ಡಿ.ವಿ.ಸದಾನಂದ ಗೌಡರಿಗೆ ಕರಿಪತಾಕೆ ಪ್ರದರ್ಶನ ಯತ್ನ: 9ಮಂದಿ ಬಂಧನ

ಮಂಗಳೂರು, ಮಾ.17: ಮಂಗಳೂರು ವಿವಿ ಕಾಲೇಜಿನ ರವೀಂದ್ರ ಕಲಾಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿದ ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಅವರಿಗೆ ಎತ್ತಿನಹೊಳೆ ಯೋಜನೆಯನ್ನು ಪ್ರತಿಭಟಿಸಿ ನೇತ್ರಾವತಿ ರಕ್ಷಣ ಸಮಿತಿಯ ನೇತೃತ್ವದಲ್ಲಿ ಕರಿಪತಾಕೆಯನ್ನು ಪ್ರದರ್ಶಿಸಿದ 9 ಮಂದಿಯನ್ನು ಬಂಧಿಸಿ ಬಿಡುಗಡೆಗೊಳಿಸಲಾಯಿತು.
ಕಾಲೇಜಿನ ಆವರಣದೊಳಗೆ ಕರಿಪತಾಕೆಯೊಂದಿಗೆ ಆಗಮಿಸಿದ ಪ್ರತಿಭಟನಕಾರರನ್ನು ಸಭೆಯ ನಡೆಯುತ್ತಿರುವ ರವೀಂದ್ರ ಕಲಾಭವನದೊಳಗೆ ಹೋಗುವ ಮುನ್ನವೆ ಪೊಲೀಸರು ಬಂಧಿಸಿದರು. ಈ ಸಂದರ್ಭದಲ್ಲಿ ಪ್ರತಿಭಟನಕಾರರು ಡಿ.ವಿ .ಸದಾನಂದಗೌಡರ ವಿರುದ್ದ ಘೋಷಣೆಗಳನ್ನು ಕೂಗಿದರು.
Next Story





