ಉವೈಸಿಗೆ ಹೆದರಿ ಸರಕಾರ ಅವರ ಲಕ್ನೋ ರ್ಯಾಲಿಯನ್ನು ನಿಷೇಧಿಸಿದೆ: ಶೌಕತ್ ಅಲಿ

ಲಕ್ನೊ, ಮಾರ್ಚ್.18: ತನ್ನ ಹೇಳಿಕೆಗಳಿಂದ ವಿವಾದಾಸ್ಪದ ವ್ಯಕ್ತಿಯಾಗಿ ಪರಿವರ್ತನೆಗೊಂಡಿರುವ ಆಲ್ ಇಂಡಿಯಾ ಮಜ್ಲಿಸೆ ಇತ್ತಿಹಾದುಲ್ ಮುಸ್ಲಿಮೀನ್ ಇದರ ಪ್ರಮುಖ ಅಸದುದ್ದೀನ್ ಉವೈಸಿ ಅವರ ಗುರುವಾರದ ರ್ಯಾಲಿಗೆ ಲಕ್ನೋ ಜಿಲ್ಲಾಡಳಿತ ಅನುಮತಿ ನೀಡಿರಲಿಲ್ಲ. ಈ ಕುರಿತು ಎಮ್‌ಐಎಮ್ ಉತ್ತರಪ್ರದೇಶ ರಾಜ್ಯ ಘಟಕವು ಸರಕಾರದ ನಿಲುವನ್ನು ತೀವ್ರವಾಗಿ ಟೀಕಿಸಿದ್ದು ಎಸ್ಪಿ ಸರಕಾರ ಉವೈಸಿಗೆ ಹೆದರುತ್ತಿದೆ ಎಂದು ವಿಶ್ಲೇಷಿಸಿದೆ.
ಎಐಎಂಐರ ಪ್ರಾಂತೀಯ ಅಧ್ಯಕ್ಷ ಶೌಕತ್ ಅಲಿ ಜಿಲ್ಲಾ ಆಡಳಿತ ರ್ಯಾಲಿ ಮತ್ತು ರೋಡ್ ಶೋ ನಡೆಸಲು ಅನುಮತಿ ದೊರೆಯದ್ದರಿಂದ ಉವೈಸಿಯ ಎರಡು ದಿವಸಗಳ ಭೇಟಿಯನ್ನೂ ರದ್ದುಗೊಳಿಸಲಾಗಿತ್ತು. ಸರಕಾರದ ಈ ಕೃತ್ಯ ಖಂಡನೀಯವಾಗಿದೆ ಎಂದು ಹೇಳಿದ್ದಾರೆ. ಉವೈಸಿ ಎರಡು ದಿನಗಳಲ್ಲಿ ಬಾರಬಂಕಿ, ಪೈಝಾಬಾದ್ ಮತ್ತು ಆಝಂಗಡಕ್ಕೆ ಭೇಟಿ ನೀಡಲಿದ್ದರು. ಸರಕಾರಕ್ಕೆ ಉವೈಸಿಯನ್ನು ಎದುರಿಸುವ ಶಕ್ತಿ ಇಲ್ಲ ಎಂದು ಅಲಿ ಆರೋಪಿಸಿದ್ದಾರೆ. ಉತ್ತರ ಪ್ರದೇಶದಲ್ಲಿ ತುರ್ತು ಪರಿಸ್ಥಿತಿ ಇದೆ. ಜನರಿಂದ ಆಯ್ಕೆಯಾದ ಒಬ್ಬ ಸಂಸದ ಮತ್ತು ಪಕ್ಷದ ಅಧ್ಯಕ್ಷನನ್ನು ಪ್ರದೇಶಕ್ಕೆ ಬರದಂತೆ ಆಗಾಗ ತಡೆಯಲಾಗುತ್ತಿದೆ. ಪ್ರಜಾಪ್ರಭುತ್ವದ ಕೊರಳು ಕೊಯ್ಯಲಾಗಿದೆ. ಸರಕಾರಕಳೆದ ನಾಲ್ಕುವರ್ಷಗಳಿಂದ ಮುಸ್ಲಿಮರಿಗೆ ನೀಡಿದ ಭರವಸೆಯನ್ನು ಈಡೇರಿಸಿಲ್ಲ. ಆದ್ದರಿಂದ ದಲಿತರು ಮತ್ತು ಮುಸ್ಲಿಮರು ಎಂಐಎಂಐಎಂನೆಡೆಗೆ ಬರುತ್ತಿದ್ದಾರೆ.ಮಾತ್ರವಲ್ಲ ಹಿಂದುಳಿದ ವರ್ಗಗಳಜನರೂ ಪಕ್ಷ ಸೇರುತ್ತಿದ್ದಾರೆ. ಇದು ಸರಕಾರ ಉವೈಸಿಗೆ ಹೆದರಲು ಕಾರಣವೆಂದು ಅಲಿ ಹೇಳಿದ್ದಾರೆ.
ಐಎಂಐಎಂನ ಸ್ಥಾನೀಯ ಘಟಕದ ವತಿಯಿಂದ ಲಕ್ನೊದ ರಿಫಾಹ್-ಎ-ಆಮ್ ಕ್ಲಬ್ ಮೈದಾನದಲ್ಲಿ ಹಾಲತ್ ಎ ಹಾಜರಾ ಎಂಬ ಕಾರ್ಯಕ್ರಮ ಗುರುವಾರ ನಡೆಯುವುದಿತ್ತು. ಇದರಲ್ಲಿ ಉವೈಸಿ ಭಾಗವಹಿಬೇಕಿತ್ತು. ಆದರೆ ಅಪರ ಜಿಲ್ಲಾಧಿಕಾರಿ ಜೈಶಂಕರ್ ದುಬೆ ಈ ಕಾರ್ಯಕ್ರಮಕ್ಕೆ ಅನುಮತಿ ನಿರಕರಿಸಿದ್ದರು.





