ಭಟ್ಕಳ: ಉದ್ಯೋಗ ಖಾತ್ರಿ ಮಾಹಿತಿ ರಥಕ್ಕೆಆದ್ದೂರಿಯ ಸ್ವಾಗತ

ಭಟ್ಕಳ: ಮಹಾತ್ಮಾಗಾಂಧಿರಾಷ್ಟ್ರೀಯಗ್ರಾಮೀಣಉದ್ಯೋಗಖಾತ್ರಿಯೋಜನೆಯ ಬಗ್ಗೆ ಜನಸಾಮಾನ್ಯರಲ್ಲಿಅರಿವು ಮೂಡಿಸಲುಉದ್ಯೋಗಖಾತ್ರಿ ಮಾಹಿತಿರಥಕ್ಕೆ ಮಾವಳ್ಳಿ ಗ್ರಾಮ ಪಂಚಾಯತನಲ್ಲಿಅದ್ದೂರಿ ಸ್ವಾಗತ ನೀಡಲಾಯಿತು. ಉತ್ತರಕನ್ನಡಜಿಲ್ಲಾ ಪಂಚಾಯತನ ಮಾವಳ್ಳಿ ಭಾಗದ ನೂತನ ಸದಸ್ಯೆ ಸಿಂಧೂ ಭಾಸ್ಕರ ನಾಯ್ಕ ಮತ್ತು ಮಾವಳ್ಳಿ1 ಗ್ರಾಮ ಪಂಚಾಯತಅಧ್ಯಕ್ಷೆ ಮಂಗಲಾ ಈಶ್ವರ ನಾಯ್ಕಉದ್ಯೋಗಖಾತ್ರಿ ಮಾಹಿತಿರಥಕ್ಕೆ ಹಸಿರು ನಿಶಾನೆ ತೋರುವ ಮೂಲಕ ಚಾಲನೆ ನೀಡಿದರು.
ಭಟ್ಕಳ ತಾಲೂಕಿನಲ್ಲಿ ನಾಲ್ಕು ದಿನಗಳ ಕಾಲ ಹಳ್ಳಿ ಹಳ್ಳಿಗಳಲ್ಲಿ ಸಂಚರಿಸಿ ಯೋಜನೆಯ ಸಮಗ್ರ ಮಾಹಿತಿಯನ್ನುರಥದಲ್ಲಿರುವ ಉಮೇಶ ಮುಂಡಳ್ಳಿ ನೀಡಲಿದ್ದಾರೆ. ಪ್ರಸಕ್ತ ಸಾಲಿನಲ್ಲಿಯೋಜನೆಯಡಿ ಕೈಗೊಳ್ಳಬಹುದಾದಕಾಮಗಾರಿ ವಿವರಗಳು, ಮಹಿಳೆ ಮತ್ತು ಪುರುಷರಿಗೆ ಸಮಾನ ವೇತನ, ಉದ್ಯೋಗಚೀಟಿ ಬೇಡಿಕೆಈಡೇರಿಕೆ, ಕೆಲಸದ ಬೇಡಿಕೆ ಸಲ್ಲಿಸಿದ ಅರ್ಜಿದಾರರಿಗೆ ಹದಿನೈದು ದಿನಗಳ ಒಳಗೆ ಕೆಲಸ ನೀಡದಿದ್ದರೆ ನಿರುದ್ಯೋಗ ಭತ್ಯೆ ನೀಡುವುದು ಸೇರಿದಂತೆ ಹಲವು ಮಾಹಿತಿಗಳನ್ನು ಈ ಸಂದರ್ಭದಲ್ಲಿ ನೀಡಲಾಗುವುದುಎಂದೂ ತಿಳಿಸಲಾಯಿತು. ನಂತರ ಮಾವಳ್ಳಿ-1 ಗ್ರಾಮ ಪಂಚಾಯತ್‌ನ ಪಿ.ಡಿ.ಓ.ಎಸ್.ಬಿ.ಹತ್ತಿ ಮುಂದಾಳತ್ವದಲ್ಲಿ ಮಾವಳ್ಳಿಯ ಎಲ್ಲ ಮಜಿರೆಗಳಲ್ಲಿಯೂ ಮಾಹಿತಿರಥ ಸಂಚರಿಸಿತು. ಈ ಸಂಧರ್ಭದಲ್ಲಿತಾಲೂಕು ಪಂಚಾಯತಕಾರ್ಯನಿರ್ವಹಣಾಧಿಕಾರಿ ಸಿ.ಟಿ. ನಾಯ್ಕ, ತಾಲೂಕು ಸಾಮಾಜಿಕ ಪರಿಶೋಧಕ ಉಮೇಶ ಮುಂಡಳ್ಳಿ, ಗ್ರಾ.ಪಂ. ಸದಸ್ಯಈಶ್ವರ ಬೈರಾ ನಾಯ್ಕ, ನಾಗೇಂದ್ರದೇವಾಡಿಗ, ಜಾನಕಿ ಹರಿಕಾಂತ, ಮಂಜುಳಾ ನಾಯ್ಕ ಮತ್ತು ಪಂಚಾಯತಅಭಿವೃದ್ಧಿಅಧಿಕಾರಿಎಸ್.ಬಿ.ಹತ್ತಿ ಮುಂತಾದವರು ಉಪಸ್ಥಿತರಿದ್ದರು.





