Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಕರಾವಳಿ
  3. ಚುಟುಕು ಸುದ್ದಿಗಳು

ಚುಟುಕು ಸುದ್ದಿಗಳು

ವಾರ್ತಾಭಾರತಿವಾರ್ತಾಭಾರತಿ17 March 2016 11:43 PM IST
share

ಮಣಿಪಾಲ: ಬೇಸಿಗೆ ಕ್ರಿಕೆಟ್ ತರಬೇತಿ ಶಿಬಿರ

ಮಣಿಪಾಲ, ಮಾ.17: ಉಡುಪಿ ಜಿಲ್ಲಾ ಕ್ರಿಕೆಟ್ ಸಂಸ್ಥೆಯು ಮಣಿಪಾಲ ವಿವಿ ಹಾಗೂ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ ಸಹಕಾರದೊಂದಿಗೆ ಮಣಿಪಾಲ ವಿವಿ ಮೈದಾನದಲ್ಲಿ 6ರಿಂದ 19 ವರ್ಷ ವಯೋಮಿತಿಯೊಳಗಿನ ಬಾಲಕ ಮತ್ತು ಬಾಲಕಿಯರಿಗೆ ಎ.1ರಿಂದ ಕ್ರಿಕೆಟ್ ತರಬೇತಿ ಶಿಬಿರವನ್ನು ಅಯೋಜಿಸಿದೆ.
   
ಈ ಶಿಬಿರದಲ್ಲಿ ಪ್ರಥಮ ದರ್ಜೆ ಕ್ರಿಕೆಟ್ ಆಟಗಾರ ರೈಲ್ವೇಸ್ ರಣಜಿ ಟ್ರೋಫಿ ಕ್ರಿಕೆಟ್ ತಂಡದ ಮಾಜಿ ನಾಯಕ ಪ್ರಕಾಶ್ ಕರ್ಕೇರ ಮತ್ತಿತರ ನುರಿತ ಕ್ರಿಕೆಟಿಗರು ತರಬೇತಿ ನೀಡಲಿದ್ದಾರೆ ಎಂದು ಉಡುಪಿ ಜಿಲ್ಲಾ ಕ್ರಿಕೆಟ್ ಸಂಸ್ಥೆಯ ಅಧ್ಯಕ್ಷ ಡಾ.ಕೃಷ್ಣಪ್ರಸಾದ್ ತಿಳಿಸಿದ್ದಾರೆ. ಹೆಚ್ಚಿನ ವಿವರಗಳಿಗೆ ಶಿಬಿರ ಸಂಯೋಜಕ ಸಂತೋಷ್‌ಕುಮಾರ್ (ಮೊ.ಸಂ.9844625552), ದೀಪಕ್ ಯು. (ಮೊ.ಸಂ.9448327833) ಇವರನ್ನು ಸಂಪರ್ಕಿಸುವಂತೆ ಡಾ.ಪ್ರಸಾದ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ಗ್ರಾಮೀಣ ಕೌಶಲ್ಯ ಯೋಜನೆ ತರಬೇತಿಗೆ ಅರ್ಜಿ ಆಹ್ವಾನ
ಬ್ರಹ್ಮಾವರ, ಮಾ.17: ಬ್ರಹ್ಮಾವರದ ಕ್ರಾಸ್‌ಲ್ಯಾಂಡ್ ಕಾಲೇಜಿನಲ್ಲಿ ನಡೆಯುತ್ತಿರುವ ದೀನ್ ದಯಾಳ್ ಉಪಾಧ್ಯಾಯ ಗ್ರಾಮೀಣ್ ಕೌಶಲ್ಯ ಯೋಜನೆಯಡಿಯಲ್ಲಿ ಗ್ರಾಮೀಣ ಭಾಗದ ಯುವಕ/ಯುವತಿಯರಿಗೆ ಉದ್ಯೋಗ ಆಧಾರಿತ ಉಚಿತ ಕೌಶಲ್ಯಾಭಿವೃದ್ಧಿ ತರಬೇತಿ ಕಾರ್ಯಕ್ರಮಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಮೂರು ತಿಂಗಳು ನಡೆಯುವ ಉಚಿತ ತರಬೇತಿ ಕಾರ್ಯಕ್ರಮದಲ್ಲಿ ಡಾಟಾ ಎಂಟ್ರಿ ಎಂ.ಎಸ್.ಆಫೀಸ್, ಹಾಸ್ಪಿಟಾಲಿಟಿ ರಿಸೆಪ್ಸನ್, ಕಚೇರಿ ಸಹಾಯಕ, ಸೆಕ್ಯುರಿಟಿ ಗಾರ್ಡ್ ಮುಂತಾದ ವಿಷಯಗಳ ಬಗ್ಗೆ ಮಾಹಿತಿ, ತರಬೇತಿಯನ್ನು ನೀಡಲಾಗುತ್ತದೆ. ಕನಿಷ್ಠ 10ನೆ ತರಗತಿ ತೇರ್ಗಡೆ ಹೊಂದಿದ 18ರಿಂದ 35 ವರ್ಷದ ಒಳಗಿನ ಯುವಕ ಯುವತಿಯರು ಅರ್ಜಿ ಸಲ್ಲಿಸಬಹುದು. ಎಸ್‌ಸಿ/ಎಸ್‌ಟಿ, ಮಹಿಳೆಯರು ಮತ್ತು ಅಲ್ಪಸಂಖ್ಯಾತ ವರ್ಗದವರಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ. ಆಸಕ್ತರು ಮಾ.30ರೊಳಗೆ ಅರ್ಜಿ ಸಲ್ಲಿಸಬಹುದು. ಮಾಹಿತಿಗೆ ದೂ.ಸಂ.: 9480230556, 0820-2561440 ಸಂಪರ್ಕಿಸುವಂತೆ ಪ್ರಕಟನೆ ತಿಳಿಸಿದೆ.

ಮಾ. 21ರಂದು ಬಿಲ್ಲವ ಸಮಾಜದ ಸದಸ್ಯರಿಗೆ ಸನ್ಮಾನ
ಬಂಟ್ವಾಳ, ಮಾ. 17: ತಾಲೂಕಿನ ಬಿಲ್ಲವ ಸಮಾಜ ಸೇವಾ ಸಮಾಜ ಸಂಘದ ವತಿಯಿಂದ ತಾಲೂಕು ವ್ಯಾಪ್ತಿಯ ಜಿಪಂ, ತಾಪಂ ಕ್ಷೇತ್ರಗಳಲ್ಲಿ ವಿಜೇತ ಬಿಲ್ಲವ ಸಮಾಜದ ಸದಸ್ಯರಿಗೆ ಸನ್ಮಾನ ಕಾರ್ಯಕ್ರಮ ಮಾ.21ರಂದು ಗಾಣದಪಡ್ಪು ಬ್ರಹ್ಮಶ್ರೀ ನಾರಾಯಣ ಗುರುಮಂದಿರ ಸಭಾಂಗಣದಲ್ಲಿ ಜರಗಲಿದೆ ಎಂದು ಸಂಘದ ಪ್ರಧಾನ ಕಾರ್ಯದರ್ಶಿ ಬೇಬಿ ಕುಂದರ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ಮಾ.20: ಸಾಲೆತ್ತೂರಿನಲ್ಲಿ ಬೊಲ್ಪುದೈಸಿರೊ ಕಾರ್ಯಕ್ರಮ
ವಿಟ್ಲ, ಮಾ.17: ಮಂಚಿ-ಕೊಳ್ನಾಡು ಬೊಲ್ಪುಕಲಾ ತಂಡದ 19ನೆ ವಾರ್ಷಿಕೋತ್ಸವದ ಅಂಗವಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಬೊಲ್ಪುದೈಸಿರೊ-2016 ಸೌಹಾರ್ದ ಸಾಂಸ್ಕೃತಿಕ ಸಂಗಮ, ಚತುರ್ಭಾಷಾ ಸಾಂಸ್ಕೃತಿಕ ಕಾರ್ಯಕ್ರಮವು ಮಾ.20ರಂದು ಸಾಲೆತ್ತೂರು ಬಯಲು ರಂಗ ಮಂದಿರಲ್ಲಿ ನಡೆಯಲಿದೆ. ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಕರ್ನಾಟಕ ಭಕ್ತಿ ವೈಭವ, ಪುತ್ತೂರಿನ ವತ್ಸಲಾ ನಾಯಕ್ ಮತ್ತು ಬಳಗದವರಿಂದ ಕೊಂಕಣಿ ಭಾಷಾ ನೃತ್ಯ ಕಾರ್ಯಕ್ರಮ, ಜಿಲ್ಲೆಯ ವಿವಿಧ ಶಾಲಾ ಮಕ್ಕಳಿಂದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮ, ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡಮಿಯಿಂದ ದಫ್ ಪ್ರದರ್ಶನ, ಜೂನಿಯರ್ ರಾಜ್‌ಕುಮಾರ್ ಖ್ಯಾತಿಯ ಜಗದೀಶ್ ಶಿವಪುರ ಮತ್ತು ಬಳಗದವರಿಂದ ಜಾನಪದ ಲಹರಿ, ಭಾವಗೀತೆ, ಪುತ್ತೂರಿನ ಹಾಸ್ಯ ಕಲಾವಿದರಿಂದ ತೆಲಿಪುಲೆ-ತೆಲಿಪಾಲೆ ಹಾಸ್ಯ ಸಂಜೆ, ಹಾಗೂ ಬೊಲ್ಪುಯಕ್ಷ ಬಳಗ ಮತ್ತು ಜಿಲ್ಲೆಯ ಅತಿಥಿ ಕಲಾವಿದರಿಂದ ‘ಧರ್ಮಸಂಗಮ’ ಎಂಬ ಯಕ್ಷಗಾನ ಕಾರ್ಯಕ್ರಮ ನಡೆಯಲಿದೆ.
ಈ ಸಂದರ್ಭ ಬೆಳ್ತಂಗಡಿ ತಾಲೂಕಿನ ಲಾಯಿಲ ಗ್ರಾಮದ ಯಶೋಧ ವಿ. ಭಂಡಾರಿಗೆ ‘ಬೊಲ್ಪು’ ಕಲಾ ತಂಡದ ಪ್ರತಿಷ್ಠಿತ ಬೊಳ್ಳಿ ಬೊಲ್ಪುಪ್ರಶಸ್ತಿ ಪುರಸ್ಕಾರ ಹಾಗೂ ತಂಡದ ಹಿರಿಯ ಕಲಾವಿದ ವೆಂಕಪ್ಪಪಾಲ್ತಾಜೆಗೆ ಗೌರವ ಸನ್ಮಾನ ನಡೆಯಲಿದೆ ಎಂದು ತಂಡದ ಸಂಚಾಲಕ ಕೊರಗಪ್ಪಶಿಂಗಾರಕೋಡಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

‘ಜಲ್ಸಾ ಸಮ್ಮೇಳನ’: ಸಮಾಲೋಚನಾ ಸಭೆ
ಪುತ್ತೂರು, ಮಾ.17: ಮುದರ್ರಿಸರಾಗಿ ದರ್ಸ್ ಕ್ಷೇತ್ರದಲ್ಲಿ 40 ವರ್ಷಕ್ಕೂ ಹೆಚ್ಚು ಕಾಲ ಧಾರ್ಮಿಕ ಸೇವೆ ಸಲ್ಲಿಸಿದ ಹಿನ್ನೆಲೆಯಲ್ಲಿ ಹಿರಿಯ ವಿದ್ವಾಂಸ ಶೈಖುನಾ ಎಂ.ಎ. ಖಾಸಿಂ ಉಸ್ತಾದ್‌ರಿಗೆ ಪೌರ ಸನ್ಮಾನ ಹಾಗೂ ಕುಂಬಳೆ ಇಮಾಂ ಶಾಫಿ ಅಕಾಡಮಿಯ ‘ಜಲ್ಸಾ’ ಸಮ್ಮೇಳನ ಮೇ 4ರಿಂದ 7ರವರೆಗೆ ಕುಂಬಳೆಯಲ್ಲಿ ಜರಗಲಿದೆ. ಅದರ ಪ್ರಚಾರಾರ್ಥ ಕರ್ನಾಟಕದ ಖಾಸಿಮ್ ಉಸ್ತಾದ್ ಶಿಷ್ಯಂದಿರ ಸಭೆಯು ಪುತ್ತೂರಿನಲ್ಲಿ ಜರಗಿತು. ಸೈಯದ್ ಅನಸ್ ಹಾದಿ ತಂಙಳ್ ಗಂಡಿಬಾಗಿಲು ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಎಸ್.ಬಿ.ಮುಹಮ್ಮದ್ ದಾರಿಮಿ ಪುತ್ತೂರು ಕಾರ್ಯಕ್ರಮ ಉದ್ಘಾಟಿಸಿದರು. ಸಮಾರಂಭದಲ್ಲಿ ಕೆ.ಎಲ್.ಉಮರ್ ದಾರಿಮಿ ಪಟ್ಟೋರಿ, ಮುಫತ್ತಿಸ್ ಉಮರುಲ್ ಫಾರೂಕ್ ದಾರಿಮಿ, ಕೆ.ವಿ.ಅಬ್ದುಲ್ ಮಜೀದ್ ದಾರಿಮಿ ಪಾಂಡವರಕಲ್ಲು,ಅಶ್ರಫ್ ಹನೀಫಿ ಕರಾಯ, ಅಬ್ದುಲ್ ಮಜೀದ್ ನಿಝಾಮಿ ಕೊಡಂಗಾಯಿ, ಶಮೀರ್ ಫೈಝಿ ಸವಣೂರು, ಬಿ.ಕೆ.ಶಾಫಿ ಫೈಝಿ ಪರಿಯಳ್ತಡ್ಕ ಉಪಸ್ಥಿತರಿದ್ದರು.

ನಾಳೆಯಿಂದ ಬ್ರಹ್ಮಕಲಶ
ಬೆಳ್ತಂಗಡಿ, ಮಾ.17: ಸುಮಾರು 2 ಕೋ.ರೂ. ವೆಚ್ಚದಲ್ಲಿ ನವೀಕರಣಗೊಂಡಿರುವ ಬೆಳಾಲು ಗ್ರಾಮದ ಮಾಯಾ ಮಹಾದೇವ ದೇವಸ್ಥಾನದ ಪ್ರತಿಷ್ಠಾಷ್ಟಬಂಧ ಬ್ರಹ್ಮಕಲಶೋತ್ಸವ ಮಾ.19ರಿಂದ 27ರವರೆಗೆ ನಡೆಯಲಿದೆ ಎಂದು ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಎಚ್. ಪದ್ಮಗೌಡ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ರಾಜಾರಾಮ ಶರ್ಮ ಕೋಲ್ಪಾಡಿ, ಜಿ. ಸೋಮೇಗೌಡ, ದಿನೇಶ್ ಕೋಟ್ಯಾನ್ , ಪ್ರಧಾನ ಕಾರ್ಯದರ್ಶಿ ದಾಮೋದರ ಗೌಡ ಸುರುಳಿ, ಶೇಖರ ಗೌಡ ಕೊಲ್ಲಿಮಾರು, ರುಕ್ಮಯ ಗೌಡ, ಬಾಲಕೃಷ್ಣ ಭಟ್, ದಯಾನಂದ ಪಿ. ಉಪಸ್ಥಿತರಿದ್ದರು.

ಮಂಗಳೂರು: ವಿಶ್ವ ಮಹಿಳಾ ದಿನಾಚರಣೆ
ಮಂಗಳೂರು,ಮಾ.17: ಯೆನೆಪೊಯ ಸ್ಪೆಷಾಲಿಟಿ ಆಸ್ಪತ್ರೆ ಕೊಡಿಯಾಲ್‌ಬೈಲ್ ವತಿಯಿಂದ ವಿಶ್ವ ಮಹಿಳಾ ದಿನಾಚರಣೆಯನ್ನು ಇತ್ತೀಚೆಗೆ ಆಚರಿಸಲಾಯಿತು.
ಯೆನೆಪೊಯ ಸ್ಪೆಷಾಲಿಟಿ ಆಸ್ಪತ್ರೆಯ ನರ್ಸಿಂಗ್ ವಿಭಾಗದ ಅಧೀಕ್ಷಕಿ ಮೇರಿ ವಾಸ್ ಸಮಾಜದಲ್ಲಿ ಮಹಿಳೆಗಿರುವ ಮುಖ್ಯ ಸ್ಥಾನ, ಗೌರವದ ಬಗ್ಗೆ ಮಾತನಾಡಿದರು.ಪರ್ವೀನ್ ತಾಹೀರ್, ಝುಲೇಖಾ ನರ್ಸಿಂಗ್ ಕಾಲೇಜಿನ ಪ್ರಾಂಶುಪಾಲೆ ಡಾ. ಆರ್. ಕನಕವಲ್ಲಿ, ಯೆನೆಪೊಯ ಸ್ಪೆಷಾಲಿಟಿ ಆಸ್ಪತ್ರೆಯ ಹಣಕಾಸು ವ್ಯವಸ್ಥಾಪಕ ಅಹ್ಮದ್ ಬಾವಾ, ಕಾರ್ಡಿಯಾಲಜಿಸ್ಟ್ ಡಾ. ಕೃಷ್ಣ ಶೆಟ್ಟರ್, ಝುಲೇಖಾ ನರ್ಸಿಂಗ್ ಕಾಲೇಜಿನ ಉಪನ್ಯಾಸಕರು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು. ಯೆನೆಪೊಯ ಸ್ಪೆಷಾಲಿಟಿ ಆಸ್ಪತ್ರೆಯ ಮೆಡಿಕಲ್ ರಿಜಿಸ್ಟ್ರಾರ್ ಡಾ. ಸವಿತಾ ಶೆಟ್ಟಿ ಸ್ವಾಗತಿಸಿದರು. ಆಡಳಿತ ಸಂಯೋಜಕಿ ಮಮತಾ ವಂದಿಸಿದರು.

ಜಲ್ಲಿ ಕ್ರಶರ್ ವಿರೋಧಿ ಹೋರಾಟ ಸಮಿತಿ ರಚನೆ
ಹೆಬ್ರಿ, ಮಾ.17: ನಾಲ್ಕೂರು, ಚಾರ, ಕಳ್ತೂರು ಗ್ರಾಮದಲ್ಲಿ ನಡೆಸಲು ಉದ್ದೇಶಿಸಿರುವ ಜಲ್ಲಿ ಕಲ್ಲು ಕ್ರಶರ್ ವಿರುದ್ಧ ಹೋರಾಡಲು 38ನೆ ಕಳ್ತೂರು ಚಾರ, ನಾಲ್ಕೂರು ಗ್ರಾಮಗಳನ್ನು ಒಳಗೊಂಡ ಜಲ್ಲಿ ಕ್ರಶರ್ ವಿರೋಧಿ ಹೋರಾಟ ಸಮಿತಿಯನ್ನು ರಚಿಸಲಾಯಿತು. ಅಧ್ಯಕ್ಷರಾಗಿ ಮುದ್ದು ಪೂಜಾರಿ ಗುಳ್ಪಿ, ಗೌರವಾಧ್ಯಕ್ಷರಾಗಿ ಪ್ರಶಾಂತ್ ಕಾಮತ್, ವಿಶ್ವನಾಥ್ ಸಾಲಿಯಾನ್, ಉಪಾಧ್ಯಕ್ಷರಾಗಿ ಯೋಗೀಶ್ ಗುಳ್ಪಿ, ಉದಯ ನಾಯ್ಕಿ ಕೊಳಗುಡ್ಡೆ, ಕೆಂಪ ನಾಯ್ಕ, ಕಾರ್ಯದರ್ಶಿಯಾಗಿ ರಘು ನಾಯ್ಕ ಕೊಳಗುಡ್ಡೆ, ಗುರುಪ್ರಸಾದ್ ಶೆಟ್ಟಿ, ಜೊತೆ ಕಾರ್ಯದರ್ಶಿಯಾಗಿ ಸುಬ್ರಹ್ಮಣ್ಯ ಕಲ್ಕೂರ್, ಬಾಬಣ್ಣ ನಾಯ್ಕ, ಅಶೋಕ್ ಓಣಿಕಲ್ಲು, ಅಶೋಕ್ ನಾಯ್ಕ, ಸಂಘಟನಾ ಕಾರ್ಯದರ್ಶಿಯಾಗಿ ಪ್ರದೀಪ್ ಶೆಟ್ಟಿ, ಮಿಥುನ್ ಶೆಟ್ಟಿ ಆಯ್ಕೆಯಾಗಿದ್ದಾರೆ.

ಖಿದ್ಮತುಲ್ ಇಸ್ಲಾಮ್ ಅಸೆೋಸಿಯೇಶನ್‌ನ ಮಹಾಸಭೆ
ಮಂಗಳೂರು, ಮಾ. 17: ಕೋಡಿಜಾಲ್‌ನ ಖಿದ್ಮತುಲ್ ಇಸ್ಲಾಮ್ ಅಸೆೋಸಿಯೇಶನ್‌ನ 37ನೆ ವಾರ್ಷಿಕ ಮಹಾಸಭೆಯು ಇತ್ತೀಚೆಗೆ ರಿಫಾಯಿ ಜುಮಾ ಮಸೀದಿ ಸಭಾಂಗಣದಲ್ಲಿ ನಡೆಯಿತು.
 ಮಸೀದಿಯ ಖತೀಬ್ ಹಾಜಿ ಅಬೂಬಕರ್ ಸಖಾಫಿ ದುಆ ನೆರವೇರಿಸಿದರು. ಸದರ್ ಉಸ್ತಾದ್ ಮುಹಮ್ಮದ್ ಸ್ವಾಲಿಹ್ ಸಭೆಯನ್ನು ಉದ್ಘಾಟಿಸಿದರು. ಅಸೆೋಸಿಯೇಶನ್‌ನ ಮಾಜಿ ಅಧ್ಯಕ್ಷ ಅಬ್ದುರ್ರಹ್ಮಾನ್ ಕೆ.ಎಸ್. ಅಧ್ಯಕ್ಷತೆ ವಹಿಸಿ ದ್ದರು. ಗೌರವಾಧ್ಯಕ್ಷ ಅಬ್ದುರ್ರಹ್ಮಾನ್ ಕೆ.ಎಂ., ಉಸ್ಮಾನ್ ಕೆ.ಎಸ್., ಸೂಫಿ ಕುಂಞಿಕೆ.ಎಸ್ ಮತ್ತು ಅಝರ್ ಕೆ.ಎಚ್. ಅನಿಸಿಕೆ ವ್ಯಕ್ತಪಡಿಸಿದರು. ಅಸೋಸಿಯೇಶನ್‌ನ ನೂತನ ಸಾಲಿನ ಅಧ್ಯಕ್ಷ ರಾಗಿ ಅಮೀರ್ ಕೋಡಿಜಾಲ್, ಗೌರವಾಧ್ಯಕ್ಷರಾಗಿ ಅಬ್ದುಲ್ ರಹ್ಮಾನ್ ಕೆ.ಎಂ., ಉಪಾಧ್ಯಕ್ಷರಾಗಿ ಹನೀಫ್ ಬಿ., ಲತೀಫ್ ಕೆ.ಎಂ., ರಝಾಕ್ ಕೆ.ಎಚ್.,ಪ್ರಧಾನ ಕಾರ್ಯದರ್ಶಿಯಾಗಿ ಇಬ್ರಾಹೀಂ ಶರೀಫ್ ಕೆ., ಜತೆ ಕಾರ್ಯದರ್ಶಿ ಯಾಗಿ ಆಸಿಫ್ ಎರ್ಮಾಡಿ, ಶಾಝೀರ್ ಕೊಳ, ಕೋಶಾಧಿಕಾರಿಯಾಗಿ ಮುಹಮ್ಮದ್ ಅಶ್ರಫ್.ಕೆ., ಸಂಘಟನಾ ಕಾರ್ಯದರ್ಶಿಯಾಗಿ ಹಸೈನಾರ್, ಅನ್ವರ್ ಸಾದಾತ್, ನೌಶಾದ್, ಹಕೀಮ್ ವೆಲ್ಡಿಂಗ್, ಸಮಾಜ ಸೇವಾ ಕಾರ್ಯದರ್ಶಿಯಾಗಿ ಅಶ್ರಫ್.ಎಚ್., ಅಶ್ರಫ್ ಶೇಖಬ್ಬ, ಪತ್ರಿಕಾ ಕಾರ್ಯದರ್ಶಿಯಾಗಿ ರಿಯಾಝ್ ಪಾವೂರು ಆಯ್ಕೆಯಾದರು.ಕಾರ್ಯಕಾರಿ ಸದಸ್ಯರಾಗಿ ಸಿದ್ದೀಕ್ ವೈ., ಇಬ್ರಾಹೀಂ ಕೆ.ಎಂ., ನಝೀರ್, ಅಝೀಝ್, ರಫೀಕ್ ಝೆಡ್, ಮನ್ಸೂರ್, ನಾಸೀರ್.ಕೆ.ಎಂ, ಇಮ್ತಿಯಾಝ್ ಕೆ., ಅಝೀಝ್ ಇಸ್ಮಾಯೀಲ್, ಮುನೀರ್, ಶಮೀಮ್, ಅಸ್ಫರ್ ಕೆ.ಎಚ್., ಇರ್ಶಾದ್, ಶಾಹುಲ್ ಹಮೀದ್ ಮತ್ತು ಶಂಶೀರ್ ಸಲಹೆಗಾರರಾಗಿ ಹಾಜಿ ಅಬೂಬಕರ್ ಕೆ.ಎಸ್., ಹಾಜಿ ಉಸ್ಮಾನ್ ಕೊಳ, ಅಬ್ದುರ್ರಹ್ಮಾನ್ ಕೆ.ಎಸ್, ಹಾಜಿ ಮುಹಮ್ಮದ್ ಕೆ.ಐ., ಹಾಜಿ ಹಸನ್‌ಕುಂಞಿ ಕೆ.ಎಂ, ಉಸ್ಮಾನ್ ಕೆ.ಎಸ್, ಹಬೀಬ್ ಕೋಡಿಜಾಲ್, ಮಸೂದ್  ಮತ್ತು ಅಬ್ದುಲ್ಲ ಬೈಲ್ ಆಯ್ಕೆಯಾದರು.

ನಾಳೆಯಿಂದ ವಿಶೇಷ ಮೂರ್ತಿ ಪ್ರತಿಷ್ಠೆ
ಮೂಡುಬಿದಿರೆ, ಮಾ.17: ಇಲ್ಲಿನ ಗುರು ಬಸದಿಯಲ್ಲಿ ಮಾ.19ರಿಂದ 21ರವರೆಗೆ ವಿಶೇಷ ಮೂರ್ತಿ ಪ್ರತಿಷ್ಠೆ ಹಾಗೂ ಪೂಜಾ ಕಾರ್ಯಕ್ರಮ ಜರಗಲಿದೆ ಎಂದು ಜೈನ ಮಠದ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯ ಸ್ವಾಮೀಜಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಪಟ್ನ ಶೆಟ್ಟಿ ಸುದೀಶ್ ಕುಮಾರ್, ಮೊಕ್ತೇಸರ ದಿನೇಶ್ ಆನಡ್ಕ ಉಪಸ್ಥಿತರಿದ್ದರು

share
ವಾರ್ತಾಭಾರತಿ
ವಾರ್ತಾಭಾರತಿ
Next Story
X