ಮಂಗಳೂರು: ಲೋಕಾಯುಕ್ತದ ಅಧಿಕಾರ ಮೊಟಕುಗೊಳಿಸುವ ತಂತ್ರ - ನ್ಯಾ.ಸಂತೋಷ್ ಹೆಗ್ಡೆ

ಮಂಗಳೂರು.ಮಾ.17:ರಾಜ್ಯದಲ್ಲಿ ಭೃಷ್ಟಾಚಾರವನ್ನು ನಿಯಂತ್ರಿಸಲು ಭೃಷ್ಟಾಚಾರ ನಿಗ್ರಹ ದಳವನ್ನು ಸ್ಥಾಪಿಸುವುದು ಅನಗತ್ಯ.ಇದರಿಂದ ಲೋಕಾಯುಕ್ತದ ಅಧಿಕಾರವನ್ನು ಮೊಟಕುಗೊಳಿಸಿದಂತಾಗುತ್ತದೆ ಎಂದು ಮಾಜಿ ಲೋಕಾಯುಕ್ತ ನ್ಯಾ.ಸಂತೋಷ್ ಹೆಗ್ಡೆ ಸುದ್ದಿಗಾರರಿಗೆ ಪ್ರತಿಕ್ರೀಯೆ ನೀಡಿದ್ದಾರೆ.
ಲೋಕಾಯುಕ್ತ ಸಂಸ್ಥೆ ಸಮರ್ಪಕವಾಗಿ ಕಾರ್ಯನಿರ್ವಹಿಸದೆ ಇರುವಾಗ ಸರಕಾರ ಕೆಲವು ಕ್ರಮ ಕೈ ಗೊಳ್ಳಬಹುದಿತ್ತು ಆದರೆ ಲೋಕಾಯುಕ್ತ ಕಳೆದ 2006ರಿಂದ 2011ರವರೆಗೆ 750ಪ್ರಕರಣಗಳನ್ನು ಉನ್ನತ ಅಧಿಕಾರಿಗಳನ್ನು ಟ್ರಾಫ್ ಮಾಡುವ ಮೂಲಕ ದಾಖಲಿಸಿದೆ.ಭ್ರಷ್ಟಾಚಾರ ಪ್ರಕರಣದ ಆರೋಪ ಎದುರಿಸುತ್ತಿರುವ ಉನ್ನತ ಅಧಿಕಾರಿಗಳು,ಶಾಸಕರು,ಸಚಿವರನ್ನು ಜೈಲಿಗೆ ಕಳುಹಿಸಲಾಗಿದೆ . ಆದರೆ ಪ್ರಸಕ್ತ ಸರಕಾರ ಲೋಕಾಯುಕ್ತವನ್ನು ಮುಚ್ಚಲು ಹೊರಟಂತಿದೆ.ಭ್ರಷ್ಟಾಚಾರ ಹೆಚ್ಚಿನ ಪ್ರಮಾಣದಲ್ಲಿ ನಡೆಯುತ್ತಿರುವುದು ಅಧಿಕಾರವರ್ಗದಲ್ಲಿ ಹೀಗಿರುವಾಗ ಭೃಷ್ಟಾಚಾರ ನಿಯಂತ್ರಿಸಲು ಅಧಿಕಾರಿಗಳ ದಳವನ್ನು ನಿರ್ಮಿಸುವುದು,ಅದರ ಮೇಲ್ವಿಚಾರಣೆಗೂ ಅಧಿಕಾರಿಗಳನ್ನು ನೇಮಿಸುವುದರಿಂದ ಭೃಷ್ಟಾಚಾರ ನಿಯಂತ್ರಣ ಸಾಧ್ಯವೆ ?.32ವರುಷಗಳ ಹಿಂದೆ ಲೋಕಾಯುಕ್ತಕ್ಕೆ ಇದ್ದ ಅಧಿಕಾರವನ್ನು ಸರಕಾರ ಕಿತ್ತು ಕೊಳ್ಳಲು ಹೊರಟಿದೆ.ಈ ವಿಚಾರ ಸದನದಲ್ಲಿ ಚರ್ಚೆಯಾಗಿಲ್ಲ ಎಂದು ಸಂತೋಷ್ ಹೆಗ್ಡೆ ಪ್ರತಿಕ್ರೀಯೆ ನಿಡಿದರು.





