ಕುರ್‌ಆನ್ ಎಲ್ಲರಿಗಾಗಿ ಅಭಿಯಾನ

ಉಡುಪಿ ಮಾ. 17: ಅಸೂಯೆ, ದುರಹಂಕಾರ, ಅಪಹಾಸ್ಯ, ಮೂದಲಿಕೆ, ಲೋಭ, ಲಂಚ, ದುರಾಸೆ, ಕಂದಾಚಾರ, ಅಶ್ಲೆಲತೆ, ಅನೈತಿಕತೆ, ವ್ಯಭಿಚಾರ, ಜೂಜಾಟ, ಶರಾಬು ಎಲ್ಲ ಬಗೆಯ ಸಾಮಾಜಿಕ ಅಶಾಂತಿಗಳಿಗೆ ಕಾರಣ ವಾಗುವ ಭೌತಿಕತೆಗಳನ್ನು ಅಳಿಸುವ ಮಾರ್ಗವನ್ನು ಕುರ್‌ಆನ್ ತೋರಿಸುತ್ತದೆ ಎಂದು ಜಮಾಅತೆ ಇಸ್ಲಾಮಿ ಮಂಗ ಳೂರು ನಗರ ಶಾಖೆಯ ಅಧ್ಯಕ್ಷ ಸಈದ್ ಇಸ್ಮಾಯೀಲ್ ಹೇಳಿದ್ದಾರೆ.
ಜಮಾಅತೆ ಇಸ್ಲಾಮಿ ಹಿಂದ್ ವತಿಯಿಂದ ಕುರ್‌ಆನ್ ಎಲ್ಲರಿಗಾಗಿ ಅಭಿಯಾನದ ಪ್ರಯುಕ್ತ ಇತ್ತೀಚೆಗೆ ಕಾಪು ಜೇಸಿಐ ಸಭಾಂಗಣದಲ್ಲಿ ಆಯೋಜಿ ಸಲಾದ ಗಣ್ಯರ ಸಭೆಯನ್ನುದ್ದೇಶಿಸಿ ಅವರು ಮಾತನಾಡುತಿದ್ದರು. ನಿವೃತ್ತ ಸರಕಾರಿ ಅಧಿಕಾರಿ ನಿತ್ಯಾನಂದ ಕಾಮತ್, ಕಂಬದಗುಡ್ಡೆ ಮಸೀದಿಯ ಇಮಾಮ್ ವೌಲಾನಾ ಫರ್ವೇಝ್ ಆಲಮ್ ನದ್ವಿ, ಜಮೀಯತುಲ್ ಲಾಹ್ ಉಡುಪಿ ಅಧ್ಯಕ್ಷ ಶಬೀಹ್ ಖಾಝಿ, ನಿವೃತ್ತ ಶಿಕ್ಷಕ ಶಿವಣ್ಣ ಅಂಚನ್, ಮಲ್ಲಾರ್ ಗ್ರಾಪಂ ಮಾಜಿ ಉಪಾಧ್ಯಕ್ಷೆ ಮೋಹಿನಿ ಶೆಟ್ಟಿ ಉಪಸ್ಥಿತರಿದ್ದರು. ಅನ್ವರ್ ಅಲಿ ಕಾಪು ವಂದಿಸಿದರು.
Next Story





