ಬಡಾಜೆ ಶಾಲೆಯ ಅಡುಗೆ ಕೋಣೆ ಉದ್ಘಾಟನೆ
.jpg)
ಮಂಜೇಶ್ವರ, ಮಾ.17: ಬಡಾಜೆ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ನೂತನವಾಗಿ ನಿರ್ಮಿಸಲಾದ ಅಡುಗೆ ಕೋಣೆಯ ಉದ್ಘಾಟನೆ ಹಾಗೂ ಶಾಲಾ ವಾರ್ಷಿಕೋತ್ಸವ ಇತ್ತೀಚೆಗೆ ನಡೆಯಿತು. ಮಂಜೇಶ್ವರ ಗ್ರಾಪಂ ಅಧ್ಯಕ್ಷ ಅಬ್ದುಲ್ ಅಝೀಝ್ ಹಾಜಿ ನೂತನ ಅಡುಗೆ ಕೋಣೆಯನ್ನು ಉದ್ಘಾಟಿಸಿದರು. ಶಾಲಾ ವಾರ್ಷಿಕೋತ್ಸವ ಸಮಾರಂಭವನ್ನು ಕಾಸರಗೋಡು ಜಿಪಂ ಸ್ಥಾಯಿ ಸಮಿತಿ ಅಧ್ಯಕ್ಷ ಹರ್ಷಾದ್ ವರ್ಕಾಡಿ ಉದ್ಘಾ ಟಿಸಿದರು. ಸಮಾರಂಭದಲ್ಲಿ ಉಪ ಜಿಲ್ಲಾ ವಿದ್ಯಾಧಿಕಾರಿ ಎನ್.ನಂದಿಕೇಶನ್, ಪತ್ರಕರ್ತ ಆರಿಫ್ ಮಚ್ಚಂಪಾಡಿ , ವಿಜಯಕುಮಾರ್, ಗ್ರಾಪಂ ಸದಸ್ಯರಾದ ಬೇಬಿಲತಾ, ಇಬ್ರಾಹೀಂ ಪೈಝಲ್, ಬಶೀರ್ ಕನಿಲ, ಮತ್ತು ರಾಮಚಂದ್ರ, ಪಿಟಿಎ ಅಧ್ಯಕ್ಷ ಯೂಸುಫ್ ಜಮಾಲ್, ಯಾದವ ಬಡಾಜೆ, ಮೊಯ್ದಿನ್ ಕುಂಞಿ ಹಾಜಿ, ರಂಗಯ್ಯ, ಬಶೀರ್ ಬಡಾಜೆ ಉಪಸ್ಥಿತರಿದ್ದರು. ಶಾಲಾ ಮುಖ್ಯ ಶಿಕ್ಷಕ ಭಾಸ್ಕರ ಶೆಟ್ಟಿಗಾರ್ ವರದಿ ವಾಚಿಸಿದರು. ಮಮತಾ ಟೀಚರ್ ಸ್ವಾಗತಿಸಿದರು. ಶೈಲಶ್ರೀ ಟೀಚರ್ ವಂದಿಸಿದರು. ಶಾಲಾ ಶಿಕ್ಷಕ ಅಶೋಕ್ ಕೊಡ್ಲಮೊಗರು ಕಾರ್ಯಕ್ರಮ ನಿರೂಪಿಸಿದರು.
Next Story





