ಮೋದಿಗೆ 12 ವರ್ಷ ಆಡಳಿತ ಎಂದು ನಾಸ್ಟ್ರಡಾಮಸ್ ಭವಿಷ್ಯ
ಕೇಂದ್ರ ಸಚಿವ ಕಿರೆನ್ ರೆಜಿಜು

ಹೊಸದಿಲ್ಲಿ , ಮಾ. 18: 450 ವರ್ಷಗಳ ಹಿಂದೆಯೇ ಫ್ರೆಂಚ್ ಕಾಲಜ್ಞಾನಿ ನಾಸ್ಟ್ರಡಾಮಸ್ 2014 ರಿಂದ 2026 ರವರೆಗೆ ನರೇಂದ್ರ ಮೋದಿ ಭಾರತವನ್ನು ಆಳಲಿದ್ದಾರೆ ಎಂದು ಭವಿಷ್ಯ ನುಡಿದಿದ್ದಾರೆ ಎಂದು ಕೇಂದ್ರದ ರಾಜ್ಯ ಗೃಹ ಸಚಿವ ಕಿರೆನ್ ರೆಜಿಜು ಹೇಳಿದ್ದಾರೆ.
ತನ್ನ ಫೇಸ್ ಬುಕ್ ನಲ್ಲಿ " 2014ರಿಂದ 2026 ರವರೆಗೆ ಭಾರತವನ್ನು ಒಬ್ಬ ಒಬ್ಬ ಮಧ್ಯವಯಸ್ಕ ಸೂಪರ್ ಪವರ್ ನಾಯಕ ಆಳಲಿದ್ದು ಮೊದಲು ಜನರು ಆತನನ್ನು ದ್ವೇಷಿಸುತ್ತಾರೆ. ಆದರೆ ಮತ್ತೆ ಆತನ ಮೇಲೆ ಜನರಿಗೆ ಎಷ್ಟು ಪ್ರೀತಿ ಬರುತ್ತದೆ ಎಂದರೆ ಆತ ಇಡೀ ದೇಶದ ಚಿತ್ರಣವನ್ನೇ ಬದಲಾಯಿಸಿಬಿಡುತ್ತಾನೆ . ಆ ನಾಯಕನ ಆಡಳಿತದಲ್ಲಿ ಭಾರತ ಜಾಗತಿಕ ನಾಯಕನಾಗಲಿದ್ದು , ಇತರ ದೇಶಗಳಿಗೂ ಆಶ್ರಯ ನೀಡಲಿದೆ . ಇದನ್ನು 1555 ರಲ್ಲಿ ಹೇಳಲಾಗಿತ್ತು " ಎಂದು ಕಿರೆನ್ ಬರೆದಿದ್ದಾರೆ.
ಕಿರೆನ್ ಅವರ ಫೇಸ್ ಬುಕ್ ಪೋಸ್ಟ್ ಈ ಕೆಳಗಿದೆ :
AMAZING FACTS !!!In Current of Lok SabhaBJP - 283 Seats 2+8+3 = 13NDA - 337 Seats 3+3+7 = 13UPA - 58 Seats ...
Posted by Kiren Rijiju on Thursday, 17 March 2016
Next Story







