ಸಾರ್ವಜನಿಕ ಕೊಳವೆ ಬಾವಿ ಉದ್ಘಾಟನಾ ಕಾರ್ಯಕ್ರಮ

ಉಳ್ಳಾಲ, ಮಾ.17: ಜಮಾಅತೆ ಇಸ್ಲಾಮಿ ಹಿಂದ್ ಸಮಾಜ ಸೇವಾ ಘಟಕ ಉಳ್ಳಾಲ ವತಿಯಿಂದ ಕಂಬ್ಲ ಪದವು ಸೈಟ್‌ನಲ್ಲಿ ಸಾರ್ವಜನಿಕ ಕೊಳವೆ ಬಾವಿಯನ್ನು ಪಜೀರ್ ರಹ್ಮಾನಿಯ ಮದ್ರಸದ ಅಧ್ಯಾಪಕ ಇಬ್ರಾಹೀಂ ದಾರಿಮಿ ಉದ್ಘಾಟಿಸಿದರು. ಹೂಡೆಯ ಸ್ವಾಲಿಹಾತ್ ಸಮೂಹ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಅಕ್ಬರಲಿ ಮಂಗಳೂರು ಅಧ್ಯಕ್ಷತೆ ವಹಿಸಿದ್ದರು. ಗ್ರಾಪಂ ಅಧ್ಯಕ್ಷ ಸೀತಾರಾಮ ಶೆಟ್ಟಿ, ಮಾಜಿ ಅಧ್ಯಕ್ಷ ಇಮ್ತಿಯಾಝ್, ಗ್ರಾಪಂ ಸದಸ್ಯರಾದ ಮುಹಮ್ಮದ್ ರಫೀಕ್, ಶೇಖರ ಬೀಜಗುರಿ, ಮಸೀ ದಿಯ ಸದಸ್ಯ ಉಮರ್ ಪಜೀರ್, ಜಮಾಅತೆ ಇಸ್ಲಾಮಿ ಹಿಂದ್ ಉಳ್ಳಾಲ ಘಟಕದ ಅಧ್ಯಕ್ಷ ಎ.ಎಚ್.ಮಹ್ಮೂದ್, ಸಮಾಜ ಸೇವಾ ಘಟಕದ ಸಂಚಾಲಕ ಯು.ಎನ್. ಅಬ್ದುರ್ರಹ್ಮಾನ್, ಸಮಾಜ ಸೇವಕರಾದ ಇಕ್ಬಾ, ಸಿದ್ದೀಕ್ ಉಪಸ್ಥಿ ತರಿದ್ದರು. ಮುಹಮ್ಮದ್ ಇಸ್ಹಾಕ್ ಕಲ್ಲಾಪು ಪ್ರಾಸ್ತಾವಿಕವಾಗಿ ಮಾತನಾಡಿದರು.
Next Story





