮಾವಿನಕುರ್ವೆ ಬಂದರ್‌ನ ನಾಗಬನ ದೇವಸ್ಥಾನದಲ್ಲಿ ಗುರುವಾರ ನಡೆದ 5ನೇ ಪ್ರತಿಷ್ಠಾ ವರ್ಧಂತಿ,ಬ್ರಹ್ಮಕಲಶೋತ್ಸವ ಹಾಗೂ ಬೆಳ್ಳಿ ಪ್ರಭಾವಳಿ ಕಾರ್ಯಕ್ರಮದಲ್ಲಿ ಗೇರುಸೊಪ್ಪ ವೀರಾಂಜನೇಯ ದೇವಸ್ಥಾನದ ಮಾರುತಿ ಗುರೂಜಿ ಆಶೀರ್ವಚನ ನೀಡಿದರು.







