ಜಾಟ್ ನಾಯಕರ ಗಡು ಮುಕ್ತಾಯ, ಹರ್ಯಾಣದಲ್ಲಿ ಮೀಸಲಾತಿ ಚಳವಳಿ ಮತ್ತೆ ಭುಗಿಲೇಳುವ ಸಾಧ್ಯತೆ:
ಅರೆಸೇನಾ ಪಡೆಗಳನ್ನು ವಿನ್ಯಾಸ ಗೊಳಿಸಿದ ಸರಕಾರ
.jpg)
ರೋಹಟಕ್, ಮಾರ್ಚ್. 18: ಹರಿಯಾಣ ಸರಕಾರ ಜಾಟ್ ನಾಯಕರನ್ನು ಶುಕ್ರವಾರ ಸಂಜೆ ತಮ್ಮ ಮೀಸಲಾತಿ ಬೇಡಿಕೆಯ ಕುರಿತು ಚರ್ಚೆಗೆ ಬರುವಂತೆ ಕರೆದಿದೆ. ಆದ್ದರಿಂದ ಅಲ್ಲಿವರೆಗೂ ತಮ್ಮ ಆಂದೋಲನವನ್ನು ಪುನರಾರಂಭಿಸುವುದಿಲ್ಲ ಎಂದು ವರದಿಯಾಗಿದೆ. ಇನ್ನೊಂದೆಡೆ ಜಾಟ್ ನಾಯಕರು ಒಂದು ವೇಳೆ ಮಾತುಕತೆ ಮುರಿದುಬಿದ್ದರೆ ಆಂದೋಲನವನ್ನು ಪುನರಾರಂಭಿಸಲಿದ್ದೇವೆಂದು ತಿಳಿಸಿದ್ದಾರೆ. ಇದೆಲ್ಲವನ್ನೂ ಮುಂದಿಟ್ಟು ರೋಹಟಕ್‌ನಲ್ಲಿ ಸುರಕ್ಷಾ ವ್ಯವಸ್ಥೆಯನ್ನು ಬಿಗಿಗೊಳಿಸಲಾಗಿದೆ.
ಹರಿಯಾಣದಲ್ಲಿ ಉದ್ವಿಘ್ನ ಪರಿಸ್ಥಿತಿ ಹಬೆಯಾಡುತ್ತಿರುವುದನ್ನು ಪರಿಗಣಿಸಿ ಸೊನಿಪತ್‌ನಲ್ಲಿ 144 ಸೆಕ್ಷನ್ ಜಾರಿಗೊಳಿಸಲಾಗಿದೆ. ಜಜ್ಜರ್‌ನಲ್ಲಿ, ರೋಹಟಕ್‌ನಲ್ಲಿ ಮತ್ತು ಸೊನಿಪತ್‌ನಲ್ಲಿ ಮೊಬೈಲ್ ಮತ್ತು ಇಂಟರ್‌ನೆಟ್ ಸೇವೆಯನ್ನು ನಿಷೇಧಿಸಲಾಗಿದೆ. ಅಖಿಲ ಭಾರತೀಯ ಜಾಟ್ ಮೀಸಲಾತಿ ಸಂಘರ್ಷ ಸಮಿತಿ ಅಧ್ಯಕ್ಷ ಯಶಪಾಲ್ ಮಲಿಕ್‌ರು ಸರಕಾರ ನಮ್ಮನ್ನು ಚಂಡಿಗಡದಲ್ಲಿ ಚರ್ಚೆ ನಡೆಸಲು ಕರೆದಿದೆ ಎಂದು ತಿಳಿಸಿದ್ದಾರೆ. "ನಮ್ಮ ನಾಯಕರು ಸರಕಾರದ ಆಮಂತ್ರಣ ಪ್ರಕಾರ ಶುಕ್ರವಾರ ಮಧ್ಯಾಹ್ನದ ನಂತರ ಹರಿಯಾಣದ ಮುಖ್ಯ ಕಾರ್ಯದರ್ಶಿ ಮತ್ತು ಪೊಲೀಸ್ ಮಹಾನಿರ್ದೇಶಕರನ್ನು ಭೇಟಿಯಾಗಲಿದ್ದಾರೆ. ಅಲ್ಲಿವರೆಗೂ ನಮ್ಮ ಆಂದೋಲನವನ್ನು ಪ್ರಾರಂಭಿಸುವುದಿಲ್ಲ ಹರಿಯಾಣದ ಅಧಿಕಾರಿಗಳ ಜೊತೆ ಮಾತುಕತೆ ನಡೆಸಿ ಆನಂತರ ಮುಂದಿನ ಕ್ರಮಕೈಗೊಳ್ಳಲಿದ್ದೇವೆ" ಎಂದು ತಿಳಿಸಿದ್ದಾರೆ. ಅನೇಕ ಜಾಟ್ ಸಂಘಟನೆಗಳು ಕಳೆದ ಸೋಮವಾರ ಒಂದು ವೇಳೆ ಮನೋಹರ್ ಲಾಲ್ ಕಟ್ಟರ್ ಸರಕಾರ ಅವರ ಬೇಡಿಕೆ ಈಡೇರಿಸದಿದ್ದರೆ ಮೀಸಲಾತಿ ಆಂದೋಲನವನ್ನು ಮತ್ತೆ ಪ್ರಾರಂಭಿಸಲಿದ್ದೇವೆ ಎಂದು ಬೆದರಿಕೆ ಹಾಕಿದ್ದವು. ಕಳೆದ ತಿಂಗಳು ಈಚಳವಳಿಯ ಕಾರಣದಲ್ಲಿ ಉದ್ಭವಿಸಿದ ಹಿಂಸೆಯಿಂದಾಗಿ ಮೂವತ್ತು ಮಂದಿ ಮೃತರಾಗಿದ್ದರು. ಆದ್ದರಿಂದ ಯಾವುದೇ ಅಪ್ರಿಯ ಘಟನೆ ನಡೆಯದಂತೆ ಪೂರ್ವಭಾವಿ ಸುರಕ್ಷೆಯನ್ನು ಕಲ್ಪಿಸಲಾಗಿದೆ. ಜಾಟ್ ನಾಯಕರು ಸರಕಾರಕ್ಕೆ 72 ಗಂಟೆಗಳ ಡೆಡ್‌ಲೈನ್ ನಿಗದಿ ಪಡಿಸಿದ್ದರು. ಅದು ಗುರುವಾರಕ್ಕೆ ಮುಕ್ತಾಯಗೊಂಡಿದೆ. ಆಂದೋಲನ ಮತ್ತೊಮ್ಮೆ ಭುಗಿಲೇಳುವ ಆತಂಕದೊಂದಿಗೆ ರಾಜ್ಯ ಸರಕಾರ ಸೂಕ್ಷ್ಮ ಜಿಲ್ಲೆಗಳಲ್ಲಿ ಭದ್ರತಾ ವ್ಯವಸ್ಥೆಗಾಗಿ ಅರೆಸೇನಾ ಪಡೆಮತ್ತು ಪೊಲೀಸರನ್ನು ವಿನ್ಯಾಸಿಸಿದೆ.





