ಬಂಟ್ವಾಳ: ಈಜಾಡಲು ತೆರಳಿದ್ದ ಇಬ್ಬರು ಯುವಕರು ನೀರು ಪಾಲು
ಬಂಟ್ವಾಳ: ನೇತ್ರಾವತಿ ನದಿಯಲ್ಲಿ ಸ್ನಾನ ಮಾಡಲು ತೆರಳಿದ್ದ ಇಬ್ಬರು ಯುವಕರು ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ತಾಲೂಕಿನ ಕಡೇಶ್ವಾಲ್ಯ ಗ್ರಾಮದ ಕಾಗೆಕಾಣ ಎಂಬಲ್ಲಿ ಗುರುವಾರ ಸಂಜೆ 6:30ರ ಸುಮಾರಿಗೆ ಸಂಭವಿಸಿದೆ.
ಬುಡೋಳಿ ನಿವಾಸಿಗಳಾದ ಸತೀಶ್(22), ಜಗದೀಶ್ವರ(23) ನದಿಯಲ್ಲಿ ಮುಳುಗಿ ಮ್ರತಪಟ್ಟ ಯುವಕರು. ಸ್ನೇಹಿತರಾದ ಐವರು ಯುವಕರ ತಂಡವೊಂದು ಇಂದು ಸಂಜೆ ಕಾಗೆಕಾಣ ನೇತ್ರಾವತಿ ನದಿಯಲ್ಲಿ ಈಜಲು ತೆರಳಿದ್ದು, ಈ ಸಂದರ್ಭದಲ್ಲಿ ತಂಡದಲ್ಲಿದ್ದ ಸತೀಶ್ ಹಾಗೂ ಜಗದೀಶ್ ನೀರು ಪಾಲಾಗಿದ್ದಾರೆ ಎಂದು ತಿಳಿದು ಬಂದಿದೆ. ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಬಂಟ್ವಾಳ ಗ್ರಾಮಾಂತರ ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿಗಳು ಶೋಧ ಕಾರ್ಯ ಮುಂದುವರಿಸಿದ್ದಾರೆ.
Next Story





