ಅಫ್ಘಾನಿಸ್ತಾನ ವಿರುದ್ಧ ಶ್ರೀಲಂಕಾ ತಂಡಕ್ಕೆ ಜಯ
ಟ್ವೆಂಟಿ-20 ವಿಶ್ವಕಪ್

ಕೋಲ್ಕತಾ, ಮಾ.17: ಟ್ವೆಂಟಿ-20 ವಿಶ್ವಕಪ್‌ನ ಪಂದ್ಯದಲ್ಲಿ ಅಫ್ಘಾನಿಸ್ತಾನ ವಿರುದ್ಧ ಶ್ರೀಲಂಕಾ 6ವಿಕೆಟ್‌ಗಳ ಜಯ ಗಳಿಸಿದೆ
ಗೆಲುವಿಗೆ 154 ರನ್‌ಗಳ ಸವಲನ್ನು ಪಡೆದ ಹಾಲಿ ಚಾಂಪಿಯನ್ ಶ್ರೀಲಂಕಾ ತಂಡ ಇನ್ನೂ 7ಎಸೆತಗಳು ಬಾಕಿ ಇರುವಾಗಲೇ 4 ವಿಕೆಟ್ ನಷ್ಟದಲ್ಲಿ 155 ರನ್ ಗಳಿಸಿ ಗೆಲವಿನ ದಡ ಸೇರಿತು.
ತಿಲಕರತ್ನೆ ದಿಲ್ಶನ್ ಔಟಾಗದೆ 83 ರನ್ ಮತ್ತು ನಾಯಕ ಎ.ಮ್ಯಾಥ್ಯೂಸ್ ಔಟಾಗದೆ21 ರನ್ ಗಳಿಸಿ ತಂಡದ ಗೆಲುವಿಗೆ ನೆರವಾದರು.
ಆರಂಭಿಕ ದಾಂಡಿಗ ಚಾಂಡಿಮಲ್ (18) , ತಿರಿಮನ್ನೆ (6) ತಿಸ್ಸರಾ ಪೆರೆರಾ(12), ಕಪುಗೆಡೆರಾ 10 ರನ್ ಗಳಿಸಿ ದರು.
ಅಫ್ಘಾನಿಸ್ತಾನ 153/7: ಕೋಲ್ಕತಾದ ಈಡನ್ ಗಾರ್ಡನ್ಸ್‌ನಲ್ಲಿ ಅಫ್ಘಾನಿಸ್ತಾನ ನಿಗದಿತ 20 ಓವರ್‌ಗಳಲ್ಲಿ 7 ವಿಕೆಟ್ ನಷ್ಟದಲ್ಲಿ 153 ರನ್ ಗಳಿಸಿತ್ತು.
ಟಾಸ್ ಜಯಿಸಿ ಬ್ಯಾಟಿಂಗ್ ಆಯ್ದುಕೊಂಡ ಅಫ್ಘಾನಿಸ್ತಾನ ತಂಡಕ್ಕೆ ನಾಯಕ ಅಸ್ಘರ್ ಸ್ತಾನಿಕ್‌ಝಾಯ್ 62 ರನ್(47ಎ, 3ಬೌ,4ಸಿ) ಕೊಡುಗೆ ನೀಡಿ ಸ್ಪರ್ಧಾತ್ಮಕ ಮೊತ್ತ ದಾಖಲಿಸಲು ನೆರವಾದರು.
ನಾಯಕ ಅಸ್ಘರ್ ಅವರಿಗೆ ಸಾಥ್ ನೀಡಿದ ನೂರ್ ಅಲಿ ಝದ್ರಾನ್(20), ಸಮೀಯುಲ್ಲಾ ಶೆನ್ವಾರಿ(31) ತಂಡದ ಸ್ಕೋರ್‌ನ್ನು 150ರ ಗಡಿ ತಲುಪಲು ನೆರವಾದರು. ಅಫ್ಘಾನಿಸ್ತಾನ 2.5 ಓವರ್‌ಗಳಲ್ಲಿ 12 ರನ್ ಗಳಿಸುವಷ್ಟರಲ್ಲಿ ಮೊದಲ ವಿಕೆಟ್ ಕಳೆದುಕೊಂಡಿತು. ಆರಂಭಿಕ ದಾಂಡಿಗ ಮುಹಮ್ಮದ್ ಶಹಝಾದ್(8) ಔಟಾದರು.ಕರೀಮ್ ಸಾದಿಕ್(0), ಮುಹಮ್ಮದ್ ನಬಿ(3), ಶಫೀಕುಲ್ಲಾ (5) ಬೇಗನೆ ಔಟಾದರು.
ದೌಲತ್ ಝದ್ರಾನ್ ಔಟಾಗದೆ 5 ಮತ್ತು ನಜೀಬುಲ್ಲಾ ಝದ್ರಾನ್ ಔಟಾಗದೆ 12 ರನ್ ಗಳಿಸಿದರು.
ಶ್ರೀಲಂಕಾದ ತಿಸ್ಸರಾ ಪೆರೆರಾ 33ಕ್ಕೆ3, ರಂಗನ್ ಹೆರಾತ್ 24ಕ್ಕೆ 2 , ಆ್ಯಂಜೆಲೊ ಮ್ಯಾಥ್ಯೂಸ್ 17ಕ್ಕೆ 1, ಕುಲಶೇಖರ 43ಕ್ಕೆ 1 ವಿಕೆಟ್ ಪಡೆದರು.
ಅಫ್ಘಾನಿಸ್ತಾನ 20 ಓವರ್‌ಗಳಲ್ಲಿ 153/7
ಮುಹಮ್ಮದ್ ಶಹಝಾದ್ ಸಿ ಚಾಮೀರ ಬಿ ಮ್ಯಾಥ್ಯೂಸ್ 8
ನೂರ್ ಅಲಿ ಝದ್ರಾನ್ ಬಿ ಹೆರಾತ್ 20
ಅಸ್ಘರ್ ಸ್ಟಾನಿಕ್‌ಝೈ ಸಿ ಚಾಂಡಿಮಲ್ ಬಿ ಪೆರೇರ 62
ಕರೀಮ್ ಸಾದಿಕ್ ಸಿ ಚಾಂಡಿಮಲ್ ಬಿ ಪೆರೇರ 0
ಮುಹಮ್ಮದ್ ನಬಿ ಎಲ್‌ಬಿಡಬ್ಲು ಹೆರಾತ್ 3
ಸಮೀವುಲ್ಲಾ ಶೆನ್ವಾರಿ ಸಿ ಪೆರೇರಾ ಬಿ ಕುಲಸೇಕರ 31
ಶಫೀಕ್‌ವುಲ್ಲಾ ಸಿ ತಿರಿಮನ್ನೆ ಬಿ ಪೆರೇರ 5
ದೌಲತ್ ಝದ್ರಾನ್ ಔಟಾಗದೆ 5
ನಜೀಬುಲ್ಲಾ ಝದ್ರಾನ್ ಔಟಾಗದೆ 12
ಇತರ 7
ವಿಕೆಟ್ ಪತನ: 1-12, 2-44, 3-46, 4-51, 5-112, 6-132, 7-136.
ಬೌಲಿಂಗ್ ವಿವರ:
ಆ್ಯಂಜೆಲೊ ಮ್ಯಾಥ್ಯೂಸ್ 3-0-17-1
ಕುಲಸೇಕರ 4-0-43-1
ಚಾಮೀರ 4-0-19-0
ಹೆರಾತ್ 4-0-24-2
ಪೆರೇರ 4-0-33-3
ಸಿರಿವರ್ಧನ 1-0-16-0
ಶ್ರೀಲಂಕಾ: 18.5 ಓವರ್‌ಗಳಲ್ಲಿ 155/4
ದಿನೇಶ್ ಚಾಂಡಿಮಾಲ್ ಸಿ ಸಮೀವುಲ್ಲಾ ಬಿ ನಬಿ 18
ಟಿಎಂ ದಿಲ್ಶನ್ ಔಟಾಗದೆ 83
ತಿರಿಮನ್ನೆ ಸಿ ರಶೀದ್ ಖಾನ್ 6
ತಿಸಾರ ಪೆರೇರ ರನೌಟ್ 12
ಕಪುಗಡೆರಾ ರನೌಟ್ 10
ಆಂಜೆಲೊ ಮ್ಯಾಥ್ಯೂಸ್ ಔಟಾಗದೆ 21
ಇತರ5
ವಿಕೆಟ್ ಪತನ: 1-41, 2-58, 3-85, 4-113.
ಬೌಲಿಂಗ್ ವಿವರ:
ಕರೀಮ್ ಸಾದಿಕ್ 2-0-21-0
ಹಮೀದ್ ಹಸನ್ 3.5-0-38-0
ದೌಲತ್ ಝದ್ರಾನ್ 3-0-31-0
ಮುಹಮ್ಮದ್ ನಬಿ 4-1-25-1
ರಶೀದ್ ಖಾನ್ 4-0-27-1
ಸಮೀವುಲ್ಲಾ ಶೆನ್ವಾರಿ 2-0-9-0.







