ಸುಳ್ಯ: ಕಾನೂನು ಸಾಕ್ಷರತಾ ರಥಕ್ಕೆ ಚಾಲನೆ

ಸುಳ್ಯ, ಮಾ.17: ಸುಳ್ಯ ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ, ಲಯನ್ಸ್ ಮತ್ತು ಲಯನೆಸ್ ಕ್ಲಬ್, ಕಂದಾಯ ಇಲಾಖೆ, ಪೊಲೀಸ್ ಇಲಾಖೆ, ಶಿಕ್ಷಣ ಇಲಾಖೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಆರೋಗ್ಯ ಇಲಾಖೆ, ತಾಪಂ ಮತ್ತು ಕಾರ್ಮಿಕ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ ಸಂಚಾರಿ ನ್ಯಾಯಾಲಯ ಹಾಗೂ ಕಾನೂನು ಸಾಕ್ಷರತಾ ರಥಕ್ಕೆ ಶನಿವಾರ ಸುಳ್ಯ ನ್ಯಾಯಾಲಯದ ಆವರಣದಲ್ಲಿ ಚಾಲನೆ ನೀಡಲಾಯಿತು.
ಸಿವಿಲ್ ನ್ಯಾಯಾಧೀಶ, ಪ್ರಥಮ ದರ್ಜೆ ನ್ಯಾ. ದಂಡಾಧಿಕಾರಿ ಹಾಗೂ ಸದಸ್ಯ ಕಾರ್ಯದರ್ಶಿ ಶರವಣನ್ ಎಸ್. ಸಾಕ್ಷರತಾ ರಥಕ್ಕೆ ಚಾಲನೆ ನೀಡಿ ಅದಾಲತ್ ನಡೆಸಿಕೊಟ್ಟರು.
ತಹಶೀಲ್ದಾರ್ ಬಿ.ಎಸ್.ಪುಟ್ಟ ಶೆಟ್ಟಿ, ಸುಳ್ಯ ಎಸೈ ಚಂದ್ರಶೇಖರ, ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಎಸ್.ಕೆಂಪಲಿಂಗಪ್ಪ, ವಕೀಲರ ಸಂಘದ ಅಧ್ಯಕ್ಷ ಮತ್ತು ಕಾನೂನು ಅರಿವು ಲಯನ್ಸ್ ಜಿಲ್ಲಾ ಸಂಯೋಜಕ ನಳಿನ್‌ಕುಮಾರ್ ಕೋಡ್ತು ಗುಳಿ, ಕಾನೂನು ಅರಿವು ಲಯನೆಸ್ ಜಿಲ್ಲಾಧ್ಯಕ್ಷೆ ಪ್ರಮೀಳಾ ನಳಿನ್‌ಕುಮಾರ್, ನ್ಯಾಯವಾದಿಗಳಾದ ಬಿ.ವೆಂಕಪ್ಪಗೌಡ, ಕೆ.ನಾರಾಯಣ, ಎಂ.ವೆಂಕಪ್ಪಗೌಡ, ಭಾಸ್ಕರ ರಾವ್, ಹರೀಶ್ ಬೂಡುಪನ್ನೆ, ಲೋಲಾಕ್ಷಿ, ನಾರಾಯಣ ಜಟ್ಟಿಪಳ್ಳ, ಸಿ.ಕೆ.ನಾಗೇಶ್, ಶ್ರೀಹರಿ ಕುಕ್ಕುಡೇಲು, ರವೀಂದ್ರನಾಥ ರೈ ಭಾಗವಹಿಸಿದ್ದರು.







