ಯಾರು ಹೊಣೆ..?
ಮಾನ್ಯರೆ,
ಬೆಂಗಳೂರಿಗರ ಪಾಲಿಗೆ ‘ಬಿಎಂಟಿಸಿ ಬಸ್’ ಪದೇ ಪದೇ ಯಮನಾಗಿ ಕಾಡುತ್ತಿದೆ. ಇಂದು ನಿನ್ನೆಯಿಂದಲ್ಲ, ಅನೇಕ ವರ್ಷಗಳಿಂದ ಬಿಎಂಟಿಸಿ ಬಸ್ ಚಾಲಕರ ನಿರ್ಲಕ್ಷ್ಯಕ್ಕೆ ಅನೇಕ ಜೀವಗಳು ಬಲಿಯಾಗುತ್ತಿವೆ. ಮತ್ತೆ ಮೊನ್ನೆ ಯಶವಂತಪುರದಲ್ಲಿ ಪಾದಚಾರಿ ಬಾಲಕಿ ಬಲಿಯಾದರೆ, ಶಿವಾಜಿನಗರದಲ್ಲಿ ಕಸ ಗುಡಿಸುವಾಗ ಅಜ್ಜಿ ಬಲಿಯಾಗಿದ್ದಾರೆ.
ಮೊದಲೇ ಟ್ರಾಫಿಕ್‌ಜಾಮ್‌ನಿಂದ ನರಳುತ್ತಿರುವ ಬೆಂಗಳೂರಿಗರು ಬಿಎಂಟಿಸಿ ಬಸ್‌ನಲ್ಲಿ ಸಂಚರಿಸಲು ಇದೀಗ ಹೆದರುವಂತಾಗಿದೆ. ಕೆಲ ಕಡೆಗಳಲ್ಲಿ ನಿಧಾನಗತಿಯಲ್ಲಿ ಬಸ್‌ಗಳು ಸಂಚರಿಸುತ್ತದೆ. ಆದರೆ ಫ್ಲೇ ಓವರ್‌ನಂತಹ ಸ್ಥಳಗಳಲ್ಲಿ ಬಿಎಂಟಿಸಿ ಬಸ್‌ಗಳ ಓಡಾಟ ವೇಗವಾಗಿರುತ್ತವೆ. ಯಾರದ್ದೋ ನಿರ್ಲಕ್ಷ್ಯಕ್ಕೆ ಯಾರೋ ಬಲಿಯಾಗು ತ್ತಿದ್ದಾರೆ. ಆದರೆ ಬಿಎಂಟಿಸಿ ಮಾತ್ರ ಸೂಕ್ತ ಕ್ರಮ ತೆಗೆದುಕೊಳ್ಳುತ್ತಿಲ್ಲ. ಕೂಡಲೇ ಇಂತಹ ದುರ್ಘಟನೆಗಳು ಆದರೆ ಅದಕ್ಕೆ ಕಾರಣರಾದವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲು ಸೂಕ್ತ ವ್ಯವಸ್ಥೆ ಮಾಡಬೇಕಾಗಿದೆ. ಈ ಮೂಲಕ ಜೀವಗಳನ್ನು ಕಾಪಾಡುವ ಪ್ರಯತ್ನ ಬಿಎಂಟಿಸಿ ಮಾಡಬೇಕಾಗಿದೆ.
- ಶಂಶೀರ್ ಬುಡೋಳಿ, ಬೆಂಗಳೂರು





