Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ನಿಮ್ಮ ಅಂಕಣ
  4. ಮುಸ್ಲಿಂ ಹೆಸರಿನ ಬಗ್ಗೆ ಶಕುಂತಳಾ...

ಮುಸ್ಲಿಂ ಹೆಸರಿನ ಬಗ್ಗೆ ಶಕುಂತಳಾ ಶೆಟ್ಟಿಯವರ ಅಸಹಿಷ್ಣುತೆಗೆ ಕಾರಣ ಕೇಳಿ

ಉಸ್ತುವಾರಿ ಸಚಿವ ರಮಾನಾಥ ರೈ ಅವರಿಗೆ ಕಾಂಗ್ರೆಸ್ ವಕ್ತಾರ ಫಾರೂಕ್ ಉಳ್ಳಾಲ್ ಮನವಿ

ವಾರ್ತಾಭಾರತಿವಾರ್ತಾಭಾರತಿ17 March 2016 11:31 PM IST
share
ಮುಸ್ಲಿಂ ಹೆಸರಿನ ಬಗ್ಗೆ ಶಕುಂತಳಾ ಶೆಟ್ಟಿಯವರ ಅಸಹಿಷ್ಣುತೆಗೆ ಕಾರಣ ಕೇಳಿ

ಗೌರವಾನ್ವಿತ ನಾಯಕರೂ ದ.ಕ.ಜಿಲ್ಲೆಯ ಉಸ್ತುವಾರಿ ಸಚಿವರೂ ಆದ ಸನ್ಮಾನ್ಯ ಶ್ರೀ ಬಿ.ರಮಾನಾಥ್ ರೈ ಯವರ ಸಮಕ್ಷಮಕ್ಕೆ(ಸ್ವಗತವಾಗಿ)

ಪ್ರಿಯರೇ,
                    ಜಿಲ್ಲೆಯ ಮುಸ್ಲಿಮರ ಪೈಕಿ ಹೆಚ್ಚಿನವರು  ತಮ್ಮನ್ನು ಅತಿಯಾದ ಗೌರವ, ಪ್ರೀತಿ, ವಿಶ್ವಾಸ ದಿಂದ ಕಾಣುತ್ತಾ ಬಂದಿದ್ದಾರೆ. ನಿಮ್ಮ ಮತ್ತು ಜನಾರ್ದನ ಪೂಜಾರಿ ಯವರ ಮೇಲಿರುವ ನಂಬಿಕೆಯೇ ಇನ್ನೂ ಜಿಲ್ಲೆಯಲ್ಲಿ ಮುಸ್ಲಿಮರ ಬಹುಪಾಲು ಮತ ಕಾಂಗ್ರೆಸ್ ಪಾಲಾಗುತ್ತಿರುವುದಕ್ಕೆ ಕಾರಣ.
    ಕಲ್ಲಡ್ಕ ಭಟ್ಟರನ್ಶು ಜೈಲಿಗಟ್ಟುವೆ ಎಂದು ಭರವಸೆ ನೀಡಿದ ಸಿದ್ಧರಾಮಯ್ಯ ರಾಜ್ಯದ ಮುಖ್ಯಮಂತ್ರಿಯಾದರೂ ಕೋಮುಗಲಭೆಗೆ ಪ್ರೇರಕ ಶಕ್ತಿ ಯಂತಿರುವ ಪ್ರಭಾಕರ್ ಭಟ್ಟರಿಗೆ ಜೈಲು ಭಾಗ್ಯ ಒದಗಿಸಲಾಗಿಲ್ಲ ! ಈಗಲೂ  ಭಟ್ಟರು ಮುಸ್ಲಿಮರನ್ನು ಅವಹೇಳನ ಮಾಡುತ್ತಲೇ ಇದ್ಲಾರೆ, ತನ್ನ ನ್ನು ಜೈಲಿಗೆ ಕಳುಹಿಸುವ ವ್ಯಕ್ತಿಯೂ ಇಲ್ಲ, ಶಕ್ತಿ ಯೂ ಇಲ್ಲ ಎಂಬಂತೆ ವಿರಾಜಮಾನವಾಗಿದ್ದಾರೆ.  ಇದರ ಮಧ್ಯೆ ಈಗ ಪಕ್ಷದ ಜಿಲ್ಲೆಯ ಶಾಸಕಿಯೇ ಮುಸ್ಲಿಮ್ ಹೆಸರಿನ ವಿರುದ್ಧ ಬಹಿರಂಗವಾಗಿ ಅಸಹಿಷ್ಣುತೆ ಪ್ರಕಟಿಸಿರುವುದು ಮುಸ್ಲಿಮರನ್ನು ಕಂಗೆಡಿಸಿವೆ.
ಜಿಲ್ಲಾಧಿಕಾರಿಯ ಮುಸ್ಲಿಮ್ ಹೆಸರನ್ನು ಅಳಿಸಿಯೇ ಸಿದ್ಧ ಎನ್ನುವ ಶಕುಂತಳಾ ಶೆಟ್ಟಿ ಕಾಂಗ್ರೆಸ್ ಶಾಸಕಿಯಾಗಿರುವುದು ಕಾಂಗ್ರೆಸ್ ಸಿದ್ಧಾಂತವನ್ನು ಅಣಕಿಸಿದಂತೆ!.
"ನಾನು ಶಾಸಕಿಯಾಗಿರುವ ತನಕ ಪುತ್ತೂರಿನಲ್ಲಿ ಕೋಮುಗಲಭೆಯಾಗಲು ಬಿಡುವುದಿಲ್ಲ " ಎಂಬ ಶಾಸಕಿಯ ಮಾತು ಮುಸ್ಲಿಮರಲ್ಲಿ ಧೈರ್ಯ ತುಂಬುವ ಬದಲು ಭವಿಷ್ಯದ ದಿನಗಳನ್ನು ನೆನೆದು ಆತಂಕದಲ್ಲಿ ಕೆಡವಿವೆ!.  ಕಾಂಗ್ರೆಸ್ ತತ್ವಕ್ಕೆ ಬದ್ಧತೆ ತೋರದಿದ್ದರೆ ಕ್ರಮ ಜರುಗಿಸ ಬೇಕಾದ ಜರೂರತೆಯನ್ನು ಕಾಂಗ್ರೆಸ್ ಸಂವಿಧಾನ ಒತ್ತಿ ಹೇಳುತ್ತದೆ. ಕಾಂಗ್ರೆಸ್ ನ ಒಳಗೂ ಸಂಘ ಪರಿವಾರದ ಆದೇಶ ಪಾಲಿಸುವವರಿದ್ದಾರೆ ಎಂಬ ಕುಹಕದ ಮಾತನ್ನು ಸತ್ಯವಾಗಿಸಿದ ಶಕುಂತಳಾ ಶೆಟ್ಟಿಯ ಬಹಿರಂಗ ಹೇಳಿಕೆ ಜಿಲ್ಲೆಯ ಮುಸ್ಲಿಮರಲ್ಲಿ ಮನೆ ಮಾಡಿರುವ ಅಭದ್ರತೆ ಮತ್ತು ಅಪನಂಬಿಕೆಯನ್ನು ಇಮ್ಮಡಿಗೊಳಿಸಿರುವ ಈ ದಿನಗಳಲ್ಲಿ ಸಮಯೋಚಿತವಾಗಿ ಸ್ಪಂದಿಸಿ ಜಿಲ್ಲೆಯ ಸಾಮರಸ್ಯವನ್ನು ಕಾಪಾಡುವ ಸಾಮರ್ಥ್ಯ ಶುದ್ಧ ಜಾತ್ಯಾತೀತ ಮನಸ್ಸುಳ್ಳ ತಮಗಿದೆ.
ದಯವಿಟ್ಟು ಕಾಃಗ್ರೇಸ್ ತತ್ವಕ್ಕೆ ಅಪಚಾರ ಎಸಗಿದ ಶಕುಂತಳಾ ಶೆಟ್ಟಿ ಯ ನಿಲುವಿಗೆ ಕಾರಣ ಕೇಳಿ ಎಂದು ವಿನಂತಿಸಿ ಕೊಳ್ಳುವೆ.
         ಇತೀ, ನಿಮ್ಮವ.
           ಫಾರೂಕ್ ಉಳ್ಳಾಲ್.

ಉಳ್ಳಾಲ ನಗರಸಭೆಯ ಕಾಂಗ್ರೆಸ್ ಸದಸ್ಯ ಹಾಗು ಜಿಲ್ಲಾ ಕಾಂಗ್ರೆಸ್ ವಕ್ತಾರ 

share
ವಾರ್ತಾಭಾರತಿ
ವಾರ್ತಾಭಾರತಿ
Next Story
X